ಸುದ್ದಿ 9 ಕೈಕಂಬ: ಶ್ರೀ ಗಣೀಶೋತ್ಸವ ಸೇವಾ ಸಮಿತಿ ವತಿಯಿಂದ 31 ನೇ ವರ್ಷದ ಸಾರ್ವಜನಿಕ ಗಣೀಶೋತ್ಸವವು ಆ. 29ರಂದು ಜರಗಲಿದೆ. ಶುಕ್ರವಾರ ಬೆಳಗ್ಗೆ 7.30ಕ್ಕೆ ಶ್ರೀ ಗಣೇಶನ ವಿಗ್ರಹವನ್ನು ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಿಂದ ದಂಡಿ ಮೆರವಣಿಗೆಯಲ್ಲಿ ಕೈಕಂಬ ಶ್ರೀ ಗಣೇಶ ಮಂಟಪಕ್ಕೆ ತರುವುದು 8.30ಕ್ಕೆ ಮಹಾಗಣಪತಿ ದೇವರ ಪ್ರತಿಷ್ಠೆ 930ರಿಂದ ಶಾಲಾ ಬಾಲಕ ಬಾಲಕಿಯರಿಗೆ ಭಜನೆ, ಭಕ್ತಿಗೀತೆ, ಗೀತಾ ಕಂಠಪಾಠ, ಭಾಷಣ ಸ್ಪಧರ್ೆಗಳು ನಡೆಯಲಿದೆ. ಬೆಳಗ್ಗೆ ಗಂಟೆ 11 ಕ್ಕೆ ಗಣಹೋಮ ಹಾಗೂ ಪಲ್ಲಪೂಜೆ, ಮಧ್ಯಾಹ್ನ ಗಂಟೆ 1ಕ್ಕೆ ಮಹಾಪೊಜೆ ಹಾಗೂ ಪ್ರಸಾದ ವಿತರಣೆ, ಮಧ್ಯಾಹ್ನ 1.30ಕ್ಕೆ ಶ್ರೀ ಮಂಜುನಾಥ ಸ್ವಾಮಿ ಭಜನಾ ಮಂಡಳಿ ಮೊಗರು ಇವರಿಂದ ಭಜನೆ,3.30ಕ್ಕೆ ಪರಮಾನಂದ ಸಾಲ್ಯಾನ್ರವರ ನಿದರ್ೆಶನದಲ್ಲಿ ಕಾಣರ್ಿಕದ ಸಿರಿಕುಲು ಮತ್ತು ತುಳುವ ಚಾವಡಿ ಗೀತನಾಟಕ ನ್ರತ್ಯ ವೈಭವ ರಂಗ ಸುದರ್ಶನ ಸಸಿ ಹಿತ್ಲು ಇವರಿಂದ . ಪಾಯೋಜಕರು ನೈಸ್ ಕ್ಯಾಟರರ್ಸ್ ಗುರುಪುರ ಕೈಕಂಬ, ಸಂಜೆ 6.30ಕ್ಕೆ ಸುಧೀರ್ ಉಲ್ಲಾಳ್ ನೇತೈವದ ಸಿಟಿ ಗೈಸ್ ಆಕಾಡೆಮಿ ವಜ್ರದೇಹಿ ಮಠ ಗುರುಪುರ ಇವರಿಂದ ನೃತ್ಯ ವೈಭವ, ರಾತ್ರಿ 10ಕ್ಕೆ ಮಾಹಾಪೂಜೆ, ರಾತ್ರಿ 10.30ರಿಂದ ಶ್ರೀ ಮಹಾಗಣಪತಿ ಯಕ್ಸಗಾನ ಮಂಡಳಿ ನಿಡ್ಲೆ, ಧರ್ಮಸ್ಥಳ ಹಾಗೂ ಅತಿಥಿ ಕಲಾವಿದರ ಕೂಡವಿಕೆಯಲ್ಲಿ ಪುರುಷೋತ್ತಮ ಪೂಂಜ ಬೊಟ್ಟಿಕೆರೆ ವಿರಚಿತ ಯಕ್ಷಗಾನ ಬಯಲಾಟ “ಮಾನಿಷಾದ” ಜರಗಲಿದೆ.
ಅ.30 ಶನಿವಾರ 7ರಿಂದ 8 ಭಜನೆ, 8ರಿಂದ 9 ವಾದ್ಯಗೋಷ್ಠಿ,10.30ಕ್ಕೆ ಗಣಹೋಮ, 9.30ರಿಂದ 12.30ಸಾರ್ವಜನಿಕ ಭಕ್ತಿಗೀತೆ ಸ್ಪದರ್ೆ,12.45 ಚೆಂಡೆವಾದನ, 1ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ. ಅಪರಾಹ್ನ 3.30ಕ್ಕೆ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನವನ್ನು ಅನುವಂಶಿಕ ಅರ್ಚಕರು ಶ್ರೀ ಕ್ಷೇತ್ರ ಕಟೀಲು ಕೆ.ಶ್ರೀಹರಿನಾರಾಯಣ ಆಸ್ರಣ್ಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಮಂಗಳೂರು ಸುಗ್ಗಿ ಚಿಟ್ಸ್(ಪ್ರೈ)ಲಿಮಿಟೆಡ್ ಹಾಗೂ ದಾಸ್ ಪ್ರಮೋಶನ್ಸ್ ಎಲ್.ಅನಿಲ್ದಾಸ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಡಪದವು ಪ್ರಗತಿಪರ ಕೃಷಿಕರು ಎಮ್.ಜೀವಂಧರ್ ಕುಮಾರ್ ಹೊಸಮನೆ, ಸರೋಜಿನಿ ಮಧುಸೂದನ ಕುಶೆ ಶೈಕ್ಷಣಿಕ ಸಂಸ್ಥೆಗಳು ಅತ್ತಾವರ ಮಂಗಳೂರು ಇದರ ಪ್ರಾಂಶುಪಾಲರು ಕೆ.ಕೃಷ್ಣ ಉಪಾಧ್ಯಾಯ, ಡೀನ್, ಸ್ನಾತಕೋತ್ತರ ವಿಭಾಗ, ಮಕ್ಕಳ ಮತ್ತು ಹದಿಹರೆಯದ ಮಾನಸಿಕ ತಜ್ಞರು ರೋಶನಿ ನಿಲಯ ಮಂಗಳೂರು ಡಾ.ರಮೀಲ ಶೇಖರ್ ಉಪಸ್ಥಿತಲಿರುವರು. ಪ್ರಧಾನ ಭಾಷಣಕಾರರು ಮಂಗಳೂರು ವಿಭಾಗ ಸಂಸ್ಕಾರ ಭಾರತಿ ಸಂಚಾಲಕರು ಆದರ್ಶ ಗೋಖಲೆ ಮಾಡಲಿದ್ದಾರೆ. ಸಂಜೆ 5.30ರಿಂದ ವೈಭವದ ಶೋಭಾಯಾತ್ರೆ ನಡೆಯಲಿದೆ.

10ss3

 

 

By Suddi9

Leave a Reply

Your email address will not be published. Required fields are marked *