ಸುದ್ದಿ9 ಕೈಕಂಬ: ಆಷಾಡ ಮಾಸದ ಅಮವಾಸ್ಯೆಯ ವಿಶೇಷ ಪರ್ವದ ಪ್ರಯುಕ್ತ ನರಹರಿ ಪರ್ವತದ ಸದಾಶಿವ ದೇವಳದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯ್ತು. ಅನೇಕ ಮಂದಿ ಭಕ್ತರು ಬರೀಕಾಲಲ್ಲಿ ಪರ್ವತಾರೋಹಣ ಮಾಡಿಕೊಂಡು ದೇವರ ಪೂಜೆಯ ಕೈಕಂಕರ್ಯದಲ್ಲಿ ಪಾಲ್ಗೊಂಡರು. ಕೆಲವರು ದೇವಳದ ಕಲಷ ಸ್ನಾ ಮಾಡಿ ಹರಕೆ ತೀರಿಸಿದಿದ್ದು ವಿಶೇಷವಾಗಿತ್ತು.
ಪುರೋಹಿತರು ವೈದಿಕ ವಿಧಿವಿಧಾನಗಳ ಮೂಲಕ ಈಶ್ವರನ ಪೂಜೆಯನ್ನು ಮಾಡಿಕೊಂಡರು. ಆಟಿದ ಅಮವಾಸ್ಯೆಯಿಂದ ಆರಂಭಗೊಳ್ಳುವ ಹಬ್ಬವಾದ ಅಮವಾಸ್ಯೆ ಭಕ್ತರು ಆದರದಿಂದ ಬರಮಾಡಿಕೊಂಡರು. ನೂರಾರು ಮಂದಿ ಭಕ್ತರು ಸರತಿ ಸಾಲಿನಲ್ಲಿ ನಿಂದು ದೇವರ ಕೃಪೆಗೆ ಪಾತ್ರರಾದರು





