ಕೈಕಂಬ: ಗುರುಪುರ ಕೈಕಂಬದಲ್ಲಿ ಮೀನುಮಾರುಕಟ್ಟೆ ಹಾಗೂ ಹೊಸದಾಗಿ ಅಂಗಡಿ ಸಂಕೀರ್ಣ ನಿರ್ಮಿಸಲು ಶಾಸಕರ ನಿಧಿಯಿಂದ 20 ಲಕ್ಷ ರೂ. ಬಿಡುಗಡೆ ಮಾಡಲಾಗುವುದು ಎಂದುಶಾಸಕ ಮೊಯ್ದೀನ್ ಬಾವಾ ಸುದ್ದಿಗಾರರೊಂದಿಗೆ ಮಾತಾಡಿ ತಿಳಿಸಿದರು.

kaikamba1

kaikamba2

kaikamba3

kaikamba4

kaikamba5

ಇತ್ತೀಚೆಗೆ ಕೈಕಂಬದಲ್ಲಿ ಬೆಂಕಿಗಿಡಾಗಿ ಕಟ್ಟಡ ಭಸ್ಮಗೊಂಡ ಸ್ಥಳಕ್ಕೆ ಭೇಟಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಶಾಸಕ ಮೊಯ್ದೀನ್ ಬಾವಾ, ಅಂಗಡಿ ಮಾಲಿಕರಿಗೆ ಆದಾಯ ತೆರಿಗೆ ಇಲಾಖೆಯಿಂದ ಪರಿಹಾರ ನೀಡಲಾಗುವುದು. ಅಲ್ಲದೆ ಕೈಕಂಬದಲ್ಲಿ ಮೀನು ಮಾರುಕಟ್ಟೆ, ಹೊಸದಾಗಿ ಅಂಗಡಿ ಸಂಕೀರ್ಣ ಹಾಗೂ ನೂತನ ಬಸ್ ನಿಲ್ದಾಣ ನಿರ್ಮಿಸಲು ಶಾಸಕರ ನಿಧಿಯಿಂದ 20 ಲಕ್ಷ ರೂ. ಅನುದಾನ ಶೀಘ್ರದಲ್ಲೇ ಬಿಡುಗಡೆ ಮಾಡಿ ಶಂಕುಸ್ಥಾಪನೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಅಂಗಡಿ ಮಾಲಕರಲ್ಲಿ ಮತಾಡಿದ ಬಾವಾ ಕಂದಾವರ ಪಂಚಾಯತ್ ಹಾಗೂ ಗುರುಪುರ ಪಂಚಾಯತ್ ಜೊತೆ ಮಾತುಕತೆ ನಡೆಸಿ ಹೊಸತಾಗಿ ಅಂಗಡಿ ಸಂಕೀರ್ಣ ನಿರ್ಮಾಣ, ಸ್ಥಳಾನ್ವೇಷನೆ ಮುಂತಾದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸದ್ಯದಲ್ಲಿ ಪಂಚಾಯತ್ನವರು ಅಂಗಡಿ ಮಾಲಕರ ಅಂಗಡಿಗೆ ಮುಚ್ಚಲು ಟಪರ್ಾಲು ಒದಗಿಸಿದ್ದು, ಮುಂದಿನ ದಿನಗಳಲ್ಲಿ ಅಂಗಡಿ ಸಂಕೀರ್ಣ ನಿರ್ಮಿಸಲಿದೆ ಆತಂಕ ಬೇಡ ಎಂದು ಹೇಳಿಕೆ ನೀಡಿದ್ದಾರೆ.
ಮೊಯ್ದೀನ್ ಜೊತೆ ಕಾಂಗ್ರೆಸ್ ಗುರುಪುರ ವಲಯಾಧ್ಯಲ್ಷ ಪೃಥ್ವಿರಾಜ್ ಚೌಹಾನ್, ತ ಪಂ ಸದಸ್ಯೆ ಯಶವಂತಿ ಆಳ್ವ ಜೊತೆಗಿದ್ದರು.

By Suddi9

Leave a Reply

Your email address will not be published. Required fields are marked *