ಸುದ್ದಿ9ಬಂಟ್ವಾಳ: ಹಿಂದೂ ಯುವಸೇನೆ ಏಕಲವ್ಯ ಶಾಖೆ ಮಣಿಹಳ್ಳದ ಸಕ್ರಿಯ ಕಾರ್ಯಕರ್ತರಾದ ಮಣಿಹಳ್ಳದ ವಲಸರಿಯ ರತ್ನಾಕರ ಪೂಜಾರಿಯವರು ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರಿಗೆ ಹಿಂದೂ ಯುವಸೇನೆ ಬಂಟ್ವಾಳ ತಾಲೂಕು ಘಟಕ, ಹಿಂದೂ ಯುವಸೇನೆ ಏಕಲವ್ಯ ಶಾಖೆ ಮಣಿಹಳ್ಳ ಮತ್ತು ಇತರ ಎಲ್ಲಾ ಶಾಖೆಯವರ ಸಹಕಾರದೊಂದಿಗೆ ರೂ. 7,500 ಸಹಾಯಧನವನ್ನು ನೀಡಲಾಯಿತು. ಈ ಸಂದರ್ಭ ಹಿಂದೂ ಯುವಸೇನೆ ತಾಲೂಕು ಘಟಕದ ಅಧ್ಯಕ್ಷರಾದ ಪುಷ್ಪರಾಜ ಜಕ್ರಿಬೆಟ್ಟು, ಪ್ರಮುಖರಾದ ಸುರೇಶ್ ಕುಮಾರ್ ಕೆಮ್ಮಟೆ, ವಸಂತ್ ಕುಮಾರ್ ಮಣಿಹಳ್ಳ, ಶಿವಪ್ರಸಾದ್ ಬಂಟ್ವಾಳ, ರಾಮಚಂದ್ರಗೌಡ ಮಣಿ, ನವೀನ್ ಸುಮಂತ್, ಸುನೀಲ್ ನಾವೂರ ಮತ್ತು ಮಣಿಹಳ್ಳ ಶಾಖೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

