ಜಮ್ಮು-ಕಾಶ್ಮೀರ: ಪತನದತ್ತ ಬಿಜೆಪಿ-ಪಿಡಿಪಿ ಮೈತ್ರಿ ಸರಕಾರ
ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ ರಚನೆಯಾಗುತ್ತಿದ್ದಂತೆ ಪ್ರತ್ಯೇಕತಾವಾದಿ ಮುಖಂಡ ಮಸಾರತ್ ಆಲಂನನ್ನು ಬಿಡುಗಡೆಗೊಳಿಸಿರುವ ನಂತರ ಬಿಕ್ಕಟ್ಟು ತೀವ್ರ ಸ್ವರೂಪ ಪೆದುಕೊಂಡಿದೆ. ಈ ಘಟನೆಯ ನಂತರ ಕಾಶ್ಮೀರದಲ್ಲಿ ಐತ್ರಿ ಸರಕಾರ ಪತನದಲ್ಲಿ ಮುಖ ಮಾಡಿದೆ.
ಭಾರತೀಯ ಜನತಾ ಪಕ್ಷದ ಆದ್ಯತೆ ದೇಶದ ಭದ್ರತೆಗೆ ವಿನ:, ಜಮ್ಮು&ಕಾಶ್ಮೀರ ಸರ್ಕಾರದ ಜೊತೆಗಿನ ಮೈತ್ರಿಕೂಟಕ್ಕೆ ಅಲ್ಲ ಎಂಬುದಾಗಿ ತೀವ್ರಗಾಮಿ ಪ್ರತ್ಯೇಕತಾವಾದಿ ಮಸರತ್ ಆಲಂ ಬಿಡುಗಡೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದದ ಕುರಿತಂತೆ ಗೃಹಸಚಿವ ರಾಜ್ ನಾಥ್ ಸಿಂಗ್ ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಸರತ್ ಆಲಂನನ್ನು ಜೈಲಿನಿಂದ ಬಿಡುಗಡೆಗೊಳಸಿರುವ ಬಗ್ಗೆ ಜಮ್ಮು&ಕಾಶ್ಮೀರ ಸರ್ಕಾರ ನೀಡಿರುವ ವರದಿ ತಮಗೆ ಸಮಾಧಾನ ತಂದಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ದೇಶದ ಭದ್ರತೆ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸಿಂಗ್ ಪುನರುಚ್ಚರಿಸಿದರು. ಯಾವುದೇ ಸರ್ಕಾರವಿರಲಿ, ಮೈತ್ರಿಕೂಟ ಅಥವಾ ಮೈತ್ರಿಕೂಟ ಇಲ್ಲದಿರಲಿ. ಅದು ನಮ್ಮ ಆದ್ಯತೆ ಅಲ್ಲ. ನಮ್ಮ ಆದ್ಯತೆ ದೇಶ ಮತ್ತು ಭದ್ರತೆ ಎಂದು ತಿಳಿಸಿದರು.
ಇವರ ಹೇಳಿಕೆಯನ್ನು ಗಮನಿಸುವಾಗ ಮೈತ್ರಿ ಸರಕಾರ ಪತನದ್ತ ಹೆಜ್ಜೆ ಹಾಕುತ್ತಿರುವುದು ಗಮನಕ್ಕೆ ಬರುತ್ತಿದೆ.

