ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ನಿವಾಸಿ ಇಲ್ಲಿನ ಶಾರದಾ ಪ್ರೌಢ ಶಾಲೆ ಮತ್ತು ಎಸ್.ಎಲ್.ಎನ್.ಪಿ ವಿದ್ಯಾಲಯದ ಸಂಚಾಲಕ ಶ್ರೀ.ಪಿ.ದೇವದಾಸ ಶೆಣೈ (ಪಿ.ಡಿ.ಶೆಣೈ) (76) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಬುಧವಾರ ಬೆಳಿಗ್ಗೆ ನಿಧನರಾದರು. ಮೃತರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ.
ಬಂಟ್ವಾಳ ರೋಟರಿ ಕ್ಲಬ್ ಸದಸ್ಯರಾಗಿ, ಮಾಜಿ ಅಧ್ಯಕ್ಷರಾಗಿ, ಕನ್ಯಾನ ಭಾರತ ಸೇವಾಶ್ರಮದ ಅಧ್ಯಕ್ಷರಾಗಿ, ನರಹರಿ ಪರ್ವತ ಸದಾಶಿವ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾಗಿ, ಪಾಣೆಮಂಗಳೂರು ವೀರವಿಠಲ ಭಜನಾ ಮಂಡಳಿ ಮಾಜಿ ಅಧ್ಯಕ್ಷರಾಗಿ, ನಂದಾವರ ಹನುಮಂತ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ, ಪಾಣೆಮಂಗಳೂರು ಭಯಂಕೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ, ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷರಾಗಿ ಬೋಳಂಗಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷರಾಗಿದ್ದರು.
ಉತ್ತಮ ಟೆನ್ನಿಸ್ ಕ್ರೀಡಾಪಟುವಾಗಿದ್ದ ಇವರು ಶ್ರೀ ಬಾಲ ಮಾರುತಿ ಟೆನ್ನಿಸ್ ಕ್ಲಬ್ ಮಂಗಳೂರು ಇದರ ಸದಸ್ಯರಾಗಿ ದುಡಿದ್ದಿದ್ದಾರೆ.

ಸಂತಾಪ:
ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆ ಮತ್ತು ಎಲ್‍ಎಲ್‍ಎನ್‍ಪಿ ವಿದ್ಯಾಲಯಕ್ಕೆ ಬುಧವಾರ ರಜೆ ಘೋಷಿಸಿ ಮೃತರಿಗೆ ಸಂತಾಪ ವ್ಯಕ್ತಪಡಿಸಿದರು.
