ಬಂಟ್ವಾಳ : ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ರಿಯ 13 ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಕರ್ನಾಟಕ ಸರಕಾರದ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರು ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಅವರ ಶಿಫಾರಸಿನಂತೆ ಒಟ್ಟು ರೂ 25 ಲಕ್ಷ ಅನುದಾನವನ್ನು ಧಾರ್ಮಿಕ ದತ್ತಿ ಇಲಾಖೆ ಮಂಜೂರು ಮಾಡಿದೆ.
ಶ್ರೀ ಅನ್ನಪೂಣೇಶ್ವರಿ ನಾಗದೇವರ ದೇವಸ್ಥಾನ, ಪೋಲಿಸ್ ಲೇನ್, ಬಿ.ಸಿ.ರೋಡ್, ಶ್ರೀ ದುರ್ಗಾಮಾತಾ ದೇವಸ್ಥಾನ, ಬಂಟ್ವಾಳ ಕಸ್ಬಾ ಗ್ರಾಮ, ಶ್ರೀ ದುರ್ಗಾಪರಮೇಶ್ವರಿ ದೇವಿ ಮಂದಿರ, ಬಾಚಕೆರೆ, ಮಣಿನಾಲ್ಕೂರು ಗ್ರಾಮ, ಶ್ರೀ ಉಳ್ಳಾಲ್ತಿ ಮತ್ತು ಉಳ್ಳಾಕುಲು ದೈವಸ್ಥಾನ, ಕೊಕ್ಕಪುಣಿ, ಬೋಳಂತೂರು, ಶ್ರೀ ಕಾವೇಶ್ವರ ದೇವಸ್ಥಾನ ತೆಂಕಬೆಳ್ಳೂರು, ಶ್ರೀ ಮಹಾಕಾಳಿ ದೇವಸ್ಥಾನ ದೇಲಂತಬೆಟ್ಟು ಕನ್ಯಾನ ಗ್ರಾಮ, ಶ್ರೀ ಆದೀಶ್ವರ ಯಾನೆ ಅನಂತಸ್ವಾಮಿ ಬಸದಿ ಕಾವಳಕಟ್ಟೆ ಕಾವಳಮುಡೂರು, ಶ್ರೀ ಕೋದಂಡರಾಮಚಂದ್ರ ದೇವಸ್ಥಾನ  ನಾಟಿ ನರಿಕೊಂಬು ಗ್ರಾಮ  ಈ ಸಂಸ್ಥೆಗಳಿಗೆ ತಲಾ ರೂ.2.00 ಲಕ್ಷ, ಶ್ರೀ ವಿಷ್ಣುಮೂರ್ತಿ  ಕೊಡಮಣಿತ್ತಾಯ ಪರಿವಾರ ದೈವಗಳ ದೇವಸ್ಥಾನ – ಪೊರಿಗುಡ್ಡೆ ಕೊಡಂಬೆಟ್ಟು ಗ್ರಾಮ, ಶ್ರೀ ದೂಮಾವತಿ ಸೇವಾ ಟ್ರಸ್ಟ್ (ರಿ) ಪಾಲಿಗೆ ಕರೋಪಾಡಿ ಗ್ರಾಮ,  ಶ್ರೀ ವಿನಾಯಕ ಜನರ್ಧನ ಸದಾಶಿವ ದೇವಸ್ಥಾನ ಅಮ್ಮುಂಜೆ,   ಶ್ರೀ ಕೊಡಮಣಿತ್ತಾಯ ದೇವಸ್ಥಾನ ಕುಂಟಲಪಲ್ಕೆ, ದೇವಶ್ಯಪಡೂರು ಸಂಸ್ಥೆಗಳಿಗೆ ತಲಾ ರೂ.1.00 ಲಕ್ಷ, ಶ್ರೀ ವಿಷ್ಣುಮೂರ್ತಿ  ವಯನಡು ದೇವಸ್ಥಾನ ಬುಡಂಗಮಜಲು, ಕೊಳಕೆ ಸಜೀಪಮೂಡ ಗ್ರಾಮ ಸಂಸ್ಥೆಗೆ ರೂ.5.00 ಲಕ್ಷ ಅನುದಾನ ಹಂಚಿಕೆ ಮಾಡಿ ಇಲಾಖೆ ಆದೇಶ ನೀಡಿದೆ.

By Suddi9

Leave a Reply

Your email address will not be published. Required fields are marked *