ಸುದ್ದಿ9ಮೂಡುಬಿದರೆ: ಮಂಗಳೂರು ಸೇನಾ ಪ್ರಾಧಿಕಾರದ ನೇತೃತ್ವದಲ್ಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನೆರವಿನೊಂದಿಗೆ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿಯ ವಿವಿಧ ಪ್ರಕ್ರಿಯೆಗಳಿಗೆ ಮಂಗಳವಾರ ಬಹುತೇಕ ಚಾಲನೆ ದೊರೆತ್ತಿದ್ದು, ಸೂಕ್ತ ಅಭ್ಯಥರ್ಿಗಳನ್ನು ವಿವಿಧ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಮೊದಲ ಸುತ್ತಿನಲ್ಲಿ 1450 ಆಯ್ಕೆಯಾಗಿ ಮೊದಲ ಸುತ್ತಿಗೆ ಆಯ್ಕೆಯಾಗಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಮಂಗಳವಾರ ಬೆಳಿಗ್ಗೆ ಹಳದಿ ನಿಶಾನೆ ತೋರುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು. ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಸೇನೆಯ ನೇಮಕಾತಿ ವಿಭಾಗದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಸೋಮವಾರ ನೋಂದಣಿ, ಅಭ್ಯಥರ್ಿಗಳ ದಾಖಲೆ ಪರಿಶೀಲನೆ ಎತ್ತರ ಪರೀಕ್ಷೆ ನಡೆದಿದ್ದು, ಮಂಗಳವಾರ ಸ್ಪೋರ್ಸ್ ಕೀಪರ್ ಮತ್ತು ಸಿಪಾಯಿ ಕ್ಲಕರ್್ ಹುದ್ದೆಗಳಿಗೆ ರಾಜ್ಯದ 30 ಜಿಲ್ಲೆಗಳಿಂದ ಸುಮಾರು 2,500 ರಷ್ಟು ಮಂದಿ ಆಕಾಂಕ್ಷಿಗಳು ಪಾಲ್ಗೊಂಡಿದ್ದರು. ಬುಧವಾರ ಟ್ರೇಡ್ಸ್ಮೆನ್ ಹುದ್ದೆಗಳಿಗೆ ಅಭ್ಯಥರ್ಿಗಳ ಪರೀಕ್ಷೆ ನಡೆಯಲಿದೆ. 8 ಮತ್ತು 10 ನೇ ತರಗತಿ ಶಿಕ್ಷಣ ಪಡೆದವರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಹುದ್ದೆಗಳಿಗೂ ಸಾವಿರಾರು ಮಂದಿ ಅಭ್ಯಥರ್ಿಗಳು ಪಾಲ್ಗೊಂಡಿದ್ದು ಮಂಗಳವಾರ ಮಧ್ಯಾಹ್ನದಿಂದ ಎತ್ತರ ಪರೀಕ್ಷೆ ಮತ್ತು ದಾಖಲಾತಿಗಳ ಪರೀಕ್ಷೆ ನಡೆಸಿ ಟೋಕನ್ ನೀಡಲಾಯಿತು.
ಸೋಮವಾರ ಎತ್ತರ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯಥರ್ಿಗಳಿಗೆ ಮಂಗಳವಾರ ಮುಂಜಾನೆ 6.30ರಿಂದ ಓಟದ ಪ್ರಕ್ರಿಯೆ ನಡೆಯಿತು.
ತಲಾ 200 ಮಂದಿಯ ಗುಂಪುಗಳನ್ನಾಗಿ ವಿಂಗಡಿಸಿ 1.06 ಕಿ.ಮೀ ದೂರವನ್ನು 5 ರಿಂದ 6 ನಿಮಿಷಗಳ ಅಂತರದಲ್ಲಿ ತಲುಪುವಂತೆ ಓಟ ನಡೆಯಿತು. ಬಳಿಕ ದೈಹಿಕ ಪರೀಕ್ಷೆಗಳನ್ನು ಮೂರು ವಿಧದಲ್ಲಿ ಮಾಡಲಾಯಿತು.9 ಅಡಿ ಉದ್ದದ ಹೊಂಡವನ್ನು ದಾಟಿ ಜಿಗಿತ, ತಿರುವು ಮುರುವು ನಡಿಗೆ ಹಾಗೂ ಚೌಕಾಕಾರದಲ್ಲಿ ನಿಮರ್ಿಸಿದ 10 ಅಡಿ ಎತ್ತರದ ಕಂಬಕ್ಕೆ ಅಳವಡಿಸಿದ ಅಡ್ಡ ಹಲಗೆಯನ್ನು ಹಿಡಿದು 6 ರಿಂದ 10 ಬಾರಿ ಎದೆ ಮಟ್ಟಕ್ಕೆ ಹಾರುವ ಸಾಹಸಗಳನ್ನು ದೈಹಿಕ ಪರೀಕ್ಷೆಗೆ ಒಳಗೊಂಡಿತು. ಆಯ್ಕೆಯಾದವರನ್ನು ಆರೋಗ್ಯ ಪೂರ್ವ ತಪಾಸಣೆ ನಿಖರ ಎತ್ತರ, ತೂಕ ಮತ್ತು ಎದೆಯ ಸುತ್ತಳತೆಯ ಪರೀಕ್ಷೆ ನಡೆಸಲಾಯಿತು. ಬಳಿಕ ಎಲ್ಲಾ ಮೂಲ ದಾಖಲಾತಿಗಳ ಅಮೂಲಾಗ್ರ ತಪಾಸಣೆ ನಡೆಸಲಾಯಿತು. ಈ ಅಭ್ಯಥರ್ಿಗಳ ವೈದ್ಯಕೀಯ ಪರೀಕ್ಷೆ ಗುರುವಾರ ನಡೆಯಲಿದ್ದು ಎಲ್ಲಾ ಪರೀಕ್ಷೆಗಲ್ಲಿಉತ್ತೀರ್ಣರಾದವರಿಗೆ ಆಗಸ್ಟ್ 30 ರಂದು ನಡೆಯಲಿರುವ ಲಿಖಿತ ಪರೀಕ್ಷೆಗೆ ಪ್ರವೇಶ ಪತ್ರ ನೀಡಲಾಗುತ್ತಿದೆ.
ರ್ಯಾಲಿಯಲ್ಲಿ ಪಾಲ್ಗೊಳ್ಳಲು ಪ್ರಾಥಮಿಕ ಹಂತದಲ್ಲಿ ಆಯ್ಕೆಯಾದ ಎಲ್ಲಾ ಅಭ್ಯಥರ್ಿಗಳಿಗೆ ಊಟ ಹಾಗೂ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ಸೇನಾ ನೇಮಕಾತಿ ರ್ಯಾಲಿಗಾಗಿ ತಹಸೀಲ್ದಾರ್ ಮಾಣಿಕ್ಯ ರಾಜ್ ಅವರನ್ನು ನೋಡಲ್ ಅಧಿಕಾರಿಯಾಗಿ ಹಾಗೂ ಊಟೋಪಚಾರದ ವ್ಯವಸ್ಥೆಗಾಗಿ ಧಾಮರ್ಿಕ ದತ್ತಿ ಇಲಾಖೆಯ ಸಹಾಯಕ ಕಮೀಷನರ್ ನಾಗರಾಜ್ ಅವನ್ನು ಜಿಲ್ಲಾಧಿಕಾರಿ ನೇಮಿಸಿದ್ದಾರೆ. ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಎಸ್ಐ ರಮೇಶ್ ಕುಮಾರ್ ಪೊಲೀಸ್
ಬಂದೋಬಸ್ತ್ನ ನೇತೃತ್ವ ವಹಿಸಿದ್ದಾರೆ.




