ಸುದ್ದಿ9   ಮೂಡುಬಿದರೆ: ನೆಲ್ಲಿಕಾರು ಗ್ರಾ.ಪಂ. ವ್ಯಾಪ್ತಿಯ ಮಾಂಟ್ರಾಡಿ ಗ್ರಾಮದ ಮುಗ್ರೋಡಿ ಅಕ್ರಮ ಜಲ್ಲಿ ಕ್ರಷರ್ ವಿರುದ್ಧ ಪಂಚಾಯಿತಿ ಕಚೇರಿ ಎದುರು ಗ್ರಾಮಸ್ಥರಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಕಾರರ ಅಹವಾಲು ಸ್ವೀಕರಿಸಿ ಮಾತನಾಡಿದ, ಭೂವಿಜ್ಞಾನ ಹಾಗೂ ಗಣಿ ಇಲಾಖೆಯ ಉಪನಿರ್ದೇಶಕ ರಾಮಪ್ಪ, ಮಗ್ರೋಡಿ ಕ್ರಷರ್ ಬಗ್ಗೆ ಡಿಸಿ ಜತೆ 10 ದಿನಗಳೊಳಗೆ ಸಮಾಲೋಚನೆ ನಡೆಸಿ, ಸೂಕ್ತ ನಿರ್ಧಾರಕ್ಕೆ ಬರುತ್ತೇವೆ. ಅಳಿಯೂರು-ಬಂಡಸಾಲೆ ರಸ್ತೆಯಲ್ಲಿ 10 ಚಕ್ರದ ವಾಹನಗಳು ಓಡಾಡುವುದನ್ನು ತುರ್ತಾಗಿ ನಿಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

ಡಿಸಿ ಜೊತೆ ಸಮಾಲೋಚನೆ ಅಧಿಕಾರಿಗಳಿಂದ ಭರವಸೆ

mbd_feb9_7

ಭೂ ವಿಜ್ಞಾನಿ ನಾಗೇಂದ್ರಪ್ಪ, ಕಂದಾಯ ನಿರೀಕ್ಷಕ ಸೋಮಶೇಖರ್ ಮಯ್ಯ, ಪಂಚಾಯಿತಿ ಪಿಡಿಓ ದಿನೇಶ್, ವಿಎ ಮಹೇಶ್ ಸ್ಥಳಕ್ಕೆ ಆಗಮಿಸಿದರು.

ದ.ಕ ಜಿಲ್ಲೆ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಹಿಂದುಳಿದ ಸಮಿತಿಯ ಪ್ರತಿಭಟನೆ ನೇತೃತ್ವವಹಿಸಿತ್ತು. ಸಮಿತಿಯ ರಾಜ್ಯ ನಾಯಕ ಎಲಿಮಲೆ ರಾಜೇಶ್ ಭಟ್, ಪ್ರತಿಭಟನೆಯ ವೇಳೆ ಪಂಚಾಯಿತಿಯವರು ಮಾಡುತ್ತಿದ್ದ ವಿಡಿಯೋ ಚಿತ್ರೀಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಭಟನೆ ಮಾಡುವಾಗ ಯಾರು ಏನು ಮಾತನಾಡುತ್ತಾರೆ ಎಂದು ಚಿತ್ರೀಕರಣ ಮಾಡುವುದಲ್ಲ. ಗ್ರಾಮಸ್ಥರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಿದರೆ, ಪ್ರತಿಭಟನೆಯ ಅನಿವಾರ್ಯತೆಯಿರುವುದಿಲ್ಲ. ಕ್ರಷರ್‍ನಂತ ಅಪಾಯಕಾರಿ ಉದ್ಯಮಗಳಿಗೆ ಎನ್‍ಓಸಿ ನೀಡುವಾಗ ಗ್ರಾಮಸಭೆಗಳಲ್ಲಿ, ಇಲ್ಲವೇ ವಿಶೇಷ ಸಭೆಗಳಲ್ಲಿ ಗ್ರಾಮಸ್ಥರು, ಮುಖ್ಯವಾಗಿ ಆ ಉದ್ಯಮಗಳ ವ್ಯಾಪ್ತಿಗೆ ಬರುವ ಸ್ಥಳೀಯರ ಜತೆ ಸಮಾಲೋಚನೆ ಮಾಡುವುದು ಅಗತ್ಯ. ಗ್ರಾಮಗಳಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಸ್ಥರಿಗಾಗಿ ಕರ್ತವ್ಯ ನಿರ್ವಹಿಸಬೇಕೇ ಹೊರತು ಬಂಡವಾಳ ಶಾಹಿಗಳಿಗಲ್ಲ ಎಂದರು.
ಕನ್ಯಾನ ಬಾಳೆಕೋಡಿ ಶ್ರೀ ಸದ್ಗುರು ಶಶಿಕಾಂತಮಣಿ ಸ್ವಾಮೀಜಿ, ಅಖಿಲ ಭಾರತ ಕಾರ್ಮಿಕ ಸಂಘದ ಸ್ಥಾಪಕ ಸುಧತ್ತ ಜೈನ್, ಪ್ರಧಾನ ಕಾರ್ಯದರ್ಶಿ ದಿನೇಶ್, ದಲಿತ ಕ್ರಿಯಾ ಸಮಿತಿಯ ಹಿಂದುಳಿದ ಸಮಿತಿಯ ಜಿಲ್ಲಾ ನಾಯಕ ಜಗದೀಶ್ ಪಡ್ಪು, ಸಮಿತಿಯ ಕರಾವಳಿ ವಿಭಾಗದ ಮುಖ್ಯಸ್ಥ ಶಿವಾನಂದ ಪಾಂಡ್ರು, ಸಮಿತಿ ಜಿಲ್ಲಾಧ್ಯಕ್ಷ ಪ್ರವೀಣ್.ಆರ್.ಕೋಟ್ಯಾನ್, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಹಕ್ಕು ಜಾಗೃತಿ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಕಡಲಕೆರೆ ಸಹಿತ ಹೋರಾಟಗಾರರು ಉಪಸ್ಥಿತರಿದ್ದರು.

 

By Suddi9

Leave a Reply

Your email address will not be published. Required fields are marked *