ಕರ್ನಾಟಕ ರಾಜ್ಯದಲ್ಲೂ ಸಮರ್ಪಕವಾದ ನೀರಾ ನೀತಿಯನ್ನು ಜಾರಿಗೆ ತರಲು ಚಿಂತಿಸಬೇಕು ಇದರಿಂದ ತೆಂಗಿನ ಬೆಳೆಯು ಮೌಲ್ಯವರ್ಧನೆ ಆಗುತ್ತದೆ ಎಂದು ಪ್ರಗತಿಪರ ಕೃಷಿಕ ರಾಜೇಶ್‌ ನಾಯಕ್‌ ಉಳಿಪಾಡಿಗುತ್ತು ಗಂಜಿಮಠದ ಒಡ್ಡೂರು ಫಾರ್ಮ್‌ನಲ್ಲಿ ಜ. 27ರಂದು ಮಂಗಳವಾರ ನಡೆದ ತೆಂಗು ಬೆಳೆಗಾರರ ಕಂಪೆನಿ ರಚಿಸುವ ಕುರಿತ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ತುಂಬೆಯಲ್ಲಿ ನೀರಾ ಘಟಕ ಆರಂಭವಾದ ಬಳಿಕ ಕೇರಳದಲ್ಲಿ ತೆಂಗುಬೆಳೆಗಾರರ 14 ಸಂಘಗಳು ಅಸ್ತಿತ್ವಕ್ಕೆ ಬಂದವು. ಇಂದು ಆ ಸಂಘಗಳು ವಾರ್ಷಿಕ ಲಾಭದಾಯಕವಾಗಿ ವ್ಯವಹಾರ ನಡೆಸುತ್ತಿವೆ. ಆಲ್ಕೋಹಾಲ್‌ ಅಂಶ ಇಲ್ಲದ ನೀರಾ ಒಂದು ಆರೋಗ್ಯಕರ ಪೇಯವಾಗಿದೆ. ಇಂತಹ ಪ್ರಯತ್ನ ನಮ್ಮ ರಾಜ್ಯದಲ್ಲೂ ಆಗಬೇಕು ಎಂದು ಅವರು ಹೇಳಿದರು.

20

17

 

18

5 (1)8 (1)

 

12

16

 

27
ಒಬ್ಬ ರೈತನಿಗೆ 5 ಸೆನ್ಸ್ ಜಾಗದಲ್ಲಿ 10 ತೆಂಗಿನ ಮರವನ್ನು ನೆಟ್ಟು ನಾಲ್ಕು ವರ್ಷದಲ್ಲಿ ಆದಾಯ ಬರಲು ಸಾಧ್ಯ ಇದೆ. ಇಷ್ಟೊಂದು ಲಾಭದಾಯಕವಾದ ತೆಂಗಿನ ಬೆಳೆಯಲ್ಲಿ ಹಲವಾರು ಅವಕಾಶಗಳು ಇದ್ದು, ಸಣ್ಣ ರೈತರಾಗಿರುವ ತೆಂಗು ಬೆಳೆಗಾರರು ಸಂಘಟಿತರಾಗಬೇಕಿದೆ ಎಂದರು.
ತೆಂಗು ಬೆಳೆಗಾರರು ಆರ್ಥಿಕವಾಗಿ ಸದೃಢರಾಗಲು ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಬೇಕು. ಜಾಗತಿಕ ಮಾರುಕಟ್ಟೆಯಲ್ಲಿ ಜಿಲ್ಲೆಯ ತೆಂಗಿಗೆ ಹೆಚ್ಚು ಬೇಡಿಕೆ ಇದೆ. ರೈತರಿಗೆ ಬೆಲೆ ಬರಬೇಕಾದರೆ ಅವರೂ ಆರ್ಥಿಕವಾಗಿ ಸದೃಢರಾಗಬೇಕು. ಮೌಲ್ಯವರ್ಧನೆಯಿಂದ ಆರ್ಥಿಕವಾಗಿ ರೈತರು ಬಲಿಷ್ಠರಾಗಲು ಸಾಧ್ಯ ಇದೆ ಎಂದು ಅವರು ಹೇಳಿದರು.

ಕೃಷಿ ಆಧಾರಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೃಷಿ ಆಧಾರಿತ ಉದ್ದಿಮೆಗಳಿಂದಲೇ ಬೆಳೆಸಬೇಕು. ಕೃಷಿ ಭೂಮಿ ಉಳಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಕೃಷಿ ವಲಯ ಸ್ಥಾಪನೆ ಆಗಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.
ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲ್ಲೂಕುಗಳನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ವಿಶೇಷ ಕೃಷಿ ವಲಯ ಮಾಡಬೇಕು. ವಿಜ್ಞಾನಿಗಳನ್ನು ಕರೆಸಿ ಮಣ್ಣಿನ, ನೀರಿನ ಗುಣಾಂಶಗಳ ಅಧ್ಯಯನ ನಡೆಸಿ ಇಲ್ಲಿನ ಭೂಮಿಗೆ ಯಾವ ಕೃಷಿ ಸೂಕ್ತ ಎಂಬುದನ್ನು ಅಧ್ಯಯನ ಮಾಡಲಾಗುತ್ತದೆ. ಬಳಿಕ ಅದಕ್ಕೆ ಪೂರಕವಾದ ರೀತಿಯಲ್ಲಿ ಕೃಷಿ ಮಾಡಬೇಕು ಎಂಬ ಬಗ್ಗೆಯೂ ಸರ್ಕಾರ ಮಾರ್ಗದರ್ಶನ ಮಾಡುತ್ತದೆ. ಈ ಕಾರಣದಿಂದ ಎಸ್‌ಎಜೆಡ್‌ ರೈತರಿಗೆ ನೆರವಾಗುತ್ತದೆ. ಆದ್ದರಿಂದ ಈ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದೆ ಇಡಲಾಗಿದೆ ಎಂದು ಅವರು ಹೇಳಿದರು.

ಸುಮಾರು ಎರಡು ಸಾವಿರ ಎಕರೆ ಪ್ರದೇಶವನ್ನು ವಿಶೇಷ ಕೃಷಿ ವಲಯವನ್ನಾಗಿ ರೂಪಿಸಿ ಭೂಮಿಗೆ ಪೂರಕವಾದ ಬೀಜ, ರಸಗೊಬ್ಬರ ನೀಡಲಾಗುತ್ತದೆ. ಇದರಿಂದ ರೈತರಿಗೆ ಅನುಕೂಲ ಆಗಲಿದೆ. ಇದಕ್ಕಾಗಿ ಜಾಗ ಖರೀದಿಸಬೇಕಾದ ಅಗತ್ಯ ಇರುವುದಿಲ್ಲ. ಜಿಲ್ಲೆಯಲ್ಲಿ ಎಸ್‌ಎಜೆಡ್‌ ಸ್ಥಾಪನೆ ಕುರಿತು ಜಿಲ್ಲೆಯಲ್ಲಿ ಸಂಶೋಧನೆ ನಡೆಸಿ ವರದಿ ಮತ್ತು ಪ್ರಸ್ತಾವನೆ ಸಿದ್ಧಪಡಿಸುವಂತೆ ಮಂಗಳೂರು ಮೂಲದ ವಿಜ್ಞಾನಿಯೊಬ್ಬರಿಗೆ ಸೂಚಿಸಲಾಗಿದೆ. ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು ಹೇಳಿದರು.
ಕೃಷಿಯನ್ನೇ ಅವಲಂಬಿಸಿದ್ದ ಜಿಲ್ಲೆಯಲ್ಲಿ ಭತ್ತದ ಬೆಳೆಯ ಜತೆಗೆ ತೆಂಗು ಆದ್ಯತೆಯ ಬೆಳೆಯಾಗಿತ್ತು. ಅಡಿಕೆ ಬೆಳೆ ವ್ಯಾಪಕವಾಗುತ್ತಿದ್ದಂತೆ ತೆಂಗಿನ ಬೆಳೆ ಹಿಂದೆ ಸರಿದಿದೆ. ತೋಟಗಾರಿಕಾ ಇಲಾಖೆಯ ಮೂಲಕ ಸರ್ಕಾರ ರೈತರಿಗೆ ಸೌಲಭ್ಯಗಳನ್ನು ನೀಡುತ್ತಿದ್ದರೂ ಈ ಬಗ್ಗೆ ರೈತರಿಗೆ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ತೆಂಗಿನ ವಿವಿಧ ಉತ್ಪನ್ನಗಳಿಂದಾಗಿ ಭವಿಷ್ಯದಲ್ಲಿ ಉತ್ತಮ ಆದಾಯದಾಯಕ ಬೆಳೆಯಾಗಿ ಕಂಡು ಬರುತ್ತಿರುವುದರಿಂದ ಇದಕ್ಕೆ ಹೆಚ್ಚಿನ ರೀತಿಯ ಉತ್ತೇಜನ ನೀಡಬೇಕು. ಯೋಜನಾಬದ್ಧವಾಗಿ ಕಾರ್ಯಕ್ರಮ ರೂಪಿಸಬೇಕು. ಸಂಘಟನೆಯನ್ನು ಸಹಕಾರಿಗಳ ಮೂಲಕ ಮುನ್ನಡೆಸಬೇಕು. ರಾಜಕೀಯ ಸ್ಪರ್ಶ ಇಲ್ಲದೆ ಸಂಘಟನೆ ಮುಂದೆ ಸಾಗಬೇಕು. ಹೊಸ ಪ್ರಯೋಗಗಳೂ ನಡೆಯಬೇಕು. ಅಡಿಕೆ ಕೊಳೆರೋಗ, ನುಸಿ ರೋಗ, ಹಳದಿ ಎಲೆ ರೋಗ, ಬೇರುಹುಳಕ್ಕೆ ಔಷಧಿಗಳನ್ನೂ ಕಂಡುಹುಡುಕಬೇಕು. ಅಡಿಕೆಯಿಂದ ಔಷಧಿ ತಯಾರಿಸುವ ಬಗ್ಗೆಯೂ ಪ್ರಯತ್ನಗಳು ನಡೆಯಬೇಕು ಎಂದು ಅವರು ಹೇಳಿದರು.

ತೆಂಗು ಅಭಿವೃದ್ಧಿ ಮಂಡಳಿಯ ತಾಂತ್ರಿಕ ಅಧಿಕಾರಿ ಸಿಮಿ ಥಾಮಸ್ ಮಾತನಾಡಿ, ತೆಂಗು ಬೆಳೆಗಾರರ ಒಕ್ಕೂಟ ಹಾಗೂ ಕಂಪನಿ ರಚನೆಯಿಂದ ರೈತರಿಗೆ ತೆಂಗು ಮಂಡಳಿಯಿಂದ ಸಿಗುವ ಸವಲತ್ತು, ಸಹಾಯಧನಗಳ ಕುರಿತು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಮತ್ತು ಪುತ್ತೂರಿನಲ್ಲಿ 2 ಒಕ್ಕೂಟಗಳು ಈಗಾಗಲೇ ನೋಂದಣಿ ಆಗಿವೆ. ಕಂಪೆನಿ ರಚಿಸಲು ₨5 ಕೋಟಿ ಬಂಡವಾಳ ಬೇಕಾಗಿದ್ದು, ಮಂಗಳೂರಿನಲ್ಲೇ ಕಂಪೆನಿ ಆರಂಭವಾಗಬೇಕು. ಕಂಪೆನಿ ಮೂಲಕ ತೆಂಗಿನಕಾಯಿ ಉತ್ಪನ್ನಗಳನ್ನು ಮಾಡಲು ಸಬ್ಸಿಡಿ ನೀಡಲಾಗುತ್ತದೆ. ಕಂಪೆನಿ, ಒಕ್ಕೂಟ ರಚಿಸಲು ನೆರವು, ಸಲಹೆ ನೀಡುವುದಾಗಿ ಅವರು ಹೇಳಿದರು.

ತೋಟಗಾರಿಕಾ ಇಲಾಖೆಯ ಸಂಜೀವ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ತಲಾ ಒಂದರಂತೆ ಒಕ್ಕೂಟಗಳು ರಚನೆ ಆಗಬೇಕು. ಮಾರ್ಚ್‌ ವೇಳೆಗ ಜಿಲ್ಲೆಯಲ್ಲಿ 2 ಕಂಪೆನಿಗಳು ಸ್ಥಾಪನೆ ಆಗಬೇಕು. ಕಂಪೆನಿಗಳು ತೆಂಗು ಅಭಿವೃದ್ಧಿ ಮಂಡಳಿ ಜತೆ ಸೇರಿಸಿದರೆ ಹಲವು ನೆರವು ಸಿಗುತ್ತದೆ ಎಂದರು.

By Suddi9

Leave a Reply

Your email address will not be published. Required fields are marked *