ಸುದ್ದಿ9ಮೂಡುಬಿದರೆ: ಭಾರತದ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಬಯಲು ಶೌಚ ವ್ಯವಸ್ಥೆಯಿದೆ. ಬಯಲು ಶೌಚ ಮಾಡುವುದರಿಂದ ಹಲವಾರು ಖಾಯಿಲೆಗಳು ತುತ್ತಾಗುತ್ತೇವೆ. ರಕ್ತಹೀನತೆಗೂ ಶೌಚದಿಂದ ಶುಚಿತ್ವ ಹಾಗೂ ಶೌಚಾಲಯ ವ್ಯವಸ್ಥೆಯಲ್ಲಿನ ಅಪನಂಬಿಕೆಗಳು ಬದಲಾಗಬೇಕು. ಪ್ರತಿಯೊಂದು ಮನೆಯಲ್ಲೂ ಶೌಚಾಲಯ ನಿರ್ಮಾಣವಾಗಬೇಕು ಎಂದು ಮೂಡುಬಿದರೆ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ತಿಳಿಸಿದರು.
ಮೂಡುಬಿದರೆ ರೋಟರಿ ಕ್ಲಬ್ನ ವತಿಯಿಂದ ರೋಟರಿ ಸಮ್ಮಿಲನ್ ಹಾಲ್ನಲ್ಲಿ ನಡೆದ 11 ಫಲಾನುಭವಿಗಳಿಗೆ ರೋಟರಿಯಿಂದ ಶೌಚಾಲಯ ಕೊಡುಗೆಯನ್ನು ಹಸ್ತಾಂತರ ಕಾರ್ಯಕ್ರಮದಲ್ಲಿ ಶೌಚಾಲಯ ಹಾಗೂ ಶುಚಿತ್ವ ಬಗ್ಗೆ ಮಾತನಾಡಿದರು. ಮಲಿನತೆಗೆ ಅದನ್ನು ಮಾಡುವವರು ಮಾತ್ರ ಜವಾಬ್ದಾರರಲ್ಲ ಇಡೀ ಸಮಾಜ ಜವಾಬ್ದಾರಿ. ಸಮಾಜದ ಶುಚಿತ್ವ ಎಲ್ಲರ ಹೊಣೆ ಎನ್ನುವ ಧ್ಯೇಯದೊಂದಿಗೆ ಶೌಚಾಲಯ ನಿಮರ್ಿಸುವಂತೆ ಉತ್ತಮ ಕಾರ್ಯಕ್ರಮಗಳ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಪ್ರೊ.ಕುರಿಯನ್ ರೋಟದ್ರಿ ಮಾಸಿಕದ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಶೌಚಾಲಯ ನಿಮರ್ಾಣ ಯೋಜನೆಯ ದಾನಿಗಳಾದ ರೋಟರಿ ಪದಾಧಿಕಾರಿಗಳು ಫಲಾನುಭವಿಗಳಿಗೆ ಶೌಚಾಲಯ ಶುಚಿತ್ವದ ವಸ್ತುಗಳನ್ನು ನೀಡುವ ಮೂಲಕ ಸಾಂಕೇತಿಕವಾಗಿ ಹಸ್ತಾಂತರಿಸಿದರು. ರೋಟರಿ ಸದಸ್ಯರು ನೇತ್ರದಾನದ ಸಂಕಲ್ಪ ಮಾಡಿದರು. ಡಾ.ಅರವಿಂದ ಕಿಣಿ ನೇತ್ರದಾನದ ಬಗ್ಗೆ ತಿಳಿಸಿದರು.
ಕಡಿಮೆ ವೆಚ್ಚದಲ್ಲಿ ಶೌಚಾಲಯವನ್ನು ನಿಮರ್ಿಸಿಕೊಟ್ಟ ಸದಾನಂದ ಹಾಗೂ ಸಾರಥಿ.ನಂ.1 ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಯಶೋನಂದ(ಚಂದಣ್ಣ) ಅವರನ್ನು ಸನ್ಮಾನಿಸಲಾಯಿತು. ಮೂಡುಬಿದರೆ ರೋಟರಿ ಕ್ಲಬ್ನ ಅಧ್ಯಕ್ಷ ಡಾ.ಮುರಳಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದಶರ್ಿ ಜೆ.ಡಬ್ಲ್ಯೂ.ಪಿಂಟೋ ಉಪಸ್ಥಿತರಿದ್ದರು. ಎ.ಕೆ ರಾವ್ ಅವರು ಮಂಕುತಿಮ್ಮನ ಕಗ್ಗ ಹಾಗೂ ದೀಪಾವಳಿ ಕುರಿತ ಮಾಹಿತಿ ನೀಡಿದರು. ವಿದೇಶ ಪ್ರಯಾಣ ವಿವರವನ್ನು ನಾರಾಯಣ.ಪಿ.ಎಂ ನೀಡಿದರು. ಡಾ.ಕೃಷ್ಣರಾಜ್ ಸನ್ಮಾನಿತರ ಬಗ್ಗೆ ತಿಳಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

005pp

005p
………..

 

By Suddi9

Leave a Reply

Your email address will not be published. Required fields are marked *