ಮಂಗಳೂರು: ಮಂಗಳೂರಿನಲ್ಲಿ ನಡೆಯಲಿರುವ ವಿರಾಟ್ ಹಿಂದೂ ಸಮಾವೇಶದ ಅಧ್ಯಕ್ಷ ಸ್ಥಾನ ವಹಿಸಿರುವ ಕಾಂಗ್ರೆಸ್ ಮುಖಂಡರಾಗಿದ್ದ ವಿಜಯನಾಥ ವಿಠಲನಾಥ ಶೆಟ್ಟಿ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ ಕೆಂಗಣ್ಣು ಬೀರಿದ್ದು ವಿಜಯನಾಥ ವಿಠಲ ಶೆಟ್ಟಿಗೆ ಆಲೋಚನಾ ಶಕ್ತಿಯೇ ಇಲ್ಲ ಎಂದು ಜರಿದಿದ್ದಾರೆ.
ಮಂಗಳೂರಿನಲ್ಲಿ ನಡೆಯಲಿರುವ ವಿರಾಟ್ ಹಿಂದೂ ಸಮಾವೇಶಕ್ಕೆ ಪ್ರವೀಣ್ ಬಾಯ್ ತೊಗಡಿಯಾ ಬರಲು ಅವಕಾಶ ನೂಡುವುದಿಲ್ಲ. ಅದಕ್ಕೆ ತಡೆ ತರಲಾಗುವುದು ಎಂದು ಜರೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತಾಡುತ್ತಿದ್ದ ರಮಾನಾಥ ರೈ, ಪಕ್ಷದಲ್ಲಿ ಲಕ್ಷಾಂತರ ಮಂದಿ ಇರುತ್ತಾರೆ. ಕೆಲವರು ಬರುತ್ತಾರೆ, ಕೆಲವರು ಹೋಗುತ್ತಾರೆ, ಅದರಲ್ಲೂ ಅಧ್ಯಕ್ಷ ಸ್ಥಾನ ಸಿಕ್ಕರೆ ಎಲ್ಲಿ ಬೇಕಾದರೂ ಹೋಗುತ್ತಾರೆ. ಅಂಥವರಲ್ಲಿ ವಿಜಯರೂ ಒಬ್ಬ. ಅವರು ಎಲ್ಲಿ ಬೇಕಾದರೂ ಹೋಗಲಿ ನನಗೇನೂ ಇಲ್ಲ ಎಂದು ಖಾರವಾಗಿ ನುಡಿದಿದ್ದಾರೆ.
ಮಾ.1ರಂದು ಮಂಗಳೂರಿನಲ್ಲಿ ನಡೆಯಲಿರುವ ಹಿಂದೂ ಸಮಾಜ್ಯೋತ್ಸವಕ್ಕೆ ಬರಲು ಪ್ರವೀಣ್ ಬಾಯ್ ತೊಗಡಿಯಾಗೆ ಅವಕಾಶ ನೀಡುವುದಿಲ್ಲ. ಕೋಮುವಾದದಿಂದ ಅಮಾಯಕರೇ ಬಲಿಪಶುಗಳಾಗುತ್ತಿದ್ದಾರೆ. ಉಪ್ಪಿನಂಗಡಿಯಲಲಿ ನಡೆದಿರುವುದು ಏನೆಂದು ಎಲ್ಲರಿಗೂ ಗೊತ್ತಿದೆ. ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನಳಿನ್ ಹುಟ್ಟು ಹಬ್ಬಕ್ಕೆ ಶುಭ ಕೋರಿದ ವಿಜಯನಾಥ: ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಹುಟ್ಟುಹಬ್ಬಕ್ಕೆ ವಿಜಯನಾಥ ವಿಠಲ ಶೆಟ್ಟಿಯವರು ಶುಭಕೋರಿದ್ದು, ಈ ಬಗ್ಗೆ ಕನ್ನಡ ದಿನಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದಾರೆ.
ಇದೆಲ್ಲಾ ಅಂಶಗಳನ್ನು ಗಮನಿಸುವಾಗ ರೈಯವರು ವಿಠಲ್ ವಿರುದ್ಧ ತಿರುಗಿ ಬಿದ್ದಿರುವ ಬಗ್ಗೆ ಗೋಚರವಾಗುತ್ತಿದೆ.
