ಶಿಮ್ಲಾ: ಶಿಮ್ಲಾದಲ್ಲಿ ಕೋತಿಗಳ ಉಪದ್ರವ ಜೋರಾಗಿದೆ. ಇತ್ತೀಚೆಗೆ ಕೋತಿಯೊಂದು ಮರದ ಮೇಲೆ ಕುಳಿತು, ಬಂದಿದ್ದ ಪ್ರವಾಸಿಗರಿಗೆ ಹಣದ ಸುರಿಮಳೆ ಸುರಿಸಿ ಖುಷಿಪಡಿಸಿದೆ. ಪ್ರತಿಯೊಬ್ಬ ಪ್ರವಾಸಿಗನಿಗೂ ಒಂದೊಂದೇ ನೋಟುಗಳನ್ನು ಎಸೆದು ಮಂಗಾಟ ಆಡಿದ ಕೋತಿಯ ವಿಚಿತ್ರ ನಡೆ ಎಲ್ಲರಿಗೂ ಕುತೂಹಲಕ್ಕೆ ಕಾರಣವಾಗಿತ್ತಲ್ಲದೆ, ಜನರು ಒಂದೊಂದೇ ನೋಟುಗಳನ್ನು ಕಿಸೆಗಿಟ್ಟು ದೇಶಾವರಿ ನಗೆ ಬೀರಿದ್ದಾರೆ.

Monkey
ಕೋತಿ ಆಹಾರ ಅರಸುತ್ತಾ ಮನೆಗೆ ಹೊಕ್ಕಿದ್ದ. ಆದರೆ ಮನೆಯಲ್ಲಿ ಆಹಾರ ಸಿಗುವ ಬದಲು ಹಣದ ದೊಡ್ಡದೊಂದು ಥೈಲಿ ಪತ್ತೆಯಾಗಿತ್ತು. ಅದನ್ನೇ ಎತ್ತಿಕೊಂಡು ಬಂದ ಕಪಿ ಅದನ್ನು ಎಲ್ಲರಿಗೂ ಹಂಚಿದೆ. ಕದ್ದ ಮಾಲನ್ನು ಜನರು ಸಂತೋಷವಾಗಿ ಜೇಬಿಗಿಳಿಸಿದ್ದಾರಂತೆ

By Suddi9

Leave a Reply

Your email address will not be published. Required fields are marked *