ಸುದ್ದಿ9 ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ, ಕೈಕಂಬ ಇದರ ನೂತನ ಶೈಕ್ಷಣಿಕ ವರ್ಷದ ಸಂಘಗಳ ಉದ್ಘಾಟನಾ ಸಮಾರಂಭ ನಡೆಯಿತು.
ವಿಜ್ಞಾನ ಸಂಘ, ಕನ್ನಡ ಸಂಘ, ಚಿತ್ರಕಲಾ ಸಂಘ, ಕರಾಟೆ ಸಂಘ, ನಟನೆ ಸಂಘ , ಮ್ಯೂಜಿಕ್ಸಂಘ , ಕ್ವಿಜ್ ಸಂಘ ಇತ್ಯಾದಿ ಸಂಘಗಳ ಪಧಾಧಿಕಾರಿಗಳನ್ನು ಆರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ಸಂಚಾಲಕ ಜೆ.ಬಿ.ಸಿಕ್ವೇರಾ “ವಿದ್ಯಾರ್ಥಿಗಳ ಸರ್ವತೋಮುಕ ಬೆಳವಣಿಗೆಗೆ ಸಂಘ ಚಟುವಟಿಕೆಗಳು ಬಹಳ ಅಗತ್ಯವಿದೆ ಎಂದರು . ಸಂಘದ ಚಟುವಟಿಕಗಳ ಪ್ರಯೋಜನವನ್ನು ವಿಧ್ಯಾರ್ಥಿಗಳು ಪಡೆಯಬಹುದು ಎಂದರು. ಪೌಢಶಾಲಾ ಮುಖ್ಯ ಶಿಕ್ಷಕ ಮಹೇಶ್ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸ್ವರ್ಣಲತಾ, ಪೂರ್ವ ಪ್ರಾಥಮಿಕದ ಮುಖ್ಯಸ್ಥೆ ಐರಿನ್ ಮತ್ತು ಎಲ್ಲಾ ಸಂಘಗಳ ಸಂಯೋಜಕರು ಉಪಸ್ಥಿತರಿದ್ದರು. ಶಿಕ್ಷಕಿ ಕುಸುಮ ಸ್ವಾಗತಿಸಿ, ಶಿಕ್ಷಕಿ ಜಾನೆಟ್ ವಂದಿಸಿದರು. ಶಿಕ್ಷಕ ವರ್ನೆನ್ ಕಾರ್ಯಕ್ರಮ ನಿರೂಪಿದರು.


