ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ.ರೋಡು ಜಂಕ್ಷನ್ ಬಳಿ ಬಂಟಿಂಗ್ಸ್ ಹಾಗೂ ಬ್ಯಾನರ್ ಕಟ್ಟುತ್ತಿದ್ದಾಗ ಎರಡು ಗುಂಪುಗಳ ನಡುವೆ ಗಲಭೆ ನಡೆದಿದ್ದು ಆ ಬಗ್ಗೆ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು ಅವರಿಂದ ಆರು ಪೆಟ್ರೋಲ್ ಬಾಂಬ್ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳೆಲ್ಲರೂ ಜಿಲ್ಲೆಯಲ್ಲಿ ಶಾಂತಿ ಕದಡಲು ಗಂಭೀರ ಪ್ರಯತ್ನದಲ್ಲಿ ತೊಡಗಿದ್ದಾರೆನ್ನಲಾಗಿದ್ದು ಮುಸ್ಲಿಂ ಸಂಘಟನೆಯೊಂದರ ಸದಸ್ಯರು ಎನ್ನಲಾಗಿದೆ.
ತಲಪಾಡಿ ಕೆ.ಸಿ.ರೋಡ್ ನಿವಾಸಿ ಅಬ್ದುಲ್ ಸತ್ತಾರ್(33), ಕೆ.ಸಿ.ರೋಡು ಗುಡ್ಡೆ ಮನೆಯ ನಿಯಾಜ್(30), ತಲಪಾಡಿ ಬಸ್ ನಿಲ್ದಾಣ ಬಳಿಯ ಅಬ್ದುಲ್ ನಾಸಿರ್(28), ಕೆ.ಸಿ.ನಗರ ನಿವಾಸಿ ಶಬ್ಬೀರ್ ಹಾಗೂ ತಲಪಾಡಿ ಪಿಲಿಕೂರು ಮಸೀದಿ ಬಳಿಯ ಮಹಮ್ಮದ್ ಬಶೀರ್(36)ಬಂಧಿತರು. ಆರೋಪಿಗಳಲ್ಲಿ ಮಹಮ್ಮದ್ ನಾಸಿರ್ ಇಂಜಿನಿಯರ್.

ತಲಪಾಡಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಫೆ. 25ರಂದು ಬಂಟಿಂಗ್ಸ್ ಹಾಕುವಾಗ ರಾತ್ರಿ ಗುಂಪು ಘರ್ಷಣೆ ನಡೆದಿತ್ತು. ಬಂಟಿಂಗ್ಸ್ ಹಾಕುತ್ತಿದ್ದಾಗ ಒಂದು ತಂಡ ಕೆ.ಸಿರೋಡ್ ಜಂಕ್ಷನ್ನಲ್ಲಿ ವಿದ್ಯುತ್ದೀಪ ಆರಿಸಿ ಕಲ್ಲು ಸೋಡಾ ಬಾಟಲಿಯಿಂದ ದಾಳಿ ನಡೆಸಿತ್ತು. ಗಲಭೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದರು. ಹಾಗಿದ್ದರೂ ಅದು ಅಲ್ಲಿಗೇ ನಿಲ್ಲದೆ ಹಿಂದೂ ಸಮಾಜೋತ್ಸವದ
ಹಿನ್ನೆಲೆಯಲ್ಲಿ ಉಳ್ಳಾಲದಾದ್ಯಂತ ಗಲಭೆ ಮತ್ತಷ್ಟು ಸೃಷ್ಟಿಸುವ ನಿಟ್ಟಿನಲ್ಲಿ ಕೆಲವು ಕಿಡಿಗೇಡಿಗಳು ಪ್ರಯತ್ನಿಸಿದ್ದರು.
ಉಳ್ಳಾಲದಲ್ಲಿ ಚಚರ್್ಗೆ ಹಾನಿ, ದೇವಸ್ಥಾನದ ಸ್ವಾಗತ ಕಮಾನು ಮತ್ತು ಬ್ಯಾನರ್ ಹರಿದ ವಿಚಾರ, ಮತ್ತು ಅಂಗಡಿಗಳಿಗೆ ಬೆಂಕಿ ನೀಡಿ ಧರ್ಮ ಸಂಘರ್ಷ ಯತ್ನ ನಡೆದಿತ್ತು. ಹಾಗಾಗಿ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಪ್ರಮುಖ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಅವರಿಂದ ಆರು ಪೆಟ್ರೋಲ್ ಬಾಂಬನ್ನು ವಶಪಡಿಸಿಕೊಂಡಿದ್ದಾರೆ.
ಬಾಕ್ಸ್ಗೆ: ಸಮಾಜದಲ್ಲಿ ಶಾಂತಿ ಕದಡಲು ಸಮಾಜದ್ರೋಹಿ ಶಕ್ತಿಗಳು ಮುಂದಾದಾಗ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಆರೋಪಿಗಳನ್ನು ಶೀಘ್ರಗತಿಯಲ್ಲಿ ಪತ್ತೆಹಚ್ಚುವಲ್ಲಿ ಸಫಲರಾಗಿರುವ ಪೊಲೀಸರಿಗೆ ಅಭಿನಂದನೆಗಳು. ಅದಕ್ಕೆ ಸಹಕರಿಸಿದ ಸ್ಥಳೀಯರಿಗೂ ಅಭಿನಂದನೆ. ಅಂತಹ ದುಷ್ಟ ಶಕ್ತಿಗಳನ್ನು ಪತ್ತೆ ಹಚ್ಚಿ ಶಾಂತಿಯ ವಾತಾವರಣ ನಿಮರ್ಾಣ ಮಾಡಲು ಪೊಲೀಸ್ ಇಲಾಖೆಗೆ ಸ್ಥಳೀಯರು ಶ್ರಮಿಸಬೇಕು, ಮುಂದೆಯೂ ಇಲಾಖೆ ಶಾಂತಿ ಕದಡುವ ಶಕ್ತಿಗಳ ವಿರುದ್ಧ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
– ಸಚಿವ ಯು. ಟಿ. ಖಾದರ್
