ಸುದ್ದಿ9 ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ , ರೋಟರಿ ಕ್ಲಬ್ ಬಂಟ್ವಾಳ ಮತ್ತು ಹೋಟೇಲ್ ರಂಗೋಲಿ ಆಶ್ರಯದಲ್ಲಿ 72ನೇ ರಕ್ತದಾನ ಶಿಬಿರವು ಬಿ.ಸಿ.ರೋಡ್ ರಂಗೋಲಿಯಲ್ಲಿ ರೋ.ರಿತೇಶ್ ಬಾಳಿಗಾ , ಬಂ.ಪೋಲೀಸ್ ಜಗದೀಶ್ ವಿಟ್ಲ , ಹರಿಶ್ಚಂದ್ರ ಪಂಜಿಕಲ್ ಮತ್ತು ಅಶ್ವಿತ್ ಪೆರ್ಗಡೆ ಪೆರ್ನೆ ರಕ್ತದಾನ ಮಾಡಿ ಉದ್ಘಾಟಿಸಿದರು . ಈ ಸಂದರ್ಭ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಕಾರಂತ್ , ಕಾರ್ಯದರ್ಶಿ ಗುರುಕೃಪಾ ಸಂಜೀವ ಪೂಜಾರಿ , ಚಂದ್ರಹಾಸ್ ಶೆಟ್ಟಿ ರಂಗೋಲಿ , ವಿದ್ಯಾ ಚಂದ್ರಹಾಸ್ , ಸೇವಾಂಜಲಿಯ ಕೃಷ್ಣ ಕುಮಾರ್ ಪೂಂಜ , ಸೋಮಪ್ಪ ಕೋಟ್ಯಾನ್ , ಚಂದ್ರಹಾಸ್ ತುಂಬೆ , ಎಂ.ಕೆ.ಖಾದರ್ ಮಾರಿಪಳ್ಳ , ಮೋಹನ್ ಬಿ.ಸಾಲಿಯಾನ್ , ಸಂದೀಪ್ ಸಾಲ್ಯಾನ್ , ತುಂಬೆ ಪಂ.ಅಧ್ಯಕ್ಷ ಮಹಮ್ಮದ್ ವಳವೂರು , ದಿನೇಶ್ ತುಂಬೆ ಮತ್ತು ಪದ್ಮನಾಭ ಫರಂಗೀಪೇಟೆ ಉಪಸ್ಥಿತರಿದ್ದರು . ಸುಮಾರು 50 ಜನ ರಕ್ತದಾನ ಮಾಡಿದರು.

