ಮೂಡುಬಿದಿರೆ : ಪಂಚಾಯತ್ ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನ ನೀಡಲು ಜಾಗವಿಲ್ಲ. ಇದ್ದ ಜಾಗವೆಲ್ಲಾ ಡೀಮ್ಡ್ ಫಾರೆಸ್ಟ್ ಎಂದು ದಾಖಲಾಗಿವೆ ಇದೀಗ ಡೀಮ್ಡ್ ಫಾರೆಸ್ಟ್ ಜಾಗವನ್ನು ರದ್ದುಗೊಳಿಸಲು ಸರಕಾರ ಸೂಚಿಸಿರುವುದರಿಂದ ಎಲ್ಲೆಲ್ಲಾ ಡೀಮ್ಡ್ ಫಾರೆಸ್ಟ್ ಜಾಗವಿದೆ ಅದನ್ನು ಆದಷ್ಟು ಬೇಗನೆ ಗುರುತಿಸಬೇಕೆಂದು ತಹಶೀಲ್ದಾರ್ ಮಹಮ್ಮದ್ ಇಸಾಕ್ ಗ್ರಾಮಕರಣಿಕರಿಗೆ ಸೂಚಿಸಿದ್ದಾರೆ.

ಅವರು ಕಂದಾಯ ಇಲಾಖೆಯ ವಿಶೇಷ ತಹಶೀಲ್ದಾರರ ಕಛೇರಿ ಮೂಡುಬಿದಿರೆ ಇದರ ವತಿಯಿಂದ ಮಂಗಳವಾರ ಹೊಸಬೆಟ್ಟು ಗ್ರಾ.ಪಂಚಾಯತ್ನ ಪುಚ್ಚಮೊಗರು ಗ್ರಾಮದ ಜಿ.ಪಂ.ಮ.ಹಿ.ಪ್ರಾ ಶಾಲೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ರೀಟಾ ಕುಟಿನ್ಹಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಂದಾಯ/ಪಿಂಚಣಿ ಅದಾಲತ್ನಲ್ಲಿ ಈ ಬಗ್ಗೆ ಚಚರ್ೆ ನಡೆದು ಸರಕಾರಿ ಜಾಗವನ್ನು ಹೊರತು ಪಡಿಸಿ ಇತರ ಡೀಮ್ಡ್ ಫಾರೆಸ್ಟ್ ಎಂದು ಈಗಾಗಲೇ ಗುರುತಿಸಿರುವ ಅರಣ್ಯ ಜಾಗದಲ್ಲಿ ಕಡಿಮೆ ಮರಮಟ್ಟುಗಳು ಹೊಂದಿದ್ದರೆ, ಶಾಲೆ, ಅಂಗನವಾಡಿ ಕೇಂದ್ರಗಳಿದ್ದರೆ ಆ ಜಾಗವನ್ನು ರದ್ದುಗೊಳಿಸಲು ಅವಕಾಶವಿದೆ ಎಂದು ಹೇಳಿದರು.
ಈ ಬಗ್ಗೆ ಉತ್ತರಿಸಿದ ಗ್ರಾಮಕರಣಿಕ ಶ್ರೀನಿವಾಸ ಅವರು ಕೆಲವು ಕಡೆಗಳಲ್ಲಿ ಈಗಾಗಲೇ ಜಾಗವನ್ನು ಗುರುತಿಸಲಾಗಿದ್ದು ಸವರ್ೇ ಮಾಡುವ ಕೆಲಸವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಪುಚ್ಚಮೊಗರು ಗ್ರಾಮದಲ್ಲಿ ಸ್ಮಶಾನವಿಲ್ಲ ಇದಕ್ಕೆ ಜಾಗವನ್ನು ಗುರುತಿಸಿ ಎಂದು ಗ್ರಾಮಸ್ಥರು ತಹಶೀಲ್ದಾರರ ಗಮನಕ್ಕೆ ತಂದಾಗ ಸ್ಮಶಾನಕ್ಕೆ 46 ಸೆಂಟ್ಸ್ ಜಾಗವನ್ನು ಗುರುತಿಸಲಾಗಿದೆ ಅದನ್ನು ಪಂಚಾಯತ್ಗೆ ಹಸ್ತಾಂತರಿಸಲಾಗುವುದು ಎಂದು ಗ್ರಾಮಕರಣಿಕರು ಸಭೆಯ ಗಮನಕ್ಕೆ ತಂದರು.
ತನಗೆ ಎರಡು ವರ್ಷಗಳ ಹಿಂದೆ ರೂ 1000ದಂತೆ ಮೂರು ತಿಂಗಳ ಕಾಲ ಪಿಂಚಣಿ ಬರುತ್ತಿತ್ತು ಆದರೆ ಅದರ ನಂತರ ಕೇವಲ 500 ರಂತೆ ಮಾತ್ರ ಬರುತ್ತಿದೆ ಎಂದು ಪುಚ್ಚಮೊಗರುವಿನ ಅಂಗವಿಕಲ ಅಬ್ದುಲ್ ಖಾದರ್ ಅವರು ತಿಳಿಸಿದರು. ತಾವು ಈವರೆಗೆ ಯಾಕೆ ಇಲಾಖೆಯ ಗಮನಕ್ಕೆ ತಂದಿಲ್ಲ..? ತಮಗೆ ಕೊನೆಯದಾಗಿ ಬಂದಿರುವ ಪಿಂಚಣಿಯ ರಶೀದಿಯನ್ನು ಹಿಡಿದುಕೊಂಡು ಕಛೇರಿಗೆ ಬನ್ನಿ ಅಥವಾ ಗ್ರಾಮಕರಣಿಕರ ಮೂಲಕ ತಮಗೆ ತಲುಪಿಸಿ ಈ ಬಗ್ಗೆ ತನಿಖೆ ಮಾಡಲಾಗುವುದು ಎಂದು ತಹಶೀಲ್ದಾರರು ತಿಳಿಸಿದರು.
ಈ ಸಂದರ್ಭದಲ್ಲಿ ಪಿಂಚಣಿಗೆ ಸಂಬಂಧಿಸಿದಂತೆ 10 ಜನರಿಗೆ ಆದೇಶಪತ್ರವನ್ನು ವಿತರಿಸಲಾಯಿತು. ಕಂದಾಯ ನಿರೀಕ್ಷಕ ಸೋಮಶೇಖರ ಮಯ್ಯ ಪಿಂಚಣಿ ಫಲಾನುಭವಿಗಳ ಹೆಸರನ್ನು ವಾಚಿಸಿದರು.
ಉಪ ತಹಶೀಲ್ದಾರ್ ಅಬ್ದುಲ್ ರಹೀಮಾನ್, ಸವರ್ೆ ಸೂಪರ್ವೈಸರ್ ರುಕ್ಮಾಂಗದ, ಹೊಸಬೆಟ್ಟು ಪಿಡಿಒ ಜಯಪ್ರಕಾಶ್, ಪಂಚಾಯತ್ ಸದಸ್ಯ ಚಂದ್ರಹಾಸ್ ಮತ್ತು ಕಛೇರಿ ಸಿಬಂಧಿ ಸುರೇಶ್ಬಾಬು ಉಪಸ್ಥಿತಿತರಿದ್ದರು.
