ಬಂಟ್ವಾಳ:ಬಂಟ್ವಾಳ ಪುರಸಭೆ ಸಾಮಾನ್ಯಸಭೆಗೆ ಕಳೆದ ಎರಡು ಬಾರಿ ಗೈರು ಹಾಜರಾಗಿದ್ದ ವಿರೋಧ ಪಕ್ಷ ಬಿಜೆಪಿ ಸದಸ್ಯರು ಸೋಮವಾರ ನಡೆದ ಸಭೆಗೆ ಹಾಜರಾಗಿದ್ದು, ಸಾಮಾನ್ಯ ಸಭೆ ಮುಗಿಯುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಭೆಗೆ ಪ್ರವೇಶಿಸಿದಾಗ ಬಿಒಜೆಪಿ ಸದಸ್ಯರು ಮತ್ತೆ ನಿರ್ಗಮಿಸಿದರು.

ಪುರಸಭೆ ವ್ಯಾಪ್ತಿಯಲ್ಲಿ ಶುಚಿತ್ವಕ್ಕೆ ವಿಶೇಷ ಆಸಕ್ತಿ ವಹಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದ ಸಚಿವರು ಈಗಾಗಲೇ ‘ನಿರ್ಮಲ ಯೋಜನೆ’ಯಡಿ ಬಂಟ್ವಾಳದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಮಾಲಿನ್ಯ ಮಂಡಲಿ ಶೀಘ್ರವೇ ಅನುದಾನ ಬಿಡುಗಡೆಗೊಳಿಸಲಿದೆ. ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿ ಈಗಾಗಲೇ ಲಕ್ಷಾಂತರ ರೂಪಾಯಿ ಮೊತ್ತದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿಮರ್ಾಣ ಕಾಮಗಾರಿ ನಡೆದಿದ್ದು, ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ತ್ವರಿತ ಬುಲ್ಲು ಪಾವತಿಸಲು ಸೂಚಿಸಿದರು.
ಸಭೆಯಲ್ಲಿ ಹಾಜರಾಗಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಾಜಶೇಖರ್ ಪುರಾಣಿಕ್ ಪ್ರತಿಕ್ರಿಯಿಸಿ, ‘ನಿರ್ಮಲ’ ಯೋಜನೆಯಡಿ ಬಂಟ್ವಾಳಕ್ಕೆ ಮಂಜೂರಾಗಿರುವ ರೂ 2ಕೋಟಿ ಅನುದಾನದಲ್ಲಿ ಮೊದಲ ಕಂತು ಶೀಘ್ರವೇ ಬಿಡುಗಡೆ ಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
