ಬಂಟ್ವಾಳ:ಬೆಳಕಿನ ಹಬ್ಬವು ಸಮಾಜದಲ್ಲಿರುವ ದುಷ್ಟ ಚಿಂತನೆ ಮತ್ತಿತರ ಅಂಧಕಾರ ತೊಳೆದು ಪರಸ್ಪರ ಸೌಹಾರ್ದತೆ ಮತ್ತು ಸ್ನೇಹಮಯ ಬದುಕು ರೂಪಿಸುವಪರಿಶುದ್ಧ ಬೆಳಕನ್ನು ನೀಡುವ ಮೂಲಕ ದೀಪಾವಳಿ ಹಬ್ಬ ಜಗತ್ತಿನಾದ್ಯಂತ ನಡೆಯುತ್ತಿದೆ. ತುಳುನಾಡಿನಲ್ಲಿ ಪ್ರಕೃತಿ ಮತ್ತು ಕೃಷಿ ಜೊತೆಗೆ ದೀಪಾವಳಿ ಹಬ್ಬಕ್ಕೆ ವಿಶೇಷ ನಂಟು ಇದೆ ಎಂದು ತುಳು ಭಾಷಾ ವಿದ್ವಾಂಸ ಕೆ.ಕೆ. ಪೇಜಾವರ ಹೇಳಿದರು.

ಬಂಟ್ವಾಳ ತಾಲ್ಲೂಕಿನ ಯುವವಾಹಿನಿ ಘಟಕ ಮತ್ತು ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗುರುವಾರ ರಾತ್ರಿ ಏರ್ಪಡಿಸಿದ್ದ ‘ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆ ‘ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
24btl-2
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಪ್ರೇಮನಾಥ ಕೆ. ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ. ಕುಲಾಲ್, ವಿಶ್ವ ತುಳು ಪರ್ಬ ಕಾರ್ಯಕ್ರಮ ಸಂಯೋಜಕ ಎ.ಸಿ.ಭಂಡಾರಿ, ಜಿ.ಪಂ.ಸದಸ್ಯ ಆರ್.ಚೆನ್ನಪ್ಪ ಕೊಟ್ಯಾನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್ ಮತ್ತಿತರರು ಶುಭ ಹಾರೈಸಿದರು.
ಬಂಟ್ವಾಳ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೊಟ್ಯಾನ್ ‘ತುಡರ್ ಪರ್ಬ’ ಕಾರ್ಯಕ್ರಮವನ್ನು ತುಳುನಾಡಿನ ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು.

ಅಗ್ರಬೈಲು ಮೋಹನ ಪೂಜಾರಿ ‘ಗೋಪೂಜೆ’ ನೆರವೇರಿಸಿದರು. ಉದ್ಯಮಿ ಸದಾನಂದ ಶೆಟ್ಟಿ ರಂಗೋಲಿ ಇವರು ಗೂಡುದೀಪ ಸ್ಪರ್ಧೆ ಹಾಗೂ ಬಂಟ್ವಾಳ ತಾಲ್ಲೂಕು ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ಮಾಲತಿ ಸಂಜೀವ ಪೂಜಾರಿ ರಂಗೋಲಿ ಸ್ಪರ್ಧೆ ಉದ್ಘಾಟಿಸಿದರು. ಪ್ರಮುಖರಾದ ಭುವನೇಶ ಪಚ್ಚಿನಡ್ಕ, ಬಿ.ತಮ್ಮಯ್ಯ ಮತ್ತಿತರರು ಇದ್ದರು.
ಸಮಿತಿ ಸಂಚಾಲಕ ಬಿ. ಶ್ರೀಧರ ಅಮೀನ್ ಸ್ವಾಗತಿಸಿ, ನಾಗೇಶ್ ಎಂ. ಪ್ರಾಸ್ತಾವಿಕ ಮಾತನಾಡಿದರು. ಘಟಕ ಕಾರ್ಯದರ್ಶಿ ಹರೀಶ್ ಸಾಲ್ಯಾನ್ ಅಜೆಕ್ಕಳ ವಂದಿಸಿದರು. ರಂಗಭೂಮಿ ಕಲಾವಿದ ಎಚ್ಕೆ ನಯನಾಡು ಮತ್ತು ಸುಲತಾ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *