ಕೈಕಂಬ: ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದ ಹರೀಶ್ ಪೂಜಾರಿ ಮೃತ್ಯು ಪ್ರಕರಣದಿಂದ ಉಂಟಾಗಿದ್ದ ಹಲವು ಊಹಾಪೋಹಗಳಿಗೆ ಕೆ.ಎಸ್.ಹೆಗ್ಡೆ ದೇರಳಕಟ್ಟೆಯ ಖ್ಯಾತ ವೈದ್ಯರಾದ ಡಾ. ಮಹಾಬಲ ಶೆಟ್ಟಿ ತೆರೆ ಎಳೆದಿದ್ದಾರೆ.
ಜ.ಆರರ ಮುಂಜಾನೆ ಬಂಟ್ವಾಳ ರತಾಲೂಕಿನ ಕಲ್ಲಗುಡ್ಡೆ ವರಕ್ಕೋಡಿ ಗುರುವಪ್ಪ ಪೂಜಾರಿಯವರ ಮಗ ರೆಂಜಾಳ ನಿವಾಸಿ ಹರೀಶ್ ಪೂಜಾರಿ ಎಂಬವರು ಮನೆ ಸಮೀಪದ ಮೋರಿಯಲ್ಲಿ ಕುಳಿತಿದ್ದ ಸಂದರ್ಭ ಮೋರಿಯಿಂದ ಕುಸಿದು ಸಾವನ್ನಪ್ಪಿದ್ದರು. ಈ ಸಾವು ಹಲವಾರು ಊಹಾಪೋಹಗಳಿಗೆ ಕಾರಣವಾಗಿತ್ತಲ್ಲದೆ ಸಾರ್ವಜನಿಕರು ಒಂದೊಂದು ರೀತಿಯಲ್ಲಿ ಮಾತಾಡಿಕೊಳ್ಳುತ್ತಿದ್ದರು.

ಪೊಲೀಸರಿಗೂ ತಲೆಕೊರೆಯುವಂತೆ ಮಾಡಿದ್ದ ಈ ಸಾವು ಆಯತಪ್ಪಿ ಬಿದ್ದ ವ್ಯಕ್ತಿಯೋರ್ವ ಒಮ್ಮಿಂದೊಮ್ಮೆಗೆ ಹೇಗೆ ಸಾವನ್ನಪ್ಪಿದ್ದ ಎಂದು ಸಂಶಯಿಸಿದ್ದು ಹಲವು ಕೋನಗಳಿಂದ ಆಲೋಚಿಸಿದ್ದರು.
ಬಂಟ್ವಾಳ ಗ್ರಾಮಾಂತರ ಸಭ್ ಇನ್ಸ್ಪೆಕ್ಟರ್ ರಕ್ಷಿತ್ ಹಾಗೂ ಸರ್ಕ್ ಲ್ ಬೇಳ್ಳಿಯಪ್ಪ ಅವರು ತನಿಕೆ ಕೈಗೆತ್ತಿಗೊಂಡು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಖ್ಯಾತ ವೈಧ್ಯರಾದ ಮೆಡಿಕಲ್ ಪ್ರೋಫೆಸರ್ ಡಾ.ಮಹಾಬಲ ಶೆಟ್ಟಿ ಅವರನ್ನು ಕೂಡಲೇ ಸ್ಥಳಕ್ಕೆ ಕರೆಯಿಸಿ ಇದರ ಪರೀಕ್ಷೆಯನ್ನು ನಡೆಸಿದರು ನಂತರ ಶವವನ್ನು ಮರಣೋತ್ತರ ವರದಿಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಖ್ಯಾತ ವೈದ್ಯರಾದ ಡಾ. ಮಹಾಬಲ ಶೆಟ್ಟಿಯವರು ಮಾಡಿದ್ದರು. ಮರಣೋತ್ತರ ವರದಿಯ ಬಳಿಕ ಸಾವಿನ ರಹಸ್ಯ ಬಯಲಾಗಿದ್ದು, ಹರೀಶ್ ಪೂಜಾರಿಯವರು ಆಯತಪ್ಪಿ ಬಿದ್ದಾಗ ಅವರ ತಲೆ ನೇರವಾಗಿ ನೆಲಕ್ಕೆ ತಾಗಿದ್ದು, ಇದರಿಂದ ಬೆನ್ನುಹುರಿ ತಲೆಭಾಗ (ಸ್ಪೈನಲ್ಕಾರ್ಡ್) ತುಂಡಾಗಿತ್ತು, ಇದರಿಂದಾಗಿಯೇ ಅವರು ಮರಣವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

