ಸುದ್ದಿ9 ಬಂಟ್ವಾಳ: ಮನುಷ್ಯನಲ್ಲಿರುವ ತಿಳುವಳಿಕೆಯೇ ನಿಜವಾದ ಭಕ್ತಿ. ಭೂಮಿಯ ಮೇಲಿರುವ ಪ್ರಾಣಿ ಪಕ್ಷಿಗಳು ಪ್ರಕೃತಿ ಸಹಜವಾಗಿ ಜೀವಿಸುತ್ತಿದ್ದರೆ ಮನುಷ್ಯ ಮಾತ್ರ ವಿಕೃತಿಯತ್ತ ಹೋಗುತ್ತಿದ್ದಾನೆ. ಇಂತಹ ಮನೋಭಾವದಿಂದ ಬದಲಾಗಲು ದೇವಾಲಯ ನಿರ್ಮಾಣದಂತಹ ಪುಣ್ಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳ ಬೇಕಾಗಿದೆ ಎಂದು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಹೇಳಿದರು.
ಮೂಡುನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದದಲ್ಲಿ ಮಾ. 6 ರಿಂದ ಮಾ. 9ರವರೆಗೆ ನಡೆಯಲಿರುವ ಗಣಪತಿ ದೇವರ ಪ್ರತಿಷ್ಠೆ, ನೂತನ ಸುತ್ತುಪೌಳಿಯ ಸಮರ್ಪಣೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ಆವರಣದಲ್ಲಿ ಬುಧವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದ ಯುವಕರೇ ದೇವಸ್ಥಾನ, ಭಜನಾ ಮಂದಿರ ನಿರ್ಮಾಣ ಕಾರ್ಯಗಳಲಿ ಹೆಚ್ಚು ಆಸಕ್ತಿ ವಹಿಸಿ ತೊಡಗಿಸಿಕೊಳ್ಳುತ್ತಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಇಲ್ಲಿನ ದೇವಸ್ಥಾನ ಜೀಣೋದ್ದಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ದಗೊಂಡಿರುವುದು ನಿಜಕ್ಕೂ ಅಚ್ಚರಿ ಉಂಟು ಮಾಡಿದೆ. ಇಲ್ಲಿನ ಯುವಕರ ಅವಿರತ ಶ್ರಮವೇ ಇದಕ್ಕೆ ಕಾರಣ ಎಂದು ಶ್ಲಾಘನೆ ವ್ಯಕ್ತ ಪಡಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್ ಮಾತನಾಡಿ ಕೆಲಸದ ಮೂಲಕ ಇಲ್ಲಿನ ಯುವಕರು ತಮ್ಮ ಶಕ್ತಿಯನ್ನು ತೋರಿಸಿಕೊಟ್ಟಿದ್ದಾರೆ. ಅತ್ಯಲ್ಪ ಅವಧಿಯಲ್ಲಿ ಹೆಚ್ಚಿನ ಶ್ರಮ ವಹಿಸಿ ದೇವಸ್ಥಾನ ಅಭಿವೃದ್ದಿಗೆ ಶ್ರಮಿಸಿರುವುದು ಅಭಿನಂದನೀಯ ಎಂದರು.
BTW_FEB12_1

ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್, ಕಾರ್ಯದರ್ಶಿ ಮನೋಜ್ ಕುಮಾರ್, ಆಡಳಿತ ಮಂಡಳಿ ಕಾರ್ಯದರ್ಶಿ ರಾಮಚಂದ್ರ ಪೂಜಾರಿ ಕರೆಂಕಿ, ಜೀಣೋದ್ದಾರ ಸಮಿತಿ ಕಾರ್ಯದರ್ಶಿ ಪೂವಪ್ಪ ಮೆಂಡನ್, ಪ್ರಧಾನ ಅರ್ಚಕ ಗುರುರಾಜ್ ಭಟ್, ಪ್ರಮುಖರಾದ ನಾರಾಯಣ ಕೆ. ಗೌಡ, ಭಾಸ್ಕರ ಕುಲಾಲ್, ಕರುಣೇಂದ್ರ ಪೂಜಾರಿ, ಪರುಷೋತ್ತಮ ಅಂಚನ್ ಮತ್ತಿತರರು ಹಾಜರಿದ್ದರು. ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

By Suddi9

Leave a Reply

Your email address will not be published. Required fields are marked *