ಕೈಕಂಬ: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪುರ ಮೂಳೂರು ಎಂಬಲ್ಲಿರುವ ಹನುಮ ಬಾಲ ಸಂರಕ್ಷಣಾ ಕೇಂದ್ರದಿಂದ ಬಾಲಕನೋರ್ವ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ರವಿ(14) ಕಳೆದ ಎಪ್ರಿಲ್ ಎರಡರಂದು ರಾತ್ರಿ 8 ಗಂಟೆಯ ನಂತರ ಬಾಲ ಸಂರಕ್ಷಣಾ ಕೇಂದ್ರದಿಂದ ನಾಪತ್ತೆಯಾಗಿದ್ದು, ಎಲ್ಲಾ ಕಡೆ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕನ್ನಡ ಭಾಷೆ ಮಾತಾಡಬಲ್ಲ ರವಿ ಕಪ್ಪು ಮೈಬಣ್ಣ ಹೊಂದಿದ್ದು, ಈತನ ಬಗ್ಗೆ ಮಾಹಿತಿ ಇದ್ದವರು ಬಜ್ಪೆ ಪೊಲೀಸ್ ಠಾಣೆ(0824-2220531) ಅಥವಾ ಪೊಲೀಸ್ ಕಂಟ್ರೋಲ್ ರೂಂ (100) ಸಂಪರ್ಕಿಸುವಂತೆ ಕೋರಲಾಗಿದೆ.
