ಬಂಟ್ವಾಳ: ಸಾಮಾಜಿಕ ನ್ಯಾಯ ಮತ್ತು ದುರ್ಬಲ ವರ್ಗದ ಪರವಾಗಿ, ಬೀಡಿ ಕಾಮರ್ಿಕರು ಹಾಗೂ ಗೇಣಿದಾರರ ಜೊತೆಗೂಡಿ ಸದ್ದುಗದ್ದಲವಿಲ್ಲದೆ, ಪ್ರಚಾರ ಬಯಸದೆ ಎಡಪಕ್ಷಗಳ ನೇತೃತ್ವ ವಹಿಸಿ ಹೋರಾಟ ಮಾಡಿ ಮಾದರಿ ನಾಯಕರಾಗಿ ದಿ| ಮಂಜುನಾಥ ಸಪಲ್ಯರು ನಮಗೆಲ್ಲಾ ಮಾರ್ಗದರ್ಶಕರಾಗಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಅವರು ಜ. 4ರಂದು ಪಾಣೆಮಂಗಳೂರು ಸುಮಂಗಲಾ ಕಲ್ಯಾಣ ಮಂಟಪದಲ್ಲಿ ನಡೆದ ಸಾರ್ವಜನಿಕ ನುಡಿನಮನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಅವರು ಸ್ವತ: ಬೀಡಿ ಸಂಸ್ಥೆಯ ಮಾಲಿಕರಾಗಿ, ಕಾಮರ್ಿಕ ಪರವಾಗಿ ಕೆಲಸ ಮಾಡಿದ ಏಕೈಕ ವ್ಯಕ್ತಿ. ಸಮಾಜದದಲ್ಲಿ ಎಲ್ಲಾ ಜಾತಿ ಧರ್ಮದವರ ಜೊತೆಗೆ ಸೌಹಾರ್ಧತ ಸಂಬಂಧ ಹೊಂದುವ ಮೂಲಕ ಕಾಮರ್ಿಕರ ಕಷ್ಟಗಳಿಗೆ ಆಥರ್ಿಕವಾಗಿ ಸ್ಪಂದಿಸಿದವರು ಎಂದು ನುಡಿದರು.
ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ. ರಘು ಸಪಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿ ಮೃತರ ಸ್ಮರಣಾರ್ಥ ಪಾಣೆಮಂಗಳೂರಲ್ಲಿ ಒಂದು ಸುಸಜ್ಜಿತ ಬಸ್ ತಂಗುದಾಣ ನಿಮರ್ಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಬಿಲ್ಲವ ಮಹಾಮಂಡಲ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ್ ಮಾತನಾಡಿ ಭಗವಾನ್ ಶ್ರೀ ನಿತ್ಯಾನಂದ, ಗೋವಿಂದ ಸ್ವಾಮಿಜಿ ಅವರ ಪರಮ ಭಕ್ತರಾಗಿದ್ದು ತನ್ನ ಸ್ವಪರಿಶ್ರಮದಿಂದ ಉನ್ನತ ಸ್ಥಾನಕ್ಕೆ ಬಂದಿದ್ದರು. ಅವರ ಬದುಕು ತೆರೆದ ಪುಸ್ತಕದಂತೆ ಯುವಪೀಳಿಗೆಗೆ ಆದರ್ಶವಾಗಿತ್ತು ಎಂದರು.
ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ. ಕುಲಾಲ್ ಮಾತನಾಡಿ, ಮೃತರ ಸಾಧನೆ ದಾಖಲಿಸಲು ಸಂಸ್ಮರಣಾ ಗ್ರಂಥ ಹೊರಲು ಎಲ್ಲರು ಶ್ರಮಿಸುವ ಅಗತ್ಯವಿದೆ ಎಂದು ನುಡಿದರು.
ಬಂಟ್ವಾಳ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್, ಉದ್ಯಮಿ ಲಕ್ಷ್ಮಣ ಎ. ಬಾಳಿಗಾ ಬಂಟ್ವಾಳ, ಸಿಪಿಎಂ ಮುಖಂಡ ವಾಸು ಗಟ್ಟಿ, ಸಿಪಿಐ ಮುಖ್ಯಂಡ ಪಿ. ಸಂಜೀವ, ಬಂಟ್ವಾಳ ಕಸಾಪ ಅಧ್ಯಕ್ಷ ಜಯಾನಂದ ಪೆರಾಜೆ, ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಮಂಗಳೂರು ಮಾಜಿ ಮೇಯರ್ ಕೆ. ಕೃಷ್ಣಪ್ಪ ಮೆಂಡನ್, ಅತ್ತಾವರ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್. ರಮೇಶ್, ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಯು. ಎಸ್.ಪ್ರಕಾಶ್, ಮಂಜೇಶ್ವರ ಶ್ರೀ ಕೀತರ್ೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಎಂ. ಕಮಲಾಕ್ಷ, ಬಂಟ್ವಾಳ ತಾ| ಗಾಣಿಗರ ಸೇವಾ ಸಂಘದ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಸಪಲ್ಯ ಮದರ್ೊಳಿ ಇವರು ಮೃತರಿಗೆ ನುಡಿ ನಮನ ಸಲ್ಲಿಸಿದರು.
ತಾ.ಪಂ.ಸದಸ್ಯ ಮಾಧವ ಎಸ್.ಮಾವೆ ವೇದಿಕೆಯಲ್ಲಿದ್ದರು.
ಕೆಡಿಪಿ ಸದಸ್ಯ ಉಮೇಶ ಬೋಳಂತೂರು ಸ್ವಾಗತಿಸಿ, ಸಂಘದ ಜೊತೆ ಕಾರ್ಯದಶರ್ಿ ಅಶೋಕ ಕುಮಾರ್ ಬರಿಮಾರು ವಂದಿಸಿದರು. ಸುಮಂಗಲಾ ಕ್ರೆಡಿಟ್ ಸೊಸೈಟಿ ನಿದರ್ೇಶಕ ಮೋಹನ್ ಕೆ. ಶ್ರೀಯಾನ್ ರಾಯಿ ಕಾರ್ಯಕ್ರಮ ನಿರ್ವಹಿಸಿದರು
