ಮೂಡುಬಿದರೆ: ಆಳ್ವಾಸ್ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ ಕುಂದಾಪುರದ ಸಾಕ್ಷಿ (602 ಅಂಕ – 96.32%) ಮತ್ತು ಉಡುಪಿಯ ಲಾವಣ್ಯ (556 ಅಂಕ – 90.56%) ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಲಾವಣ್ಯ ಸಾಕ್ಷಿ
ಈರ್ವರು ವಿದ್ಯಾರ್ಥಿನಿಯರು ಹಿಂದುಳಿದ ಕೊರಗ ಜನಾಂಗದವರಾಗಿದ್ದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕೊರಗ ಜನಾಂಗದವರಿಗಾಗಿಯೇ ಕೊಡಮಾಡುವ ಸಂಪೂರ್ಣ ಉಚಿತ ಶಿಕ್ಷಣ ಯೋಜನೆಯ ಫಲಾನುಭವಿಗಳಾಗಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸಂಪೂರ್ಣ ಉಚಿತವಾಗಿ ಪಡೆದಿದ್ದಾರೆ. ಆಳಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಸಂಪೂರ್ಣ ಉಚಿತ ಶಿಕ್ಷಣ ಯೋಜನೆಯಡಿ ಪದವಿಪೂರ್ವ ವ್ಯಾಸಂಗಕ್ಕೆ ಅವಕಾಶಮಾಡಿಕೊಟ್ಟಿದ್ದಾರೆ. ಇದೇ ರೀತಿಯ ಸಾಧನೆ ಮಾಡಿರುವ ಸಾಕ್ಷಿ ಹಾಗೂ ಸಹೋದರಿ ಸ್ನೇಹ ಈ ಸೌಲಭ್ಯದ ಮೂಲಕ ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಶಿಕ್ಷಣ ಪಡೆದು ಪ್ರಸ್ತುತ ವೈದ್ಯಕೀಯ(ಎಂ.ಬಿ.ಬಿ.ಎಸ್.) ಶಿಕ್ಷಣ ಪಡೆಯುತ್ತಿದ್ದಾರೆ.
