ಬಂಟ್ವಾಳ : ಶ್ರದ್ಧೆ ಭಕ್ತಿ ಇದ್ದಲ್ಲಿ ದೇವರು ಇದ್ದಾರೆ. ಭಕ್ತರಿಗೆ ಸಂಕಲ್ಪವಿದ್ದಲ್ಲಿ ಎಲ್ಲವೂ ಈಡೇರುತ್ತದೆ , ಒಗ್ಗಟ್ಟು ಇದ್ದಲ್ಲಿ ಯಾವುದೇ ಕೆಲಸ ಸುಸೂತ್ರವಾಗುತ್ತದೆ . ನೀವು ಎರಡು ಕೈಯಲ್ಲಿ ಸಮರ್ಪಣೆ ಮಾಡಿ ದೇವರು ಸಾವಿರ ಕೈಯಲ್ಲಿ ಸ್ವೀಕರಿಸುತ್ತಾನೆ ಎಂದು ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಶ್ರೀ ಅನಂತ ಪದ್ಮನಾಭ ಅಸ್ರಣ್ಣ ನುಡಿದರು . ಅವರು ದುರ್ಗಾ ಮಾತಾ ದೇವಸ್ಥಾನ ಟ್ರಸ್ಟ್ ಮಣಿ ಇದರ ನೂತನವಾಗಿ ನಿರ್ಮಾಣಗೊಳ್ಳಲಿರುವ ದೇವಸ್ಥಾನದ ಭೂಮಿಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನವಿತ್ತರು
KAR_8895
ಈ ಪವಿತ್ರ ಪವಿತ್ರ ಮಣ್ಣಲ್ಲಿ ದೇವಸ್ಥಾನ ಎದ್ದು ನಿಲ್ಲುತ್ತದೆ , ನಂಬಿಕೆ ಇದ್ದಲ್ಲಿ ಶ್ರದ್ಧೆ ಇರುತ್ತದೆ ಎಂದು ಗೋಳ್ತಮಜಲು ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅಧ್ಯಕ್ಷತೆ ವಹಿಸಿ ಮಾತನಾಡಿದರು . ಇದೇ ಸಂದರ್ಭದಲ್ಲಿ ದೇವಸ್ಥಾನದ ವಿಜ್ಞಾಪನಾಪತ್ರವನ್ನು ಅನಂತ ಪದ್ಮನಾಭ ಅಸ್ರಣ್ಣರು ಬಿಡುಗಡೆಗೊಳಿಸಿದರು . ವೇದಿಕೆಯಲ್ಲಿ ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ , ತಾ.ಪಂ.ಸದಸ್ಯ ಪದ್ಮಶೇಖರ ಜೈನ್ , ಚಂಡ್ತಿಮಾರ್ ಮಹಾಲಿಂಗೇಶ್ವರ ಭಜನಾ ಮಂದಿರದ ಅಧ್ಯಕ್ಷ ಜನಾರ್ಧನ ಚೆಂಡ್ತಿಮಾರ್ , ಪ್ರಧಾನ ಅರ್ಚಕ ಬಾಬು ಗೌಡ ಮಣಿ , ಶಿಲ್ಪಿ ವಿಶ್ವನಾಥ ಕಾರ್ಕಳ ಉಪಸ್ಥಿತರಿದ್ದರು. ಅಧ್ಯಕ್ಷ ನ್ಯಾಯವಾದಿ ಸುರೇಶ್ ಪೂಜಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ವಂದಿಸಿದರು . ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು .

By Suddi9

Leave a Reply

Your email address will not be published. Required fields are marked *