ನವದೆಹಲಿ: ಭದ್ರತಾ ಸಮಸ್ಯೆಯನ್ನು ಮುಂದಿಟ್ಟು ಬೇರೆಡೆ ತೀರ್ಪು ನೀಡುವಂತೆ ಸಲ್ಲಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.  ಕರ್ನಾಟಕದ ಹೊರಗಡೆ ಪ್ರಕರಣದ ವಿಚಾರಣೆ ನಡೆಸಬೇಕು. ರಾಜ್ಯದಲ್ಲಿ ಭದ್ರತಾ ಕೊರತೆಯಿದೆ ಎನ್ನುವ ಜಯಲಲಿತಾ ಪರ ವಕೀಲರ ಅರ್ಜಿಯನ್ನು ಸಾರಾಸಗಟಾಗಿ ಸುಪ್ರೀಂಕೋರ್ಟ್ ವಜಾಗೊಳಿಸಿದ್ದರಿಂದ ಜಯಾಗೆ ಮತ್ತೊಮ್ಮೆ ಹಿನ್ನೆಡೆಯಾಗಿದೆ.
jaya
ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಜಯಲಲಿತಾ ಕೋರಿದ ಅರ್ಜಿಯನ್ನು ಕೂಡಾ ನ್ಯಾಯಾಲಯ ತಿರಸ್ಕರಿಸಿತು.
ಅದೇನೆಂದರೆ, ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ತೀರ್ಮಾನ ಹೊರಬೀಳಬೇಕಿತ್ತು. ಆದರೆ ಭದ್ರತೆಯ ನೆಪವೊಡ್ಡಿ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಇದೀಗ ವಿಚಾರಣೆ ಸ್ಥಳ ಬದಲಿಸುವಂತೆ ಜಯಲಲಿತಾ ಪರವಾಗಿ ಕೃಷ್ಣಮೂರ್ತಿ ಎಂಬ ವಕೀಲರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು
ಭದ್ರತೆಯ ದೃಷ್ಟಿಯಿಂದ ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕೆಂದು ಜಯಾ ವಕೀಲರು ಅರ್ಜಿ ಸಲ್ಲಿಸಿದ್ದರು. ಇಂದು ಮಧ್ಯಾಹ್ನ 2ಕ್ಕೆ ಕೃಷ್ಣಮೂರ್ತಿ ಅವರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

By Suddi9

Leave a Reply

Your email address will not be published. Required fields are marked *