ನವದೆಹಲಿ: ಮಾಜಿ ಕೇಂದ್ರ ಸಚಿವ ಶಶಿ ತರೂರು ಪತ್ನಿ ಸುನಂದಾ ಪುಷ್ಕರ್ ಸಾವು ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಾ ಸಾಗುತ್ತಿದ್ದು, ಸುನಂದಾ ಸಾವಿಗೀಡಾಗುವ ಮುಂಚೆ ಆಕೆಯಲ್ಲಿ `ನಿನ್ನ ಕಥೆಮುಗಿಯಿತು’ ಅಂದಿದ್ದಾದರೂ ಯಾರು ಎಂಬ ಪ್ರಶ್ನೆ ಇದೇ ಸಂದರ್ಭದಲ್ಲಿ ಹುಟ್ಟಿಕೊಂಡಿದೆ.

pushkar
ಶಶಿ ತರೂರು ಮನೆಯಲ್ಲಿ ನಾರಾಯಣ ಸಿಂಗ್ ಎನ್ನುವಾತ ಕೆಲಸ ಮಾಡಿಕೊಂಡಿರುತ್ತಿದ್ದು, ಆತನ ಹೇಳಿಕೆಯ ಪ್ರಕಾರ ಸುನಿಲ್ ಸಾಬ್ ಎನ್ನುವಾತ ಸುನಂದಾ ಅವರನ್ನು ಪದೇ ಪದೇ ಭೇಟಿಯಾಗುತ್ತಿದ್ದು, ಆತನ ಅಸಲಿಯತ್ತೇನು ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿಕೊಂಡಿದೆ. ನಾರಾಯಣ ಸಿಂಗ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಒಬ್ಬಾತ ಶಶಿ ತರೂರ್‍ಗೆ ಕರೆ ಮಾಡಿ, `ಆಪ್ ಕಥಂ ಹೋಗಯಾ…'(ನಿಮಮ ಕಥೆ ಮುಗಿಯಿತು) ಎಂದು ಹೇಳಿದ್ದಾನೆನ್ನಲಾಗಿದ್ದು, ಅದನ್ನು ತಾನು ಕೇಳಿಸಿಕೊಂಡಿರುವುದಾಗಿ ಸಿಂಗ್ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ.
ಮನೆ ಕೆಲಸಗಾರ ನಾರಾಯಣ ಸಿಂಗ್ ಪೆÇಲೀಸರಿಗೆ ನೀಡಿರುವ ಹೇಳಿಕೆ ಪ್ರಕಾರ, ಶಶಿ ತರೂರ್ ಹಾಗೂ ಸುನಂದಾ ಪುಷ್ಕರ್ ನಡುವೆ ಪದೇ ಪದೇ ಮಾತಿನ ಚಕಮಕಿಗಳಾಗುತ್ತಿದ್ದು, ಒಂದು ಹಂತದಲ್ಲಿ ಸುನಂದಾ ಪುಷ್ಕರ್ ಪತಿ ಶಶಿ ತರೂರ್ ಮೇಲೆ ಹಲ್ಲೆಯನ್ನೂ ನಡೆಸಿದ್ದಾಗಿ ತಿಳಿಸಿದ್ದಾನೆ.
ಪೆÇಲೀಸರು ಸುನಂದಾ ಪುಷ್ಕರ್ ಸಾವಿಗೂ ಮುನ್ನ ಆನಾರೋಗ್ಯಕ್ಕಾಗಿ ಯಾವುದಾದರೂ ಔಷಧ ಸೇವಿಸುತ್ತಿದ್ದರೆ ಎಂಬುದನ್ನೂ ನಾರಾಯಣ ಸಿಂಗ್ ಬಳಿ ಕೇಳಿದ್ದು, ಅವರ ಮೈ ಮೇಲಾಗಿರುವ ಗಾಯಗಳು ಅದರಲ್ಲೂ `ಗಾಯ ಸಂಖ್ಯೆ 10′ ಅದರಲ್ಲಿ ಸಿರಿಂಜಿನಿಂದ ಚುಚ್ಚಿರುವಂತಿದ್ದು ಇದನ್ನು ಈ ಮುಂಚೆ ಗಮನಿಸಿರುವ ಬಗ್ಗೆಯೂ ವಿಚಾರಿಸಿದ್ದಾರೆ.

By Suddi9

Leave a Reply

Your email address will not be published. Required fields are marked *