ಬಂಟ್ವಾಳ: ಬಂಟ್ವಾಳ ತಾಲೂಕಿನ ಜನತೆಯ ಬಹುವರ್ಷಗಳ ಬೇಡಿಕೆಯಂತೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸುಸಜ್ಜಿತ ಕಟ್ಟಡವೇನೋ ನಿರ್ಮಾಣಗೊಂಡಿದೆ. ಆದರೆ ಕಟ್ಟಡ ಉದ್ಘಾಟನೆಗೆ ಇನ್ನೂ ಮುಹೂರ್ತ ನಿಗದಿಯಾಗದ ಕಾರಣ ಉದ್ಘಟನೆಗೂ ಮುನ್ನವೇ ತರಗತಿಗಳು ಕಾರ್ಯರಂಭಗೊಂಡಿದೆ.


ಬಂಟ್ವಾಳ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸದ್ಯದ ಸ್ಥಿತಿ ಇದು. ಕಳೆದ ಹಲವು ವರ್ಷಗಳಿಂದ ವಗ್ಗದ ಪಂಚಾಯತ್ ಬಳಿಯ ಕಟ್ಟಡದಲ್ಲಿ ಮೊರಾರ್ಜಿ ವಸತಿ ಶಾಲೆ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ. ಆದರೆ ಕಿರಿದಾದ ಕಟ್ಟಡದಲ್ಲಿ ವಸತಿ ಶಾಲೆ ಕಾರ್ಯನಿರ್ವಹಿಸ ಬೇಕಾದ ಅನಿವಾರ್ಯತೆಯಿಂದ ಇಲ್ಲಿಗೆ ಬರುತ್ತಿದ್ದ ವಿದ್ಯಾರ್ಥಿಗಳು ತೊಂದರೆ ಪಡಬೇಕಾಗಿತ್ತು. ಹಂಚಿನ ಛಾವಣಿಯ ಕೊಠಡಿಯಿಂದಾಗಿ ಮಳೆಗಾಲದಲ್ಲಿ ನೀರು ಸೋರಿಕೆ ಉಂಟಾಗಿ ವಿದ್ಯಾರ್ಥಿಗಳು ಪರಿ ತಪಿಸ ಬೇಕಾಗಿತ್ತು.
ಆದರೂ ಇದೇ ಕೊಠಡಿಯಲ್ಲಿ ಇದ್ದುಕೊಂಡು ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸ ಬೇಕಾಗಿತ್ತು. ಈ ನಿಟ್ಟಿನಲ್ಲಿ ವಗ್ಗದ ಆಲಂಪುರಿ ಎಂಬಲ್ಲಿ ಸುಮಾರು ಒಂದೂವರೆ ಎಕರೆ ಜಮೀನನ್ನು ಖರೀಸಿದಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಶ್ರಯದಲ್ಲಿ ಬಿಸಿಎಂ ಇಲಾಖೆ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿದೆ. ಆದರೆ ಉದ್ಘಾಟನೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ.
ಇತ್ತ ಹಳೇ ಕಿರಿದಾದ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ, ವಸತಿ ನೀಡಲು ಸಾಧ್ಯವಾಗದೆ ಉದ್ಘಾಟನೆಗೂ ಮುನ್ನವೇ ಕಾರ್ಯರಂಭ ಗೊಳಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆದಷ್ಟೂ ಬೇಗ ಮೊರಾರ್ಜಿ ದೇಸಾಯಿ ನೂತನ ವಸತಿ ಶಾಲೆಯನ್ನು ಉದ್ಘಾಟನೆಗೊಳಸಿಸುವುದಾಗು ಜಿಲ್ಲಾ ಉಸ್ತುವರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
