ಮುಂಬೈ : ದೇಶದ ಸರಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ತನ್ನ ಎಟಿಎಂ ಬಳಕೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಪರಿಷ್ಕರಿಸಿದೆ. ಶಾಖೆಗೆ ಭೇಟಿ ನೀಡದ ಎಸ್.ಬಿ.ಐ ಗ್ರಾಹಕರಿಗೆ ಎಟಿಎಂ ಬಳಕೆ ಮಿತಿಯನ್ನು ಹೆಚ್ಚಿಸಲು ಹಾಗೂ 25 ಸಾವಿರಕ್ಕಿಂತ ಹೆಚ್ಚು ಹಣ ಖಾತೆಯಲ್ಲಿ ಹೊಂದಿರುವವರಿಗೆ ಅನಿಯಮಿತ ಎಟಿಎಂ ಬಳಕೆಗೆ ಅವಕಾಶ ಮಾಡಿಕೊಡಲು ನಿರ್ಧರಿಸಿದೆ. ಈ ಹೊಸ ನಿಯಮ ನವೆಂಬರ್ 1ರಿಂದಲೇ ಅನುಷ್ಠಾನಕ್ಕೆ ಬರಲಿದೆ.

25 ಸಾವಿರ ರೂ.ವರೆಗಿನ ಬ್ಯಾಲೆನ್ಸ್ ಹೊಂದಿರುವವರಿಗೆ ಉಚಿತ ಎಟಿಎಂ ಬಳಕೆ ನಾಲ್ಕಕ್ಕೆ ಸೀಮಿತಗೊಳ್ಳಲಿದೆ. ಆದರೆ, ಹೊಸ ನಿಯಮಾವಳಿಯಂತೆ ತಿಂಗಳಿಗೆ ಸರಾಸರಿ 25 ಸಾವಿರಕ್ಕಿಂತ ಹೆಚ್ಚು ಬ್ಯಾಲೆನ್ಸ್ ಕಾಯ್ದುಕೊಳ್ಳುವವರು ಸ್ಟೇಟ್ ಬ್ಯಾಂಕ್’ನ ಎಟಿಎಂನಿಂದ ಎಷ್ಟು ಬಾರಿ ಬೇಕಾದರೂ ಹಣ ತೆಗೆಯಬಹುದು. ಸ್ಟೇಟ್ ಬ್ಯಾಂಕ್’ನ ಯಾವುದೇ ಎಟಿಎಂನಿಂದ ಎಷ್ಟು ಬಾರಿ ಬೇಕಾದರೂ ಹಣ ತೆಗೆಯಬಹುದು. ಸ್ಟೇಟ್ ಬ್ಯಾಂಕ್’ಯೇತರ ಎಟಿಎಂಗಳಲ್ಲಿ ಮಾತ್ರ ತಿಂಗಳಿಗೆ ಮೂರು ಬಾರಿಯಷ್ಟೇ ವ್ಯವಹಾರ ನಡೆಸಬಹುದು.
ಇಡೀ ತಿಂಗಳು ತಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿದ ಎಸ್.ಬಿಐ ಗ್ರಾಹಕರಿಗೆ ಆಯಾ ಶಾಖೆಯೆ ಎಟಿಎಂಗಳಲ್ಲಿ ಮಾಡಬಹುದಾದ ವ್ಯವಹಾರದ ಮಿತಿಯ ಸಂಖ್ಯೆಯನ್ನು 5ರಿಂದ 9ಕ್ಕೆ ಏರಿಸಲಾಗಿದೆ. ಇನ್ನು ಖಾತೆಯಲ್ಲಿ 1 ಲಕ್ಷ ರೂ.ಗಳಿಗಿಂತಲೂ ಹೆಚ್ಚು ಹಣ ಇಟ್ಟಿರುವವರು ದೇಶಾದ್ಯಂತ ಇರುವ ಎಸ್.ಬಿಐ ಎಟಿಎಂಗಳಲ್ಲಿ ಅನಿಯಮಿತ ವ್ಯವಹಾರ ನಡೆಸಬಹುದು. 25 ಸಾವಿರಕ್ಕಿಂತ ಕಡಿಮೆ ಬ್ಯಾಲೆನ್ಸ್ ಹೊಂದಿರುವವರು ತಮ್ಮ ಬ್ಯಾಂಕ್ ಶಾಖೆಯಲ್ಲಿ 5 ಹಾಗೂ ಇತರ ಬ್ಯಾಂಕ್ ಶಾಖೆಗಳಲ್ಲಿ 3 ಬಾರಿ ಉಚಿತವಾಗಿ ವ್ಯವಹಾರ ಮಾಡಬಹುದು. ಈ ಮಿತಿಯನ್ನು ದಾಟಿದರೆ ಎಸ್.ಬಿಐ ಎಟಿಎಂಗಳಲ್ಲಿ 5ರೂ. ಹಾಗೂ ಇತರೆ ಎಟಿಎಂಗಳಲ್ಲಿ 20 ರೂ. ಶುಲ್ಕ ಪಾವತಿಸಬೇಕು.
