ಬಂಟ್ವಾಳ:ಸಮಾಜದಲ್ಲಿ ದುರ್ಬಲ ವರ್ಗ ಮತ್ತು ದೀನ ದಲಿತರನ್ನು ಮೇಲೆತ್ತುವುದರ ಜೊತೆಗೆ ಹಂತ ಹಂತವಾಗಿ ಒಟ್ಟು ಸಾಮಾಜಿಕ ಬೆಳವಣಿಗೆ ಸಾಧ್ಯವಾಗಿದ್ದು, ಭೂತಕಾಲದಲ್ಲಿನ ಸ್ಥಿತಿಗತಿ ನೆನಪಿಸಿಕೊಂಡು ಭವಿಷ್ಯತ್ಕಾಲಕ್ಕೆ ಅನುಕೂಲವಾಗುವಂತೆ ವರ್ತಮಾನದಲ್ಲಿ ಅಭಿವೃದ್ಧಿಗೆ ಹೆಜ್ಜೆಯಿಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಸಜಿಪಮೂಡ ಗ್ರಾಮ ಪಂಚಾಯಿತಿ ಬಳಿ ನಿಮರ್ಾಣಗೊಂಡ ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಪರಿವರ್ತನೆಗೆ ಸಕಾಲ: ಸಚಿವ ರೈ
ಜನಪ್ರತಿನಿಧಿಗಳು ಸತ್ಯವನ್ನು ಮರೆಮಾಚಿ ಚಪ್ಪಳೆ ಗಿಟ್ಟಿಸಿಕೊಳ್ಳುವುದಕ್ಕಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಅವರು ಹೇಳಿದರು.
ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಮಾತನಾಡಿ, ಎಲ್ಲರೂ ಒಟ್ಟಾಗಿ ಸೇವೆ ಸಲ್ಲಿಸಿದರೆ ಪ್ರತಿಯೊಂದು ಗ್ರಾಮವೂ ಅಭಿವೃದ್ದಿಪಥದಲ್ಲಿ ಮುನ್ನಡೆಯುತ್ತದೆ ಎಂದರು.
ಸ್ಥಳೀಯ ಜಿ.ಪಂ. ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ ಸೇವಾ ಚಟುವಟಿಕೆ ಮುಂದುವರಿಸಿದಾಗ ಉತ್ತಮ ಜನಪ್ರತಿನಿಧಿಯಾಗಲು ಸಾಧ್ಯ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಬರಂಗರೆ ಸದಾನಂದ ಪೂಂಜ ಪ್ರಾಸ್ತಾವಿಕ ಮಾತನಾಡಿ, ಗ್ರಾಮ ಪಂಚಾಯಿತಿಗೆ ಹೆಚ್ಚುವರಿ ಅನುದಾನ ನೀಡುವುದರ ಜೊತೆಗೆ ತ್ವರಿತ ಮೂಲಸೌಕರ್ಯ ಒದಗಿಸಿದಾಗ ಮಾತ್ರ ಸರ್ಕಾರಕ್ಕೂ ಆಡಳಿತ ನಡೆಸಲು ಸುಲಭವಾಗುತ್ತದೆ ಎಂದರು.
ತಾ.ಪಂ. ಅಧ್ಯಕ್ಷ ಯಶವಂತ ಡಿ., ಸದಸ್ಯರಾದ ಪುಷ್ಪಾವತಿ, ಶರೀಫ್, ಜಿ.ಪಂ.ಮಾಜಿ ಸದಸ್ಯೆ ವಿಜಯ ವಿ. ಪ್ರಭು, ಸಜಿಪಮೂಡ ಗ್ರಾ.ಪಂ. ಅಧ್ಯಕ್ಷೆ ಸುಂದರಿ, ಸಜಿಪಮುನ್ನೂರು ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಮತ್ತಿತರರು ಶುಭ ಹಾರೈಸಿದರು. ಇದೇ ವೇಳೆ ಕಟ್ಟಡ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಇಕ್ಬಾಲ್ ಅವರನ್ನು ಸಮ್ಮಾನಿಸಲಾಯಿತು.
ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಗ್ರಾ.ಪಂ.ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಜಿ.ಪಂ. ಎಂಜಿನಿಯರ್ ಗಿರೀಶ್ ಕೆ.ಪಿ., ಪ್ರಮುಖರಾದ ಗೀತಾ ಜಾಡಕೋಡಿ, ಅಬ್ದುಲ್ ಕರೀಂ, ಎನ್. ಚಂದ್ರಶೇಖರ ಶೆಟ್ಟಿ ನೀಲ್ಯ, ಸುಶೀಲಾ ಕಂದೂರು, ಯೋಗೀಶ್ ಬೆಳ್ಚಡ ಕೂಡೂರು, ಬಿ.ಎಸ್.ಅಬೂಬಕ್ಕರ್ ಬೊಳ್ಳಾಯಿ, ಕೆ.ಬಶೀರ್ ಕೊಳಕೆ, ಸಂಜೀವಿ ಕೇಪುಳಗುಡ್ಡೆ, ಗೀತಾ ಚಂಚಲಾಕ್ಷಿ ಮಿತ್ತಕೆರೆ, ಯಮುನಾ ಕೊಟ್ಟಾರಿಪಾಲು, ಯೋಗೀಶ ಪೂಜಾರಿ ಕೋಮಾಲಿ, ಲವಿನಾ ಲಸ್ರಾದೊ ಕೊಳಕೆ, ವಿಶ್ವನಾಥ ಬೆಳ್ಚಡ ಕೂಡೂರು, ಸುರೇಶ್ ಶೆಟ್ಟಿ ಕೊಯಮಜಲು, ಪಿಡಿಒ ನಿರ್ಮಲ, ಕಾರ್ಯದರ್ಶಿ ನಳಿನ್ ಎ.ಕೆ. ಮತ್ತಿತರರು ಇದ್ದರು.
ಸಜೀಪಮೂಡ ಗ್ರಾ.ಪಂ.ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂಂಜ ಸ್ವಾಗತಿಸಿ, ಬಿ.ಎ. ಉಮರಬ್ಬ ಬೊಳ್ಳಾಯಿ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.
