ಸುದ್ದಿ9 ಮೂಡುಬಿದರೆ: ಆಳ್ವಾಸ್ ವರ್ಣವಿರಾಸತ್ ರಾಷ್ಟ್ರೀಯ ಕಲಾಶಿಬಿರಕ್ಕೆ ಪೂರಕವಾಗಿ ನಡೆಯುವ ಸಾಂಪ್ರದಾಯಿಕ ಹಾಗೂ ಅದಿವಾಸಿ ಕಲಾವಿದರ ಚಿತ್ರಕಲಾ ಶಿಬಿರಕ್ಕೆ ಶುಕ್ರವಾರ ವಿದ್ಯಾಗಿರಿಯಲ್ಲಿ ಚಾಲನೆ ನೀಡಲಾಯಿತು.
ಮಂಗಳೂರು ಪ್ರಜ್ಞಾ ಕೌನ್ಸಿಲಿಂಗ್ನ ಸ್ಥಾಪಕ ನಿರ್ದೇಶಕಿ ಪ್ರೊ.ಹಿಲ್ಡಾ ರಾಯಪ್ಪನ್ ಶಿಬಿರಕ್ಕೆ ಚಾಲನೆ ನೀಡಿದರು.
ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ವಿರಾಸತ್ ಪ್ರಯುಕ್ತ ನಡೆಯುವ ವರ್ಣವಿರಾಸತ್ ರಾಷ್ಟ್ರಮಟ್ಟದ ಕಲಾಶಿಬಿರದಲ್ಲಿ 30 ಕಲಾವಿದರು ಭಾಗವಹಿಸಲಿದ್ದು ಅದರ ಮೊದಲ ಹಂತವಾಗಿ 15 ಜನ ಅದಿವಾಸಿ ಕಲಾವಿದರು 10 ದಿನಗಳ ಕಾಲ ತಲಾ 2 ಚಿತ್ರಗಳನ್ನು ಬಿಡಿಸಲಿದ್ದಾರೆ.ಜ 6ರಿಂದ ಸಮಕಾಲೀನ ಚಿತ್ರಕಲಾ ಶಿಬಿರ ಪ್ರಾರಂಭಗೊಳ್ಳಲಿದೆ. ಆಳ್ವಾಸ್ ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಚಿತ್ರಕಲಾಶಿಬಿರಕ್ಕೂ ಹೆಚ್ಚಿನ ಮಹತ್ವ ನೀಡುತ್ತಿದೆ. ಹಿಂದೆ ನಡೆದ ಕಲಾಶಿಬಿರಗಳ 3 ಸಾವಿರಕ್ಕೂ ಅಧಿಕ ಚಿತ್ರಗಳು ಸಂಗ್ರಹದಲ್ಲಿದೆ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಚಿತ್ರಕಲಾ ಶಿಕ್ಷಕ ಭಾಸ್ಕರ್ ನೆಲ್ಯಾಡಿ, ಆಳ್ವಾಸ್ ಬಿವಿಎ ವಿಭಾಗದ ಉಪನ್ಯಾಸಕ ಶರತ್ ಕುಮಾರ್ ಶೆಟ್ಟಿ, ವಿಪಿನ್ ಲಾಲ್, ಚಿತ್ರಕಲಾವಿದ ಡಾ.ಮಹಬಲೇಶ್ ಉಪಸ್ಥಿತರಿದ್ದರು.
ಜ.2ರಿಂದ 11 ನಡೆಯಲಿರುವ ಶಿಬಿರದಲ್ಲಿ ಮಧ್ಯಪ್ರದೇಶದ ಕಲಾವಿದರಾದ ಅನಿತಾ ಬರಿಯ, ಕಾಮಿಲಿ ಕುಶ್ರಾಮ್, ಗೀತಾಂಜಲಿ ಉರ್ವತಿ, ಸಂತೋಷಿ ಶ್ಯಾಮ್, ಶಕುಂತಳಾ ಪ್ರಸಾದ್, ಚೊಟ್ಟಿ ತೆಕಂ, ವಿಜಯ ಕುಮಾರ್ ಶ್ಯಾಮ್, ಬೊಂಡೆಬ್ ದಾಸ್ ಎಂ.ಬಿ(ಪುರಿ), ಗುರುಪತ್ ಚಿತಾರ್ಕರ್(ಕೊಲ್ಕತಾ), ಸತೀಶ್ ತೆಕ್ಕಂ( ಜಾಖಂಡ್), ಗೋವಿಂದ ಜೋಗಿ( ಗುಜರಾತ್), ಬಿಂದು.ಎಂ.ಎಸ್, ನಳಿನ್ ಬಾಬು( ಕೇರಳ) ಭಾಗವಹಿಸಲಿದ್ದಾ
mbd_jan2_1 (1)ರೆ.

By Suddi9

Leave a Reply

Your email address will not be published. Required fields are marked *