ಮೂಡುಬಿದರೆ: ಶಿರ್ತಡಿಯಲ್ಲಿ ಹೊಸದಾಗಿ ಆರಂಭಗೊಳ್ಳಲಿರುವ ಸಹಕಾರಿ ಬ್ಯಾಂಕೊಂದರ ಕ್ಯಾಶ್ ಲಾಕರ್ ಗೊಳಗೆ ಬುಧವಾರ ಕಾರ್ಮಿಕ ಸಿಕ್ಕಿಬಿದ್ದು ಸುಮಾರು 2 ತಾಸು ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಶಿರ್ತಾಡಿ ಪೇಟೆಯ ವಾಣಿಜ್ಯ ಸಂಕೀರ್ಣದಲ್ಲಿ ಸಹಕಾರಿ ಬ್ಯಾಂಕೊಂದರ ಶಾಖಾ ಕಛೇರಿಯ ಕೆಲಸ ನಡೆಯುತ್ತಿದೆ. ಕೆಲಸ ಬಹುತೇಕ ಮೂರ್ಣಗೊಂಡಿದೆ. ಭದ್ರತಾ ಕೊಠಡಿಯಲ್ಲಿ ಕ್ಯಾಶ್ ಲಾಕರನ್ನಿರಿಸಲಾಗಿತ್ತು. ಅದರ ಬಾಗಿಲು ತೆರೆದಿದ್ದು ಬಾಗಿಲು ಮುಚ್ಚದಂತೆ ಕಲ್ಲು ಅಡ್ಡ ಇಡಲಾಗಿತ್ತು. ಬುಧವಾರ ಬೆಳಿಗ್ಗೆ ಬೆಳುವಾಯಿಯ ಅಶ್ಪಾಕ್(23)ಎಂಬ ಕಾರ್ಮಿಕ ಲಾಕರ್ನೊಳಗೆ ಹೋಗಿ ಸ್ವಚ್ಚಗೊಳಿಸುತ್ತಿದ್ದ. ಹೊರಗಡೆ ಇನ್ನು ಕೆಲವರು ಕಲಸ ಮಾಡುತ್ತಿದ್ದು ಲಾಕರ್ ಬಾಗಿಲಿಗೆ ಅಡ್ಡ ಇಟ್ಟಿದ್ದ ಇಟ್ಟಿಗೆಯನ್ನು ಅರಿವಿಲ್ಲದೆ ತೆಗೆದಾಗ ಲಾಕರ್ ಬಾಗಿಲು ಬಿತ್ತೆನ್ನಲಾಗಿದೆ.
ನಂತರ ಕೆಲಸಗಾರರು ಚಾ ಕುಡಿಯಲು ಹೊಟೇಲ್ಗೆ ಹೋದರು. ಇತ್ತ ಒಳಗಡೆ ಅಶ್ಪಾಕ್ ಇರುವುದು ಹೊರಗಿನವರಿಗೆ ಗೊತ್ತಿಲ್ಲ. ಆತ ಮೂಕ ಮತ್ತು ಕಿವುಡ ಆಗಿದ್ದರಿಂದ ಬೊಬ್ಬೆ ಹೊಡೆಯಲಾಗಲಿಲ್ಲ. ಹೊಟೇಲ್ಗೆ ಹೋದವರು ವಾಪಾಸು ಬಂದಾಗ ಲಾಕರ್ನೊಳಗೆ ಬಾಗಿಲು ಬಡಿಯುವ ಸದ್ದು ಕೇಳಿತು. ನೋಡಿದಾಗ ಒಳಗಡೆ ಅಶ್ಪಾಕ್ ಇರುವುದು ಗಮನಕ್ಕೆ ಬಂತು. ಲಾಕರ್ಗೆ ಬೀಗ ಬಿದ್ದಿರುವುದರಿಂದ ಕೀ ಇಲ್ಲದೆ ತೆಗೆಯಲು ಸಾಧ್ಯವಾಗಿತ್ತು.
ಸ್ಥಳಿಯ ವೈದ್ಯ ಅನಿಲ್ ಕುಮಾರ್ ಅವರು ಲಾಕರ್ ರಂಧ್ರದ ಮೂಲಕ ಅಶ್ಪಾಕ್ಗೆ ಆಕ್ಸಿಜನ್ ನೀಡಿ ಸುಲಲಿತ ಉಸಿರಾಟಕ್ಕೆ ಅನುಕೂಲ ಮಾಡಿಕೊಟ್ಟರು. ಬ್ಯಾಂಕ್ನ ಮಂಗಳೂರು ಕೆಂದ್ರ ಕಚೇರಿಯಿಂದ ಲಾಕರ್ನ ಕೀ ತಂದು ಬಾಗಿಲು ತೆರೆದು ಕಾರ್ಮಿಕನನ್ನು ಹೊರತರಲಾಯಿತು. ಅಶ್ಪಾಕ್ ಭಯಭೀತಿಯಿಂದ ಸುಮಾರು 2 ಗಂಟೆ ಲಾಕರ್ನಲ್ಲಿ ಕಾಲ ಕಳೆದಿದ್ದನೆನ್ನಲಾಗಿದೆ.


