ಮೂಡುಬಿದರೆ: ಕದ್ದ ಕಾರಿನಲ್ಲಿ ಗೋ ಅಕ್ರಮ ಸಾಗಾಟಮಾಡುತ್ತಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಓರ್ವನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉಳ್ಳಾಲ ಮಿಲ್ಲತ್ ನಗರದ ಮಹಮ್ಮದ್ ಸಲೀಂ ಯಾನೆ ಸಿರಿ ಸಲೀಂ ಎಂದು ಗುರುತಿಸಲಾಗಿದೆ.


ಈತನ ವಿರುದ್ಧ ಉಳ್ಳಾಲ, ಮಂಗಳೂರು ಉತ್ತರ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸ್ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ದನಕಳ್ಳಸಾಗಾಟ ಇನ್ನಿತರ ಅಪರಾಧ ಪ್ರಕರಣಗಳು ದಾಖಲಾಗಿವೆ. ಡಿಸೆಂಬರ್ 1ರಂದು ಪ್ರಾಂತ್ಯ ಗ್ರಾಮದ ಪೇಪರ್ಮಿಲ್ ಬಳಿ ಬಂಟ್ವಾಳ ಕಡೆಯಿಂದ ಮೂಡುಬಿದಿರೆಯತ್ತ ಬರುತ್ತಿದ್ದ ಬೆಂಗಳೂರು ನೋಂದಾಣಿ ಸಂಖ್ಯೆಯ ಅಲ್ಟೋ ಕಾರು(ಕೆಎ.01.ಆರ್.4726) ಪೇಪರ್ಮಿಲ್ಲ್ ಸಮೀಪ ಅತಿ ವೇಗದಲ್ಲಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿತ್ತು. ಇದನ್ನು ಕಂಡು ಸ್ಥಳೀಯರು ಕಾರಿನೆಡೆಗೆ ಬಂದಾಗ ಕಾರಿನಲ್ಲಿದ್ದ ಮೂವರು ಆರೋಪಿಗಳು ವಾಹನವನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದರು.
ಕಾರಿನ ಚಾಲಕನ ಹಿಂಬದಿ ಸೀಟಿನ ಮಧ್ಯೆ ದನವೊಂದನ್ನು ಅಮಾನವೀಯ ರೀತಿಯಲ್ಲಿ ತುಂಬಿಸಲಾಗಿರುವುದು ಸಾರ್ವಜನಿಕರಿಗೆ ಕಂಡುಬಂದಿದೆ. ಕಾರಿನೊಳಗೆ ಮಾರಕಾಯುಧಗಳು ಕೂಡ ಪತ್ತೆಯಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಕಾರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿ ಪ್ರಕರಣದ ಓರ್ವ ಆರೋಪಿ ಉಳ್ಳಾಲದ ಮಹಮ್ಮದ್ ಸಲೀಂನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಫಾರೂಕ್, ತಮೀಮ್ನಿಗೆ ಪೊಲೀಸರು ಶೋಧ ನಿರತರಾಗಿದ್ದಾರೆ. ಆರೋಪಿಗಳು ಗೋವಾದಿಂದ ಕದ್ದ ಆಲ್ಟೊ ಕಾರಿಗೆ ಕನರ್ಾಟಕದ ನಕಲಿ ನೋಂದಾವಣಿ ಸಂಖ್ಯೆ ಹಾಕಿ ದನ ಕಳ್ಳ ಸಾಗಾಟಕ್ಕೆ ಬಳಿಸಿಕೊಂಡಿದ್ದರೆನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
