ಸುದ್ದಿ9 ಮೂಡುಬಿದರೆ: ತೆಂಗಿನ ಮರದಿಂದ ಜಾರಿ ನೆಲಕ್ಕೆ ಬಿದ್ದ ಕಾರ್ಮಿಕನೊಬ್ಬ ಸಾವನಪ್ಪಿದ ಘಟನೆ ಕಡಂದಲೆ ಬಾರಬೆಟ್ಟು ಎಂಬಲ್ಲಿ ಶನಿವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಸ್ಥಳೀಯ ರಾಜು ಪೂಜಾರಿ(38)ಎಂದು ಗುರುತಿಸಲಾಗಿದೆ. ಈತ ಬಾರಬೆಟ್ಟು ಸೀತರಾಮ ಶೆಟ್ಟಿ ಎಂಬವರ ತೋಟದಲ್ಲಿ ಗುರುವಾರ ತೆಂಗಿನ ಕಾಯಿ ಕೀಳಲೆಂದು ಮರವೇರಿದಾಗ ಅರ್ಧದಲ್ಲಿ ಜಾರಿ ಬಿದ್ದನೆನ್ನಲಾಗಿದೆ. ಮೂರ್ತೆದಾರ ರಾಮೆಗೌಡ ಬೆಳಿಗ್ಗೆ 11-30 ರ ಸುಮಾರಿಗೆ ಈ ದಾರಿಯಲ್ಲಿ ಬರುತ್ತಿದ್ದಾಗ ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ರಾಜು ಪೂಜಾರಿ ತೋಟದಲ್ಲಿ ನರಳಾಡುತ್ತಿರುವುದು ಕಂಡು ಬಂದರೆನ್ನಲಾಗಿದೆ. ನಂತರ ರಾಜು ಪೂಜಾರಿಯ ಮನೆಯವರು ಬಂದು ಆಸ್ಪತ್ರೆಗೆ ಸೇರಿಸಲು ಕೊಂಡೊಯ್ಯುತ್ತಿದ್ದ ಸಂದರ್ಭ ಅವರು ದಾರಿ ಮಧ್ಯೆ ಸಾವನಪ್ಪಿದ್ದಾರೆನ್ನಲಾಗಿದೆ. ವಿವಾಹಿತರಾಗಿದ್ದ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮೂಡುಬಿದರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


