ತಿರುಮಲ: ಶ್ರೀಲಂಕ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ ದೇವಳದ ಆಡಳಿತ ಮಂಡಳಿ ತಿರುಪತಿ ತಿಮ್ಮಪ್ಪನ ಸನ್ನಿಧಿಯ ಬಂಗಾರದ ಬಾಗಿಲು ಒಡೆದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಇದೀಗ ಬಾಘಿಲು ಒಡೆದ ತಪ್ಪಿಗೆ ವಿಶೇಷ ಪೂಜೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.

tirumale
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ತಿಮ್ಮಪ್ಪನ ದರ್ಶನಕ್ಕಾಗಿ ಅವರು ಆಗಮಿಸುವ ಕೆಲ ನಿಮಿಷಗಳ ಮುಂಚೆ ಬಂಗಾರದ ಬಾಗಿಲನ್ನು ತೆರೆಯಲು ಹೋದ ವೇಳೆ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲವೆನ್ನಲಾಗಿದೆ. ಈ ವಿಚಾರವನ್ನು ಕೂಡಲೇ ಆಡಳಿತ ಮಂಡಳಿ ಗಮನಕ್ಕೆ ತಂದಾಗ ಬೀಗವನ್ನು ಒಡೆದು ಶ್ರೀಲಂಕಾ ಅಧ್ಯಕ್ಷರ ದರ್ಶನಕ್ಕೆ ಅನುವು ಮಾಡಿಕೊಡಲು ಸೂಚನೆ ಬಂದಿದೆ.
ಅದರಂತೆ ಗರಗಸದಿಂದ ಬಂಗಾರದ ಬಾಗಿಲಿಗೆ ಹಾಕಿದ್ದ ಬೀಗವನ್ನು ಕತ್ತರಿಸಿ ಮೈತ್ರಿಪಾಲ ಸಿರಿಸೇನಾ ದಂಪತಿಗಳಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಪ್ರತಿ ದಿನ ಮುಂಜಾನೆ 3 ಗಂಟೆಗೆ ಸ್ವಾಮಿಗೆ ಸುಪ್ರಭಾತ ಸೇವೆ ನಡೆಯುತ್ತಿದ್ದು, ಇದಕ್ಕೂ 45 ನಿಮಿಷ ಮುನ್ನ ಬಂಗಾರದ ಬಾಗಿಲನ್ನು ತೆರೆದು ಅಲಂಕಾರ ಮಾಡುವ ಕಾರ್ಯ ನಡೆಯುತ್ತದೆ. ಆದರೆ ಶ್ರೀಲಂಕಾ ಅಧ್ಯಕ್ಷರ ಭೇಟಿ ವೇಳೆ ಬೀಗ ತೆರೆದುಕೊಳ್ಳದೇ ಫಜೀತಿಯಾಗಿದೆ.

By Suddi9

Leave a Reply

Your email address will not be published. Required fields are marked *