ಸುದ್ದಿ9 ಮೂಡಬಿದಿರೆ: ಜ.24 ಫ್ರಾನ್ಸಿಸ್ಕನ್ ಮಿಶನರಿಗಳ ಕಾಲದಲ್ಲಿ ಅಂದರೆ ಕ್ರಿ.ಶ. 1510ರ ಪೂರ್ವದಲ್ಲೇ ಪ್ರಾರಂಭವಾಗಿ, ಆಡಳಿತಾತ್ಮಕವಾಗಿ 1798ರಲ್ಲಿ ಗೋವಾದ ಧರ್ಮ ಪ್ರಚಾರಕರಲ್ಲಿ ಓರ್ವರಾಗಿದ್ದ ರೆ.ಫಾ.ಬೆನೆಡಿಕ್ಟ್ ರೀಸ್ ದಿ ತ್ರಿವಾಂದದ್ ಅವರಿಂದ ಸ್ಥಾಪನೆಯಾದ ಹೊಸಬೆಟ್ಟು ಹೋಲಿ ಕ್ರಾಸ್ ಚರ್ಚ್ ಇದೀಗ ನವೀಕರಣಗೊಂಡಿದ್ದು ಫೆ. 1ರಂದು ಚರ್ಚ್‍ನ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ ಎಂದು ಚರ್ಚ್‍ನ ಧರ್ಮಗುರು ರೆ.ಫಾ.ಅಸ್ಸಿಸಿ ರೆಬೆಲ್ಲೋ ತಿಳಿಸಿದರು.
ಚರ್ಚ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. 1887ರಲ್ಲಿ ಈ ಚರ್ಚ್ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಅಸ್ತಿತ್ವಕ್ಕೆ ಬಂದಿತು. 1890ರಲ್ಲಿ ರೆ. ಫಾ.ರೆಂಜಾಲ್‍ರವರಿಂದ ಸಂತ ಸೆಬೆಸ್ಟಿಯನ್ ಶಾಲೆ ಸ್ಥಾಪನೆ, 1904ರಲ್ಲಿ ರೆ.ಫಾ.ಕಜಿತನ್ ಮಾರ್ಗದರ್ಶನದಲ್ಲಿ ಬೆಲ್ಲ , ಸುಣ್ಣದ ಗೋಡೆ, ಬಲಿಪೀಠ, ಸಂತರ ಮೂರ್ತಿ , ಇತರ ಸಂಪತ್ತು ದುರಸ್ಥಿ ಸಹಿತ ಚರ್ಚ್ ಜೀರ್ಣೋದ್ಧಾರ ನಡೆದು 1909ರಲ್ಲಿ ಉದ್ಘಾಟನೆ, 1996-99ರಲ್ಲಿ ಕಾನ್ವೆಂಟ್ ಸ್ಥಾಪನೆ, 2001ರಲ್ಲಿ ಐಸಿವೈಎಂನ ಬೆಳ್ಳಿಹಬ್ಬದಂಗವಾಗಿ ಮುಖ್ಯ ದ್ವಾರ ರಚನೆ, 2007ರಲ್ಲಿ ಸಮುದಾಯ ಭವನ ನಿರ್ಮಾಣ ಇವೆಲ್ಲ ನಡೆದಿವೆ. ಕಳೆದ ಮೂರು ವರ್ಷಗಳಿಂದ ಗೋಡೆ, ಮುಖದ್ವಾರ, ಬಲಿಪೀಠ, ನೆಲಹಾಸು, ಹೊರಾಂಗಣ , ಇತರ ಕಟ್ಟಡಗಳ ದುರಸ್ಥಿ ಕಾಮಗಾರಿ ನಡೆದಿವೆ. ಪ್ರಸ್ತುತ 294 ಕುಟುಂಬಗಳು, 9 ವಾಳೆಗಳಲ್ಲಿ ನೆಲೆಯೂರಿವೆ, ಅನೇಕ ದೈವಿಕ, ಸಾಮಾಜಿಕ ಸೇವಾ ಚಟುವಟಿಕೆಗಳಾಗುತ್ತಿವೆ
ಫೆ. 1ರಂದು ಬೆ.ಗಂ. 8.15ಕ್ಕೆ ಮಂಗಳೂರು ಡಯೋಸಿಸ್‍ನ ಬಿಷಪ್ ರೆ.ಫಾ. ಡಾ.ಅಲೋಸಿಯಸ್ ಪೌಲ್ ಡಿ’ಸೋಜ ಅವರು ನವೀಕೃತ ಚರ್ಚ್‍ನ್ನು ಆಶೀರ್ವಚಿಸಲಿರುವರು. ಸಂಜೆಯ ಕಾರ್ಯಕ್ರಮದಲ್ಲಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ, ಸಂಸದ ನಳಿನ್‍ಕುಮಾರ್ ಕಟೀಲು, ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕುಲಾಸೋ, ಸಿಸ್ಟರ್ ವಿಲ್ಬರ್ಟಾ, ಮೂಡಬಿದರೆ ಚರ್ಚ್‍ನ ರೆ.ಫಾ.ಆಸ್ಟಿನ್ ಪೆರಿಸ್, ಶಾಸಕರಾದ ಜೆ. ಆರ್. ಲೋಬೋ, ಐವನ್ ಡಿ’ಸೋಜ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿ ಚರ್ಚ್ ಪಾಲನಾಮಂಡಳಿಯ ಉಪಾಧ್ಯಕ್ಷ ಲಿಯೊ ವಾಲ್ಟರ್ ನಝರೆತ್, ಕಾರ್ಯದರ್ಶಿ ಉರ್ಬನ್ ಮಿನೇಜಸ್, ಸ್ವಾಗತ ಸಮಿತಿ ಅಧ್ಯಕ್ಷ ವಲೇರಿಯನ್ ಕುಟಿನ್ಹೋ, ವಿಲ್ರೆಡ್ ಮೆಂಡೋನ್ಸಾ, ಮೆಲ್ವಿನ್ ಲೋಬೋ, ಸೆಲ್ವಿನ್ ಕುಲಾಸೋ ಮೊದಲಾದವರು ಉಪಸ್ಥಿತರಿದ್ದರು.



