ಸುದ್ದಿ9ಬಂಟ್ವಾಳ: ಇಲ್ಲಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರೆಸ್ಕ್ಲಬ್ ಉದ್ಘಾಟನೆಗೆ ಸಜ್ಜುಗೊಂಡಿದೆ. ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾಲೂಕು ಪಂಚಾಯತ್ನ ಹಲೇ ಕಟ್ಟಡದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪುನರ್ ನಿಮರ್ಾಣಗೊಂಡಿರುವ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಚೇರಿ ಹಾಗೂ ಪ್ರೆಸ್ಕ್ಲಬ್ ಜು.13ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಪ್ರೆಸ್ಕ್ಲಬ್ ಉದ್ಘಾಟಿಸಲಿದ್ದಾರೆ, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಇಲ್ಲಿನ ತಾಲೂಕು ಪಂಚಾಯತ್ನ ಹಳೆ ಕಟ್ಟಡದ ಸಣ್ಣ ಕೊಠಡಿಯೊಂದರಲ್ಲಿ ಪ್ರೆಸ್ಕ್ಲಬ್ ಕಾರ್ಯನಿರ್ವಹಿಸುತ್ತಿತ್ತು. ಸ್ಥಳವಕಾಶದ ಕೊರತೆಯಿಂದ ಅಲ್ಲಿ ಸುದ್ದಿಗೋಷ್ಟಿಗಳನ್ನು ನಡೆಸಲು ತೊಂದರೆಯಾಗುತ್ತಿತ್ತು. ಈ ಬಗ್ಗೆ ಸಲ್ಲಿಸಿದ ಮನವಿಗೆ ತಾಲೂಕು ಪಂಚಾಯತ್ ಸ್ಪಂದಿಸಿ ಅದೇ ಕಟ್ಟಡದಲ್ಲಿದ್ದ ವಿಸ್ತೃತ ಕೊಠಡಿಯೊಂದನ್ನು ನೀಡಿತ್ತು. ಈ ಕೊಠಡಿಯನ್ನು ನವೀಕರಣಗೊಳಿಸಿ ಸುಸಜ್ಜಿತ ಪ್ರೆಸ್ಕ್ಲಬ್ ನಿಮರ್ಿಸಲಾಗಿದೆ.

photo

By Suddi9

Leave a Reply

Your email address will not be published. Required fields are marked *