ಸುದ್ದಿ9:ಮೂಡುಬಿದರೆ: ಸೀಮಿತ ಪ್ರದೇಶದಲ್ಲಿ ತುಳು ಸಂಸ್ಕೃತಿ ಶ್ರೀಮಂತವೆಂದು ನಾವು ಭಾವಿಸಿದ್ದೇವೆ. ಪ್ರಾಚೀನ ದ್ರಾವಿಡ ಭಾಷೆಯಾದ ತುಳು ಮಾಲಯಾಳಂ ಹಾಗೂ ಕೆಲವು ಉಪಭಾಷೆಗಳ ಮೇಲೆ ಗಾಢವಾದ ಪ್ರಭಾವ ಬೀರಿದೆ. ಆದರೆ ಆಡಳಿತಾತ್ಮಕ ಹಾಗೂ ಶೈಕ್ಷಣಿಕವಾಗಿ ತುಳು ಭಾಷೆಯಾಗಿ ಮೂಡಿಬಂದಿಲ್ಲ. ತುಳುವಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಾವು ತುಳು ಭಾಷಾ ಪ್ರಯೋಗವನ್ನು ಹೆಚ್ಚಿಸಬೇಕು. ತುಳು ಸಂಸ್ಕೃತಿಯ ಅರ್ಥವಂತಿಕೆಯನ್ನು ಅರಿತು, ಅದರೊಂದಿಗೆ ಬಾಳಬೇಕು. ಭಾಷೆಯ ಮೂಲ ಸತ್ವದೊಂದಿಗೆ ಬದುಕುವುದು ಮುಖ್ಯ ಎಂದು ಹಂಪಿ ವಿ.ವಿ. ದ್ರಾವಿಡ ಸಂಸ್ಕೃತಿ ಅಧ್ಯಯನ ಕೇಂದ್ರ ಡಾ.ಎ.ಸುಬ್ಬಣ್ಣ ರೈ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಆಳ್ವಾಸ್ ತುಳು ಸಂಸ್ಕೃತಿ ಅದ್ಯಯನ ಕೇಂದ್ರ ಜಂಟಿ ಆಶ್ರಯದಲ್ಲಿ ವಿದ್ಯಾಗಿರಿಯ ಪತ್ರಿಕೋದ್ಯಮ ಸೆಮಿನಾರ್ ಹಾಲ್ನಲ್ಲಿ ಮಂಗಳವಾರ ನಡೆದ ತುಳು ಉತ್ತೇಜನ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಎಳೆಯ ಮನಸ್ಸುಗಳಲ್ಲಿ ತುಳುವನ್ನು ಉತ್ತೇಜನ ಮೂಡಿಸುವ ಕಾರ್ಯಗಾರ ಅರ್ಥಪೂರ್ಣವಾದದ್ದು. ತುಳುನಾಡಿನ ಸತ್ವ, ಸಾಧ್ಯತೆಗಳನ್ನು ಮನವರಿಕೆ ಮಾಡಿಕೊಳ್ಳುವಂತಹ ಪ್ರಯತ್ನವಾಗಬೇಕಾಗಿದೆ ಎಂದರು,
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ತುಳು ಸಂಶೋಧನೆಗೆ ಹೇರಳವಾದ ಅವಕಾಶಗಳಿವೆ. ತುಳು ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವುದು ಮಾತ್ರವಲ್ಲ ಅಧ್ಯಯನಶೀಲರಾಗಿ ಹೆಚ್ಚಿನ ಓದು ಮುಖ್ಯವಾಗುತ್ತದೆ. ವಿಚಾರಶೀಲ ಓದು ಅಧ್ಯಯನಕ್ಕೆ ಸತ್ವ ಒದಗಿಸುತ್ತದೆ. ಅಧ್ಯಯನ ಪೂರ್ವದಲ್ಲಿ ಬದುಕಿನ ಭಾಗವಾಗಿಸುವುದು ಮುಖ್ಯ. ಅಧ್ಯಯನ ಆಕಾರಗಳನ್ನು ನಿರ್ಮಾಣ ಮಾಡಬೇಕಾಗುತ್ತದೆ. ಮನೆ ಹಾಗೂ ಸುತ್ತಮುತ್ತಲ್ಲಿನಲ್ಲಿ ವಸ್ತುಗಳು ಸಿಗುತ್ತದೆ.
ಮೂಡುಬಿದರೆಯ ತುಳುಕೂಟದ ಅಧ್ಯಕ್ಷ ಸುಭಾಶ್ಚಂದ್ರ ಪಡಿವಾಳ್, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಡಾ.ಯೋಗೀಶ್ ಕೈರೋಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಿತೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ್ ಗೌಡ ವಂದಿಸಿದರು.

17(a)

 

By Suddi9

Leave a Reply

Your email address will not be published. Required fields are marked *