ಪುತ್ತೂರು: ಪುತ್ತೂರಿನಲ್ಲಿ ಶ್ಯಾಮ್ ಪ್ರಸಾದ್ ಶಾಶ್ತ್ರಿ ಎಂಬವರು ತನಗೆ ತಾನೇ ಗುಂಡು ತಗುಲಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಶ್ಯಾಮ್ ಪ್ರಸಾದ್ ಅವರು ಬರೆದಿದ್ದ ಡೆತ್ ನೋಟ್ ಹಾಗೂ ಅವರು ದಿನನಿತ್ಯ ಬರೆಯುತ್ತಿದ್ದ ಡೈರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

shyamprasad puttur1

shyama shasthr
ಡೆತ್ನೋಟನ್ನು ಜಿಲ್ಲಾ ಎಎಸ್ಪಿ ತಮ್ಮ ವಶಕ್ಕೆ ಪಡೆದಿದ್ದು, ಅದರಲ್ಲಿ ಯಾರ ಮೇಲೂ ವ್ಯಕ್ತಿಗತವಾಗಿ ಆರೋಪಗಳಿಲ್ಲ ಎಂದು ತಿಳಿಸಿದ್ದು, ಡೆತ್ನೋಟಲ್ಲಿರುವ ಸಂಪೂರ್ಣ ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿಲ್ಲ. ಡೆತ್ನೋಟ್ ಆತ್ಮಹತ್ಯೆ ಪ್ರಕರಣದಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ.
ಕರೆ ಮಾಡಿದ್ದು ಯಾರು?
ಅಷ್ಟಕ್ಕೂ ಶ್ಯಾಂಪ್ರಸಾದ್ ಅವರಿಗೆ ಕರೆ ಮಾಡಿದ್ದು ಯಾರೆಂದು ಇನ್ನೂ ನಿಗೂಢವಾಗಿ ಉಳಿದಿದ್ದು, ಸೈಬರ್ ಕ್ರೈಂ ಪೊಲೀಸರು ಮೊಬೈಲ್ಗೆ ಬಂದಿರುವ ಕರೆಗಳನ್ನು ತನಿಖೆ ನಡೆಸುತ್ತಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಶ್ಯಾಂಪ್ರಸಾದ್ ಅವರ ಬಡಕ್ಕಿಲ ಮನೆಗೆ ಭೇಟಿ ನೀಡಿ ಹಲವು ಸೊತ್ತುಗಳನ್ನು ವಶಪಡಿಸಿದ್ದಾರೆ.
ಈತನ್ಮಧ್ಯೆ ಶ್ಯಾಂಪ್ರಸಾದ್ ಅವರ ಪತ್ನಿ ಸಂಧ್ಯಾಲಕ್ಷ್ಮಿ ಅವರು ಶ್ರೀರಾಮಚಂದ್ರಾಪುರ ಮಠದ ಕಡೆಯವರು ತನ್ನ ಗಂಡನಿಗೆ ದೂರವಾಣಿ ಕರೆ ಮಾಡಿ ಬೆದರಿಸಿದ ಹಿನ್ನೆಲೆಯಲ್ಲಿ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪುತ್ತೂರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *