ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 22 ದಿನಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದ್ದ ತಮಿಳುನಾಡುವಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರರಿಗೆ ಕೋಟರ್್ ಮಧ್ಯಂತರ ಜಾಮೀನು ಮಂಜೂರು ಮಾಡಿರುವುದರಿಂದ ಕೊನೆಗೂ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

jaya27

jaya ಜಯಲಲಿತಾ ಅವರ ಆಪ್ತ ಶಶಿಕಲಾ ನಟರಾಜನ್, ದತ್ತುಮಕ್ಕಳಾದ ಇಳವರಸಿ, ಸುಧಾಕರನ್ ಜೈಲಿನಿಂದ ಬಿಡುಗಡೆಗೊಂಡು ಬರುತ್ತಿದ್ದು ಇಲ್ಲಿಂದ ನೇರವಾಗಿ ಚೆನ್ನೈಗೆ ವಿಮಾನದ ಮೂಲಕ ಪಾದಬೆಳೆಸಲಿದ್ದಾರೆ. ಅವವರಿಗೆ ಝಡ್ ಪ್ಲಸ್ ಭದ್ರತೆಯನ್ನು ಒದಗಿಸಲಾಗಿದೆ. ಜಯಲಲಿತಾ ಅವರನ್ನು ಬೆಳಗ್ಗಿನಿಂದ ಕಾದುಕುಳಿತಿದ್ದ ತಮಿಳುನಾಡು ಮುಖ್ಯಮಂತ್ರಿ ಹಾಗೂ ಸಚಿವಸಂಪುಟ ಜಯಾ ಸ್ವಾಗತಕ್ಕೆ ಪರಪ್ಪನ ಆವರಣದ ರಸ್ತೆಯ ಬದಿಯಲ್ಲೇ ಕಾದುಕುಳಿತಿದ್ದಾರೆ. ಪೊಲೀಸರು ಭಾರೀ ಭದ್ರತೆ ಒದಗಿಸಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಅಭಿಮಾನಿಗಳ ಹಷರ್ೋದ್ಘಾರ ಮುಗಿಲುಮುಟ್ಟಿದ್ದು, ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸುಪ್ರೀಂಕೋಟರ್್ ನೀಡಿದ್ದ ಜಾಮೀನಿನ ಆದೇಶದ ಪ್ರತಿಯನ್ನು ಜಯಾ ಪರ ವಕೀಲರು ಇಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಬೆಂಗಳೂರಿನ ವಿಶೇಷ ಕೋಟರ್್ಗೆ ಸಲ್ಲಿಸಿದರು. ಈ ಆದೇಶ ಪ್ರತಿಯನ್ನು ಪರಿಶೀಲಿಸಿದ ನ್ಯಾಯಮೂತರ್ಿಗಳು ಜಯಾ ಶ್ಯೂರಿಟಿ ನೀಡುವಂತೆ ಸೂಚಿಸಿದರು. ಜಯಾ ಪರ ಇಬ್ಬರು ಶ್ಯೂರಿಟಿ ನೀಡಿದ್ದಾರೆ. ಮೊದಲನೆಯದಾಗಿ ಜೆ. ಭರತ್ ಎಂಬುವರು ಶ್ಯೂರಿಟಿ ನೀಡಿದ್ದು, ಇದಕ್ಕಾಗಿ 5 ಕೋಟಿ ಮೊತ್ತದ ಆಸ್ತಿಯನ್ನು ಭದ್ರತೆಗೆ ನೀಡಿದ್ದಾರೆ. ಎರಡನೇಯದಾಗಿ ಗುಣಜ್ಯೋತಿ ಎಂಬುವರು 1 ಕೋಟಿ ರು. ಮೊತ್ತದ ಆಸ್ತಿಯನ್ನು ಶ್ಯೂರಿಟಿಯಾಗಿ ನೀಡಿದ್ದಾರೆ. ನಂತರ ಶ್ಯೂರಿಟಿದಾರರಿಗೆ ನ್ಯಾಯಮೂತರ್ಿ ಜಾನ್ ಮೈಕಲ್ ಡಿ ಕುನ್ಹಾ ಅವರು, 1 ಕೋಟಿ ಮೊತ್ತದ ಬಾಂಡ್ ಬರೆದುಕೊಂಡುವಂತೆ ಸೂಚಿಸಿದರು. ಅಲ್ಲದೆ ಕೋಟರ್್ ಹೇಳಿದಾಗ ಅಪರಾಧಿಯನ್ನು ಕೋಟರ್್ಗೆ ಹಾಜರುಪಡಿಸಬೇಕು ಒಂದು ವೇಳೆ ಅಪರಾಧಿಯನ್ನು ನಿಗದಿತ ಸಮಯದಲ್ಲಿ ಹಾಜರುಪಡಿಸಲು ಸಾಧ್ಯವಾಗದೆ ಇದ್ದ ಪರಿಸ್ಥಿತಿಯಲ್ಲಿ ತಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಜಯಲಲಿತಾ ಸೇರಿದಂತೆ ಮೂವರಿಗೂ ನಿನ್ನೆ ಸುಪ್ರೀಕೋಟರ್್ ಜಾಮೀನು ಮಂಜೂರು ಮಾಡಿತ್ತು. ಈ ಎಲ್ಲಾ ಅಪರಾಧಿಗಳಿಗೆ ಶ್ಯೂರಿಟಿ ನೀಡಿದ ಹಿನ್ನೆಲೆಯಲ್ಲಿ ನಾಲ್ವರ ಬಿಡುಗಡೆಗೆ ಪರಪ್ಪನ ಅಗ್ರಹಾರ ಜೈಲು ಅಧೀಕ್ಷಕರಿಗೆ ನ್ಯಾಯಮೂತರ್ಿಗಳು ಆದೇಶ ನೀಡಿದ್ದಾರೆ

By Suddi9

Leave a Reply

Your email address will not be published. Required fields are marked *