ಮೂಡಬಿದಿರೆ, ನ. 20; ಆಯುಷ್ಯ ಮತ್ತು ಆರೋಗ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಆರೋಗ್ಯಕ್ಕೆ ಗಮನ ವಹಿಸುವವರು ಆಹಾರದ ಬಗ್ಗೆನು ಕಾಳಜಿ ವಹಿಸುತ್ತಾರೆ. ಆ ನಿಟ್ಟಿನಲ್ಲಿ ಪ್ರಾರಂಭಗೊಂಡ ಆಳ್ವಾಸ್ ಆರೋಗ್ಯ ಸಿರಿ ಹೆಲ್ತ್ ಕಾರ್ಡ್ ಗ್ರಾಮೀಣ ಪ್ರದೇಶದ ಜನರಿಗೂ ತಲುಪಿ, ಅವರೂ ಇದರ ಸದುಪಯೋಗವನ್ನು ಪಡೆಯುವಂತಾಗಲಿ ಎಂದು ಶ್ರೀ ಕ್ಷೇತ್ರ ಒಡಿಯೂರು, ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

mbd_nov20_6(a) mbd_nov20_6

ಆಳ್ವಾಸ್ ಆಯುರ್ವೆದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವಿದ್ಯಾಗಿರಿ ಇದರ ಆಶ್ರಯದಲ್ಲಿ ಡಾ| ವಿ. ಎಸ್ ಆಚಾರ್ಯ ಸಭಾಂಗಣ ವಿದ್ಯಾಗಿರಿಯಲ್ಲಿ ನಡೆದ ಧನ್ವಂತರಿ ಹೋಮ, ಶಿಷ್ಯೋಪನಯನ ಸಂಸ್ಕಾರ ಮತ್ತು ಆಳ್ವಾಸ್ ಆರೋಗ್ಯ ಸಿರಿ ಹೆಲ್ತ್ ಕಾರ್ಡ್  ಬಿಡುಗಡೆ ಗೊಳಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಮಾತನಾಡುತ್ತಾ, ಆಳ್ವಾಸ್ ಶಿಕ್ಷಣ ಸಂಸ್ಥೆ ಶೂನ್ಯದಿಂದ ಬೆಳವಣಿಗೆಯಾದದ್ದು. ಆಯುರ್ವೆದದ ಮಹತ್ವ ಅರಿವಿರುವುದರಿಂದ ವಿದ್ಯಾಗಿರಿಯಲ್ಲೂ ಆಯುರ್ವೆದ ಮೆಡಿಕಲ್ ಕಾಲೇಜು ತೆರೆಯಲಾಗಿದೆ. ಆದರೆ ಆಯುರ್ವೆದ ಮೆಡಿಕಲ್ ಶಿಕ್ಷಣ ಮುಗಿದ ತಕ್ಷಣ ಹೆಣ್ಣು ಮಕ್ಕಳು ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯಲು ಹಿಂದೇಟು ಹಾಕುವುದು ಬಹಳ ಬೇಸರದ ವಿಷಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಯುರ್ವೇದ ಮೆಡಿಕಲ್ ಕಾಲೇಜಿನ ಡೀನ್ ಡಾ| ಬಿ. ಜಿ ಗೋಪಿನಾಥ್ ಇವರನ್ನು ಆಯುರ್ವೇದ  ಕ್ಷೇತ್ರದಲ್ಲಿನ ಸಾಧನೆಗಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಪ್ರಯುಕ್ತ ಹಲವಾರು ಸಾಂಸ್ಕೃತಿಕ ಹಾಗೂ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಅವರಿಗೆ ಬಹುಮಾನ ಕೊಟ್ಟು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಬಿ. ವಿನಯ್ ಚಂದ್ರ ಶೆಟ್ಟಿ, ಆಳ್ವಾಸ್ ಕಾಲೇಜಿನ ಟ್ರಸ್ಟಿ ಸದಸ್ಯ ಅಮರನಾಥ ಶೆಟ್ಟಿ, ಮೆಡಿಕಲ್ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಡಾ| ಶಿಲ್ಪ ಕಾರ್ಯಕ್ರಮ ನಿರ್ವಹಿಸಿದರು.

 

By Suddi9

Leave a Reply

Your email address will not be published. Required fields are marked *