ಸುದ್ದಿ9 ಬಂಟ್ವಾಳ : ಸಾಮಾಜಿಕ , ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಊರಿನ ಜನರು ಪರಸ್ಪರ ಸಹಕಾರ ನೀಡಬೇಕು . ಪರಂಪರೆ ಮತ್ತು ಹಿರಿಯ ಮಾರ್ಗದರ್ಶನದಂತೆ ಉತ್ಸಾಹಿ ಯುವಕರು ಕಾರ್ಯ ನಿರ್ವಹಿಸಿದರೆ ಯಾವುದೇ ಕೆಲಸವು ಸಮರ್ಪಕವಾಗಿ ನಡೆಯುತ್ತದೆ . ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ಸರ್ವಕಾಲಿಕ ಸತ್ಯ ಎಂದು ಕರ್ನಾಟಕ ಸರಕಾರದ ಯುವ ಹಾಗೂ ಕ್ರೀಡಾ ಸಚಿವ ಶ್ರೀ ಕೆ.ಅಭಯಚಂದ್ರ ಜೈನ್ ಹೇಳಿದರು . ಶ್ರೀಯುತರು ಪಾಣೇರ್ ಶ್ರೀ ಅನಂತಸ್ವಾಮಿ ಬಸದಿಯ 62ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ತನ್ನ ತಾತನವರ ಕಾಲದಿಂದಲೂ ಬಸದಿಯ ” ಕಾರಣಿಕದ ಅಮ್ನೋರು” ಎಂದು ಪ್ರಸಿದ್ಧಿ ಪಡೆದ ಶ್ರೀ ಪದ್ಮಾವತಿ ದೇವಿಯ ಸೇವೆಯನ್ನು ನಡೆಸಿಕೊಂಡು ಬರುತ್ತಿರುವುದನ್ನು ಸ್ಮರಿಸಿಕೊಂಡರು . ಪಾಣೇರು ಬಸದಿ ಸಮಿತಿಯವರು ವಾರ್ಷಿಕೋತ್ಸವದ ಸಂದರ್ಭದಲ್ಲಿ ತನ್ನನ್ನು ಗೌರವಿಸಿ ಶುಭಾಸಂಸನೆ ಮಾಡಿದಾಗ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು .
Abhayachandra_Paner
ಪಾ/ಅನಂತರಾಜ ಇಂದ್ರರು ಶ್ರೀ ಕೆ.ಅಭಯಚಂದ್ರರು ಜನರೊಡನೆ ಬೆರೆತು ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ದೊಡ್ಡ ಗುಣವನ್ನು ಪ್ರಶಂಸಿದರು. ಬಸದಿ ಸಮಿತಿ ಅಧ್ಯಕ್ಷ ಹೊಸಂಗಡಿ ಅರಮನೆ ಸಂಪತ್ ಕುಮಾರ್ , ಡಾ/ಪುಷ್ಪೇಂದ್ರ , ಹರಿಶ್ಚಂದ್ರ ಶೆಟ್ಟಿ , ವಿಜಯಕುಮಾರ್ ಶೆಟ್ಟಿ , ಕರ್ಬೆಟ್ಟು ಪ್ರವೀಣ್ ಕುಮಾರ್ , ಸುಕೀರ್ತಿ , ಸುಕುಮಾರ್ ಮಾಸ್ತರ್, ಮೆತ್ತಿಮಾರ್ ನಮಿರಾಜ್ ಜೈನ್ ಉಪಸ್ಥಿತರಿದ್ದರು . ಪಾ/ಅನಂತರಾಜ ಇಂದ್ರ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು .
ವಿಮಾನ ಶುದ್ಧಿ , ನವಗ್ರಹ ಶಾಂತಿ , ಪದ್ಮಾವತಿ ದೇವಿ ಪ್ರತಿಷ್ಟೆ , ಪದ್ಮಾಂಬ ಮಹಿಳಾ ಮಂಡಳದವರಿಂದ ಅಷ್ಟಾವಧಾನ ಸೇವೆ ಮಹೋತ್ಸವ , ಲಕ್ಷ ಹೂವಿನ ಸೇವೆ ನಡೆದವು . ಪುತ್ತೂರಿನ ಕು.ಸಿಂಚನಾರವರಿಂದ ನೃತ್ಯ ಪ್ರದರ್ಶನ ನಡೆಯಿತು .

By Suddi9

Leave a Reply

Your email address will not be published. Required fields are marked *