ಸುದ್ದಿ9 ಕಾರ್ಕಳ: ತಾಲೂಕಿನ ಮಿಯಾರು `ಲವ-ಕುಶ’ ಜೋಡುಕೆರೆ ಬಯಲು ಕಂಬಳವನ್ನು ಅಹಿಂಸಾತ್ಮಕವಾಗಿ ನಡೆಸಲು ಗುರುವಾರ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು.
ತಹಶೀಲ್ದಾರ್ ರಾಘವೇಂದ್ರ ಸಭೆಯನ್ನು ಉದ್ದೇಶಿಸಿ ಮಾತನಾಡಿ ನ್ಯಾಯಾಲಯದ ಆದೇಶದಂತೆ ಓಟದ ಕೋಣಗಳಿಗೆ ಕಂಬಳಧ ಸಂದರ್ಭದಲ್ಲಿ ಯಾವುದೇ ರೀತಿಯ ಹಿಂಸೆಯಾಗದಂತೆ ಅವುಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಕೋಣಗಳ ಯಜಮಾನರದಾಗಿದೆ.ಅವುಗಳನ್ನು ತರುವಾಗ ದೊಡ್ಡ ವಾಹನಗಳಲ್ಲಿ ತರಬೇಕು. ಪಶುಚಿಕಿತ್ಸಾ ಘಟಕವನ್ನು ಸ್ಥಾಪಿಸಬೇಕು. ಮೂರುವರ್ಷಕ್ಕಿಂತ ಸಣ್ಣ ಕೋಣಗಳನ್ನು ಓಟಕ್ಕೆ ಬಳಸಬಾರದು.

ನೂರಕ್ಕೆ ನೂರರಷ್ಟು ಶಿಸ್ತುಬದ್ಧ, ಕಾನೂನತ್ಮಾಕವಾಗಿ ನಡೆಸಬೇಕು ಎಂದರು. ಸಮಿತಿಯ ರವೀಂದ್ರ ಕುಮಾರ್ ಮಾತನಾಡಿ ಕಂಬಳ ಸಂದರ್ಭದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಕಂಬಳ ಸಮಿತಿಯ ಉಪಾಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್ ಮಾತನಾಡಿ ಎಲ್ಲ ಬಗೆಯಿಂದ ನ್ಯಾಯಾಲಯದ ಆದೇಶದಂತೆ ಅಹಿಂಸಾತ್ಮಕವಾಗಿ ಮಾತ್ರ ಕಂಬಳ ನಡೆಸಲಾಗುವುದು ಎಂದರು.

ಈ ಸಂದರ್ಭ ನಕ್ರೆ ಅಂತೋನಿ ಡಿಸೋಜಾ, ಎಂ.ಜಯರಾಮ ಪ್ರಭು, ನಗರ ಠಾಣೆಯ ಎಎಸ್‍ಐ ಬಾಲಕೃಷ್ಣ ಹೆಗ್ಡೆ, ವೃತ್ತನಿರೀಕ್ಷಕ ಜಿಎಂ ರಾಯ್ಕರ್, ಕ್ರೈಂ ಎಸ್‍ಐ ಕೃಷ್ಣಮೂರ್ತಿ, ಉದಯ ಎಸ್.ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *