ಬಂಟ್ವಾಳ: ನಾಲ್ಕು ಕಾಲಿನ ಕೋಳಿ ಮರಿಯೊಂದು ಜನಿಸುವ ಮೂಲಕ ಅಚ್ಚರಿ ಮೂಡಿಸಿದೆ. ಬಂಟ್ವಳ ತಾಲೂಕಿನ ತುಂಬೆ ಗ್ರಾಮದ ಗಾಣದ ಲಚ್ಚಿಲ್ ಎಂಲ್ಲಿನ ಪದ್ಮಾವತಿ ಎಂಬವರ ಮನೆಯಲ್ಲಿ ಪ್ರಕೃತಿಯ ಈ ವೈಚಿತ್ರ ಮೂಡಿ ಬಂದಿದ್ದು ಸ್ಥಳೀಯವಾಗಿ ಜನರಲ್ಲಿ ಕುತೂಹಲ ಮೂಡಿಸಿದೆ.
6 (1)

5
ಇವರ ಮನೆಯ ಸಾಕು ಕೋಳಿಯೊಂದು ಮೊಟ್ಟೆ ಇಟ್ಟು 12 ಮರಿಗಳಿಗೆ ಎರಡು ದಿನಗಳ ಹಿಂದೆಯಷ್ಟೇ ಜನ್ಮ ನೀಡಿತ್ತು. ಈ ಪೈಕಿ ಒಂದು ಕೋಳಿ ಮರಿ ವಿಶೇಷವಾಗಿ ಕಮಡು ಬಂದಿದ್ದು ಸರಿಯಾಗಿ ಪರಿಶೀಲಸಿದಾಗ ನಾಲ್ಕು ಕಾಲುಗಳಿರುವುದು ಕಂಡು ಬಂದಿದೆ. ಹಿಂದಿನ ಗುದ ಭಾಗದಲ್ಲಿ ಎರಡು ಹೆಚ್ಚುವರಿ ಕಾಲುಗಳಿದ್ದು ಬಲ ಹೀನವಾಗಿದೆ. ಇತರ ಕೋಳಿ ಮರಿಗಳಂತೆ ಈ ಮರಿಯೂ ಆರೋಗ್ಯಕರವಾಗಿದ್ದು ಆಚೀಚೆ ಓಡಾಡುತ್ತದೆ. ಅದರೆ ಇದೀಗ ಕೋಳಿಗೆ ನಾಲ್ಕು ಕೋಳಿ ಮರಿಗೆ ನಾಲ್ಕು ಕಾಲು ಇದೆ ಎನ್ನುವ ಸುದ್ದಿ ತಿಳಿದು ಕುತೂಹಲಿಗರ ದಂಡು ಮನೆಗೆ ಭೇಟಿ ನೀಡುವ ದೃಶ್ಯ ಕಂಡು ಬಂದಿದೆ.

By Suddi9

Leave a Reply

Your email address will not be published. Required fields are marked *