ಸುದ್ದಿ9ಮೂಡುಬಿದರೆ: ನ 14ರಿಂದ 16ರವರೆಗೆ ವಿದ್ಯಾಗಿರಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯಲಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ `ಆಳ್ವಾಸ್ ನುಡಿಸಿರಿ-2014’ಕ್ಕೆ ಪೂರಕವಾಗಿ ಆಳ್ವಾಸ್ ಕೊಂಕಣಿ ಸಿರಿ 2014 ನ15ರಂದು ವಿದ್ಯಾಗಿರಿಯಲ್ಲಿ ನಡೆಯಲಿದೆ .
ನ15ರ ಸಂಜೆ 5.30ರಿಂದ 10.30ರವರೆಗೆ ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ನಡೆಯಲಿರುವ ಈ ಆಳ್ವಾಸ್ ಕೊಂಕಣಿ ಸಿರಿ ನಡೆಯುವ ವೇದಿಕೆಗೆ ವಿಲ್ಫಿ ರೆಬಿಂಬಸ್ ವೇದಿಕೆ ಎಂದು ಹೆಸರಿಸಲಾಗಿದ್ದು ಬಿ.ವಿ.ಬಾಳಿಗಾ ದ್ವಾರದ ಟಿ.ಎಂ.ಎ.ಪೈ ಸಭಾಂಗಣದಲ್ಲಿ ಕೊಂಕಣಿ ಸಿರಿ ಮೂಡಿ ಬರಲಿದೆ.
ಸಂಜೆ 5.30ರಿಂದ ಮೂಡುಬಿದರೆಯ ನೂರು ಗಾಯಕರಿಂದ ಸ್ವಾಗತಗೀತೆಯೊಂದಿಗೆ ಆರಂಭವಾಗುವ ಕೊಂಕಣಿ ಸಿರಿಯನ್ನು ಮಂಗಳೂರಿನ ಬಿಷಪ್ ಅತೀ ವಂದನೀಯ ಎಲೋಶಿಯಸ್ ಪಾವ್ಲಾ ಡಿ.ಸೋಜಾ ಉದ್ಘಾಟಿಸಲಿದ್ದಾರೆ. ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರೋಯ್ ಕ್ಯಾಸ್ತೆಲಿನೋ ಮುಖ್ಯ ಅತಿಥಿಯಾಗಿ, ಹಾಗೂ ಅತಿಥಿಗಳಾಗಿ ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಜೆ.ಆರ್. ಲೋಬೋ, ವಿಧಾನ ಪರಿಷತ್ ಸದಸ್ಯ ಐವನ್ ಡಿ.ಸೋಜಾ, ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರುಗಳಾದ ಎರಿಕ್ ಒಝಾರಿಯೋ, ಕಾಸರಗೋಡು ಚಿನ್ನಾ, ಕುಡುಬಿ ಸಮಾಜ ಸಂಘದ ರಾಜ್ಯಾಧ್ಯಕ್ಷ ಎಂ.ರಾಮ ಗೌಡ, ಮೂಡುಬಿದರೆಯ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಂಗಳೂರಿನ ಮಾಂಡ್ ಸೊಭಾಣ್ , ವಿಶ್ವ ಕೊಂಕಣಿ ಕೇಂದ್ರ ಶಕ್ತಿನಗರ, ಭಟ್ಕಳದ ಅಂಜುಮಾನ್ – ಇ-ರಹಮ್ಮಾನಿಯಾ ಅಹಮ್ಮದೀಯ ಸುನ್ನಿ ಟ್ರಸ್ಟ್, ಯಕ್ಷಗಾನ ಕಲಾವಿದ ಮಿಜಾರು ಅಣ್ಣಪ್ಪ,ಗಿನ್ನೆಸ್ ದಾಖಲೆಯ ಈಜುಗಾರ ಗೋಪಾಲ ಖಾವರ್ಿಅವರನ್ನು ಸಮ್ಮಾನ ಕಾರ್ಯಕ್ರಮವಿದೆ.
ಬಳಿಕ ಕೊಂಕಣಿ ನಿನ್ನೆ ಇಂದು ಮತ್ತು ನಾಳೆ ಪರಿಕಲ್ಪನೆಯಲ್ಲಿ ಕೊಂಕಣಿ ಕಲೆ ಮತ್ತು ಸಂಸ್ಕೃತಿ ಕುರಿತು ಪ್ರೊ. ಜಯವಂತ ನಾಯಕ್, ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಕುರಿತು ಪ್ರೊ. ವಿನ್ಸೆಂಟ್ ಆಳ್ವ ಪಾಂಬೂರು ಅವರಿಂದ ಉಪನ್ಯಾಸ ನಡೆಯಲಿದೆ.
ಸಂಜೆ 7ರಿಂದ 10.30ರವರೆಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಡಪದವಿನ ಕುಡ್ಮಿ ಜಾನಪದ ಕಲಾವೇದಿಕೆಯಿಂದ ಕುಡ್ಮಿ ಗುಮ್ಟಾಂ ಮತ್ತು ಕೋಲಾಟ, ಭಟ್ಕಳದ ಖಾವರ್ಿ ಕಲಾಮಾಂಡ್ ವತಿಯಿಂದ ಖಾವರ್ಿ ಕಲಾ ಪ್ರದರ್ಶನ, ಮುಂಡಗೋಡದ ಸಿದ್ಧಿ ಕಲಾತಂಡದಿಂದ ಸಿದ್ಧಿ ಕಲಾ ಪ್ರದರ್ಶನ, ಶೀರೂರಿನ ನಾಕುದಾ ದಫ್ ಸಮಿತಿ ವತಿಯಿಂದ ದಾಲ್ದಿ-ದಫ್, ಕೊಂಕಣಿ ಸಾಂಸ್ಕೃತಿಕ ಸಂಘದಿಂಧ ಜಿ.ಎಸ್.ಬಿ. ಸಾಂಸ್ಕೃತಿಕ ಪ್ರದರ್ಶನ, ಕೊಂಕ್ಣಿ ಮ್ಹಜೊ ಫುಡಾರ್ -ಕಲಾಕುಲ್ ತಂಡದಿಂದ ಬೀದಿ ನಾಟಕ, ಮಂಗಳೂರಿನ ನಾಚ್ ಸೊಭಾಣ್ ವತಿಯಿಂದ ಕೊಂಕಣಿ ನೃತ್ಯ , ಕಾರ್ಕಳದ ಮಹಾಲಕ್ಷ್ಮೀ ಶೆಣೈಯವರಿಂದ ಹಾಡುಗಾರಿಕೆ ನಡೆಯಲಿದೆ.
ಭಾಷಾ ಸಾಮರಸ್ಯ ಇಂದಿನ ಬಹು ಮುಖ್ಯ ಅಗತ್ಯವಾಗಿರುವುದರಿಂದ ಪ್ರಾದೇಶಿಕ ಭಾಷೆಯ ಜನರು ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುವ ಅವಕಾಶದ ಮೂಲಕ ಪ್ರಧಾನ ಭಾಷೆಯಾದ ಕನ್ನಡದ ಜೊತೆಗೆ ಅನುಸಂಧಾನ ನಡೆಸಿದಂತಾಗುತ್ತದೆ. ಜೊತೆಗೆ ಆಯಾ ಭಾಷಾ ಸಂಸ್ಕೃತಿಯನ್ನು ಇತರ ಭಾಷಾ ಬಾಂಧವರಿಗೆ ಪರಿಚಯಿಸಿ ಪರಸ್ಪರ ಗೌರವ, ತಮ್ಮ ತಮ್ಮ ಭಾಷೆ – ಸಂಸ್ಕೃತಿಗಳಲ್ಲಿ ಗೌರವನ್ನಿಟ್ಟುಕೊಂಡು ಅನ್ಯ ಭಾಷಾ ಸಂಸ್ಕೃತಿಗಳನ್ನು ಗೌರವಿಸುವ ಮನೋಭಾವ ನಮ್ಮದಾಗಬೇಕು. ಆ ಮೂಲಕ ಪ್ರದೇಶ-ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಸಾಮರಸ್ಯ ಮೂಡಬೇಕು. ಈ ಸಣ್ಣ ಪ್ರಯತ್ನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸುವ ಮೂಲಕ ಕೊಂಕಣಿಭಾಷಾ ನುಡಿವೈಭವವದ ಯಶಸ್ಸಿಗೆ ಸಹಕರಿಸವಂತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
………..

By Suddi9

Leave a Reply

Your email address will not be published. Required fields are marked *