ಮುಂಬೈ : ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರಾಗುತ್ತಾರೆ ಅನ್ನುವ ಕುತೂಹಲಕ್ಕೆ ಸಧ್ಯಕ್ಕೆ ಉತ್ತರ ಸಿಗುವುದಿಲ್ಲ. ಮಹಾ ಸಕರ್ಾರ ರಚನೆಗೆ ಮತ್ತಷ್ಟು ವಿಳಂಬವಾಗಲಿದೆ. ದೀಪಾವಳಿ ಬಳಿಕ ಮಹಾರಾಷ್ಟ್ರದ ಸಿಎಂ ಕುರಿತು ನಿಧರ್ಾರವಾಗಲಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಬಿಜೆಪಿ ವೀಕ್ಷಕರ ಮುಂಬೈ ಭೇಟಿ ರದ್ದಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದಶರ್ಿ ಜೆ. ಪಿ.ನಡ್ಡಾ ಭೇಟಿ ರದ್ದಾಗಿದೆ. ಶಾಸಕರು ದೀಪಾವಳಿ ಹಬ್ಬ ಇರುವುದರಿಂದ ತಮ್ಮ ತಮ್ಮ ಊರಿಗೆ ತೆರಳಿರುವ ಹಿನ್ನೆಲೆಯಲ್ಲಿ ದೀಪಾವಳಿ ಬಳಿಕ ಶಾಸಕಾಂಗ ಸಭೆ ನಡೆಸಲಾಗತ್ತದೆ ಎನ್ನಲಾಗಿದೆ.

