ಬಂಟ್ವಾಳ: ಯಾವುದೇ ಯೋಜನೆ ಅಥವಾ ಪ್ರದೇಶ ಅಭಿವೃದ್ದಿಯಾಗಬೇಕಾದರೆ ಜನಸಾಮಾನ್ಯರ ಸಹಕಾರ ಅಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಮಂಗಳವಾರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆದ ಪುದು ಗ್ರಾಮಪಂಚಾಯತ್ ವ್ಯಾಪ್ತಿಯ ಅಹವಾಲು ಸ್ವೀಕಾರ ಹಾಗೂ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ಅಭಿವೃದ್ದಿ ಕೆಲಸ ಕೈಗೊಳ್ಳುವ ಮೊದಲು ಹಿರಿಯರ ಮಾರ್ಗದರ್ಶನ ಪಡೆದು ಯುವಕರು ಮುಂದುವರಿಯ ಬೇಕು. ಏನೇ ಸಮಸ್ಯೆ ಬಂದರೂ ಅದನ್ನು ಶಾಂತಿಯುತವಾಗಿ ಬಗೆಹರಿಸ ಬೇಕು ಎಂದು ಕಿವಿಮಾತು ನುಡಿದರು. ಶಾಂತಿ ಕದಡುವವರ ವಿರುದ್ದ ಪೊಲೀಸರು ಕೈಗೊಳ್ಳುವ ಕಟ್ಟುನಿಟ್ಟಿನ ಕ್ರಮಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದರು.
ಗಾಂಜಾ ಮಾರಾಟ ಮಾಡುವವರಿಗೆ ಶಿಕ್ಷೆ ನೀಡಿ:

BTW_NOV18_6
ಗಾಂಜಾ ಸೇವಿಸಿ ದುಷ್ಕೃತ್ಯದಲ್ಲಿ ತೊಡಗುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಲ್ಲದೆ ಗಾಂಜಾ ಮಾರಾಟ ಮಾಡಿದವನ ಮೇಲೂ ಕಾನೂನು ಕ್ರಮ ಜರುಗಿಸುವಂತೆ ಸಚಿವ ಖಾದರ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಹಟ್ಟಿಯಿಂದ ದನ ಕಳವು ನಡೆಸುವ ಕಳ್ಳರ ವಿರುದ್ದ ಪೊಲೀಸರು ಯಾವುದೇ ಕ್ರಮ ಜರುಗಿಸುತ್ತಿಲ್ಲ ಅಲ್ಲದೆ ಕೆಲ ಅಂಗಡಿಗಳ ಹಿಂಬದಿಯಲ್ಲಿ ಶಾಲಾ ಮಕ್ಕಳು ಸಿಗರೇಟು ಸೇವನೆ ಮಾಡುತ್ತಿದ್ದರೂ ಅಂಗಡಿದಾರರ ವಿರುದ್ದ ಪೊಲೀಸರು ಕ್ರಮ ಜರುಗಿಸಿಲ್ಲ ಎಂದು ಮಹಿಳೆಯೊಬ್ಬರು ದೂರಿದಾಗ, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ಅವರಿಗೆ ಸಚಿವ ಖಾದರ್ ಸೂಚಿಸಿದರು. ಬಳಿಕ ಸಚಿವರು ಅಂಗವಿಕಲ ಫಲಾನಿಭವಿಗಳಿಗೆ ಗಾಲಿಕುಚರ್ಿಹಾಗೂ ಗ್ಯಾಸ್ ಸ್ಟೌ ವಿತರಿಸಿದರು.
ವೇದಿಕೆಯಲ್ಲಿ ಮಾಜಿ ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್, ತಾ.ಪಂ.ಸದಸ್ಯ ಆಸಿಫ್ ಇಕ್ಬಾಲ್, ಪುದು ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷ ಮಹಮ್ಮದ್ ಶರೀಫ್, ಮಾಜಿ ಉಪಾಧ್ಯಕ್ಷ ಅಹಮ್ಮದ್ ಬಾವಾ, ಮೇರಮಜಲು ಗ್ರಾ.ಪಂ.ಅಧ್ಯಕ್ಷೆ ವೃಂದಾ ಪೂಜಾರಿ, ತಹಶೀಲ್ದಾರ್ ಮಲ್ಲೇಸ್ವಾಮಿ, ತಾ.ಪಂ.ಕಾರ್ಯನಿವರ್ಾಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಕಾರಂತ, ತೋಟಗಾರಿಕಾ ಇಲಾಖಾ ಸಹಾಯಕ ನಿದರ್ೇಶಕ ಸಂಜೀವ ನಾಯ್ಕ್, ಜಿ.ಪಂ.ಎಂಜಿನಿಯರ್ ಕೃಷ್ಣ, ಆರೋಗ್ಯಾಧಿಕಾರಿ ಡಾ.ಮಂಜುನಾಥ, ವೃತ್ತನಿರೀಕ್ಷಕ ಬೆಳಿಯಪ್ಪ, ಗ್ರಾಮಾಂತರ ಎಸೈ ರಕ್ಷಿತ್, ಸೇವಾಂಜಲಿ ಪ್ರತಿಷ್ಠಾನದ ಕೃಷ್ಣಕುಮಾರ್ ಪೂಂಜಾ ಮತ್ತಿತರರು ಹಾಝರಿದ್ದರು. ಅಬ್ದುಲ್ ಖಾದರ್ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *