ಬಂಟ್ವಾಳ: ಊರಿಗೊಂದು ಶಾಲೆ, ಗ್ರಾಮಕ್ಕೊಂದು ಪಂಚಾಯತ್ ಹೇಗೆ ಮುಖುವೋ ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ಸಂಘವು ಅಷ್ಟೇ ಪ್ರಾಮುಖ್ಯವಾಗಿದೆ ಎಂದು ಆರ್.ಎಸ್.ಎಸ್.ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ತಿಳಿಸಿದ್ದಾರೆ.
ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ ಇದರ ಜಂಟಿ ಆಶ್ರಯದಲ್ಲಿ ಕಲ್ಲಡ್ಕದ ಪಂಚವಟಿ ಸಂಕೀರ್ಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆದ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಜನರಿಗೆ ಒಳ್ಳೆಯ ಸಹಕಾರ ಮನೋಭಾವದ ಸೇವೆಯನ್ನು ಒದಗಿಸುವ ಈ ಸಂಘವು ಭವಿಷ್ಯದಲ್ಲಿ ರೈತರ ಹಿತದೃಷ್ಟಿಯಿಂದ ಅಭಿವೃದ್ಧಿ ಸಾಧಿಸಲಿ ಎಂದು ಆಶಿಸಿದರು.

ಮಾಜಿ ಶಾಸಕ ಎ.ರುಕ್ಮಯ ಪೂಜಾರಿಯವರು ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಸದಸ್ಯರಿಗೆ ಪಾಲು ಪತ್ರ ವಿತರಿಸಿ ಈ ಭಾಗದ ಪ್ರತಿಯೊಬ್ಬರು ಸಂಘದಲ್ಲಿ ಸದಸ್ಯರಾಗಿ ವ್ಯವಹಾರ ನಡೆಸುವ ಮೂಲಕ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು. ಸಹಕಾರ ಭಾರತಿಯ ರಾಜ್ಯ ಸಂಚಾಲಕ ಎಸ್.ಆರ್. ಸತೀಶ್ಚಂದ್ರ,ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಜೆನೆಟ್ ರೊಸಾರಿಯೋ ಅಥಿತಿಯಾಗಿ ಭಾಗವಹಿಸಿದ್ದರು.
ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಹರೀಶ್ ಶೆಣೈ, ಬಂಟ್ವಾಳ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಸಂಜೀಔ ನಾಕ್, ಡಾ. ನಿತ್ಯಾನಂದ ಭಕ್ತ, ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕ ಪ್ರಭಾಕರ್ ಸಂಪನ್ಮೂಲ ವ್ಯಕ್ತಿಯಾಗಿ ವಿವಿಧ ವಿಷಯಗಳ ಬಗ್ಗೆ ವಿಚಾರ ಮಂಡಿಸಿದರು.ಸಂಘದ ಅಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ, ಸಭಾಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪಿ ಸುಧಾಕರ ರೈನ ನಿರ್ದೇಶಕರುಗಳಾದ ಗೋಪಾಲ ಕೃಷ್ಣ ಭಟ್, ಪೂವಪ್ಪ ಗೌಡ, ಜಯರಾಮ ರೈ, ಗಿರಿಯಪ್ಪ ಗೌಡ, ಲೋಕಾನಂದ, ಕೊರಗಪ್ಪ ನಾಕ, ಮೃಣಾಲಿನಿ, ಮೀನಾಕ್ಷಿ, ಸಿ.ಇ.ಒ ಸುರೇಶ್ ಕೆ, ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ರತ್ನಾಕರ ಪ್ರಭು, ಕಾರ್ಯದರ್ಶಿ ರವಿನಾಥ ಕೆ ವೇದಿಕೆಯಲ್ಲಿದ್ದರು. ನಿರ್ದೇಶಕ ವೆಂಕಟ್ರಾಯ ಪ್ರಭು ಸ್ವಾಗತಿಸಿ ವಂದಿಸಿದರು. ರಾಜೇಶ್ ಕೊಳಕೀರು ನಿರೂಪಿಸಿದರು.
