ಬಂಟ್ವಾಳ: ಮುಂಬರುವ ಸಾರ್ವಜನಿಕ ಹಬ್ಬಗಳಾದ ನವರಾತ್ರಿ , ಶಾರದೋತ್ಸವ, ಬಕ್ರಿದ್ ಸಂದರ್ಭದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಿಕೊಂಡು ಬರುವಂತೆ ವಿನಂತಿಸಿ ಬೆಳ್ತಂಗಡಿ-ಬಂಟ್ವಾಳ ತಾಲೂಕುಗಳಿಗೆ ಸೇರಿದ 22 ಗ್ರಾಮಗಳ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಸಾರ್ವಜನಿಕರೊಂದಿಗೆ ಶಾಂತಿ ಸಭೆ ಸೆ.28 ರಂದು ಪುಂಜಾಲಕಟ್ಟೆ ಠಾಣೆಯಲ್ಲಿ ಜರಗಿತು.

1 (8)
ಬೆಳ್ತಂಗಡಿ ವೃತ್ತ ನಿರೀಕ್ಷಕ ಲಿಂಗಪ್ಪ ಪೂಜಾರಿ ಅವರು ಮಾತನಾಡಿ ಹಬ್ಬಗಳ ಸಂದರ್ಭದಲ್ಲಿ ಮೆರವಣಿಗೆ, ಧ್ವನಿವರ್ಧಕ ಬಳಕೆ ಮತ್ತು ಬ್ಯಾನರ್, ಬಂಟಿಂಗ್ಸ್ ಕಟ್ಟಲು ಸೂಕ್ತ ಪರವಾನಿಗೆ ಪಡೆದುಕೊಳ್ಳುವಂತೆ ಹಾಗೂ ಕಾರ್ಯಕ್ರಮದ ಬಳಿಕ ಬ್ಯಾನರ್, ಬಂಟಿಂಗ್ಸ್ಗಳನ್ನು ತೆರವುಗೊಳಿಸುವಂತೆ ವಿನಂತಿಸಿದರು. ಸಿಡಿಮದ್ದು ಬಳಕೆ, ಟ್ಯಾಬ್ಲೋ ಪ್ರದರ್ಶನ, ಘೋಷಣೆ ಮೊದಲಾದವುಗಳಿಂದ ಇತರರಿಗೆ ತೊಂದರೆಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕೆಂದು ಅವರು ಸೂಚಿಸಿದರು. ಠಾಣಾಕಾರಿ ಲತೇಶ್ ಕುಮಾರ್, ನಿವೃತ್ತ ಯೋಧ ಕಾಂತಪ್ಪ ಗೌಡ ಅವರು ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಮಡಂತ್ಯಾರು ಪೇಟೆಯಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸುವ ಬಗ್ಗೆ ಚಚರ್ಿಸಲಾಯಿತು. ದ್ವಿಚಕ್ರ , ಅಟೋರಿಕ್ಷಾ , ಗೂಡ್ಸ್ ಟೆಂಪೊ, ವಾಹನಗಳ ದಾಖಲೆ ಪತ್ರಗಳ ತಪಾಸಣೆಯನ್ನು ತಿಂಗಳಿಗೊಂದು ಬಾರಿ ನಡೆಸುವಂತೆ ಮತ್ತು ದುಬಾರಿ ದಂಡ ವಿಸದಂತೆ ಸಾರ್ವಜನಿಕರು ವಿನಂತಿಸಿದರು. ವಾಹನ ಚಾಲಕರು ಸಮರ್ಪಕ ದಾಖಲೆ ಪತ್ರಗಳನ್ನು ಹೊಂದಿರುವಂತೆ ಈಗಾಗಲೇ ಸೂಚಿಸಿರುವುದಾಗಿ ಮತ್ತು ದಂಡಕ್ಕೆ ಸೂಕ್ತ ರಶೀದಿ ನೀಡುತ್ತಿರುವುದಾಗಿ ಠಾಣಾಕಾರಿಯವರು ಪ್ರತಿಕ್ರಿಯಿಸಿದರು.
ಸಭೆಯಲ್ಲಿ ತಾ.ಪಂ.ಸದಸ್ಯ ವಿನ್ಸೆಂಟ್ ಡಿಸೋಜಾ, ಕಾವಳಮೂಡೂರು ಗ್ರಾ.ಪಂ.ಅಧ್ಯಕ್ಷ ಯಾಕೂಬ್ ಸಾಹೇಬ್, ಮಡಂತ್ಯಾರ್ ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್ರಹಿಮಾನ್ ಪಡ್ಪು , ಮಾಜಿ ಅಧ್ಯಕ್ಷ ವಿಶ್ವನಾಥ ಪೂಜಾರಿ, ಸದಸ್ಯ ದಿನೇಶ್ ಆಚಾರ್ಯ, ಬಡಗಕಜೆಕಾರು ಗ್ರಾ.ಪಂ. ಸದಸ್ಯ ಹರೀಶ್ಚಂದ್ರ ಪೂಜಾರಿ, ಪ್ರಮುಖರಾದ ಬ್ಲಾ ್ಯನಿ, ವಿಕ್ಟರ್ ಡಿಸೋಜ, ಪುರುಷೋತ್ತಮ ಶೆಟ್ಟಿ , ದಾಮೋದರ ಆಚಾರ್ಯ,ಯಶೋಧರ ಶೆಟ್ಟಿ ವಾಮದಪದವು, ನಂದಕುಮಾರ್, ಕಿಶೋರ್, ಉಮೇಶ್ ಸುವರ್ಣ ಹಾಗೂ ವಿವಿಧ ಧಾಮರ್ಿಕ, ಸಾಮಾಜಿಕ ಮುಖಂಡರುಗಳು ಭಾಗವಹಿಸಿದ್ದರು.
ಸಿಬಂದಿ ವೆಂಕಪ್ಪ ಅವರು ಸ್ವಾಗತಿಸಿ, ವಂದಿಸಿದರು.

By Suddi9

Leave a Reply

Your email address will not be published. Required fields are marked *