
ಸುದ್ದಿ9ಮೂಡುಬಿದರೆ: ಹಿಂದೆ ಗುರುವಾರ ಸಂಜೆ ನಡೆಯುತ್ತಿದ್ದ ಸಂತೆ, ತರಕಾರಿ ಸಹಿತ ವ್ಯಾಪಾರ ವಹಿವಾಟು, ಸುತ್ತಲೂ ಜನ. ಆದರೆ ಈಗ ಅಲ್ಲೊಂದು ಕಟ್ಟಡ, ಸ್ಮಶಾನಮೌನ. ಇದು ಅಶ್ವತ್ಥಪುರ ಸಂತೆಕಟ್ಟೆಯ ಈಗಿನ ಪರಿಸ್ಥಿತಿ.
ಹೌದು ಒಂದು ಕಾಲದಲ್ಲಿ ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣ ರೈತರು ಆ ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿದ್ದ ದಿನಗಳಿದ್ದವು. ಸಂಚಾರದಲ್ಲಾಗಿರುವ ಬದಲಾವಣೆಯಿಂದ ಜನರ ಮನಸ್ಸು ಪೇಟೆಯತ್ತ ವಾಲಿದೆ, ಸಂತೆಕಟ್ಟೆ ಪರಿಕಲ್ಪನೆಯೂ ಮಾಯವಾಗಿದೆ. ಅಶ್ವತ್ಥಪುರದ ಸಂತೆಕಟ್ಟೆಯಲ್ಲೀಗ ವ್ಯಾಪಾರಸ್ಥರೂ ಇಲ್ಲ. ಜನರಂತೂ ಬರೋದೇ ಇಲ್ಲ. ಅದೇ ಸಂತೆಕಟ್ಟೆಯಲ್ಲಿ ವ್ಯಾಪಾರ ಬಿಡಿ, ಜನರೂ ಹತ್ತಿರ ಹೋಗದ ನೀರವ ಮೌನ. ಗ್ರಾಮಗಳ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಯಾವುದೇ ಶುಲ್ಕವಿಲ್ಲದೆ ವ್ಯಾಪಾರ ನಡೆಸಲು ಅಶ್ವತ್ಥಪುರದಲ್ಲಿ ಏಳು ವರ್ಷಗಳ ಹಿಂದೆ ಕಟ್ಟಲಾದ ಸಂತೆಕಟ್ಟೆ ಕಟ್ಟಡವು ವ್ಯಾಪಾರ ಮಾಡಲು ರೈತರು ಬಾರದೆ, ಕಟ್ಟಡವನ್ನು ಬೇರೆ ರೀತಿಯಲ್ಲಿ ಆದಾಯದ ಮೂಲವನ್ನಾಗಿಸಲೂ ಆಗದೆ ಲಕ್ಷಾಂತರ ರೂ.ಅನುದಾನದಿಂದ ಕಟ್ಟಲಾದ ಕಟ್ಟಡ ಉಪಯೋಗಕ್ಕೆ ಬಾರದೆ ಕೆಟ್ಟು ಹೋಗುತ್ತಿದೆ.
ಕನರ್ಾಟಕ ರಾಜ್ಯ ಸಕರ್ಾರದ ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆಯ ಆರ್.ಐ.ಡಿ.ಎಫ್ 10 ಲಕ್ಷ ಅನುದಾನದಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ಅಶ್ವತ್ಥಪುರದಲ್ಲಿ ಸಂತೆಕಟ್ಟೆ ಕಟ್ಟಡ ನಿಮರ್ಾಣ ಮಾಡಲಾಗಿತ್ತು. ಮೂಡುಬಿದರೆಯವರೇ ಆದ ಕೃಷ್ಣರಾಜ ಹೆಗ್ಡೆ ಅವರ ಅಧ್ಯಕ್ಷ ಅವಧಿಯಲ್ಲಿ 2006ರ ನವೆಂಬರ್ 7ರಂದು ಶಿಲಾನ್ಯಾಸಗೊಂಡು 2007ರ ಅಕ್ಟೋಬರ್ 18ರಂದು ಕಟ್ಟಡ ಉದ್ಘಾಟನೆಗೊಂಡಿತು. ಅದಾದ ಸ್ವಲ್ಪ ದಿನ ಇಲ್ಲಿ ಸ್ಥಳೀಯ ಕೃಷಿ ಉತ್ಪನ್ನ ವ್ಯಾಪಾರಸ್ಥರು ಇಲ್ಲಿ ವ್ಯಾಪಾರವನ್ನು ಮಾಡಿದರು. ಕಾಲಕ್ರಮೇಣ ಇಲ್ಲಿ ವ್ಯಾಪಾರ ನಿಂತುಹೋಯಿತು. ಗುರುವಾರ ಸಂತೆಯ ಸುಂದರ ಕ್ಷಣಗಳನ್ನು ಮೆಲುಕು ಹಾಕಿ ಎಪಿಎಂಸಿ ಕಟ್ಟಿಸಿದ ಸಂತೆಕಟ್ಟೆಯಲ್ಲಿ ವ್ಯಾಪಾರ ಎದುರು ನೋಡುತ್ತಿದ್ದ ಗ್ರಾಮಸ್ಥರಿಗೆ ಕಾಲಕ್ರಮೇಣ ನಿರಾಶೆಯಾಗತೊಡಗಿತ್ತು. ವ್ಯಾಪಾರ ನಿಂತು ಹೋಗಿ ಕಟ್ಟಡವೂ ಅನಾಥವಾಗಿದೆ. ಪ್ರಸ್ತುತ ಸಂತೆಕಟ್ಟೆಯೂ ದನ,ನಾಯಿಗೆ ನೆರಳು ನೀಡುತ್ತಿದೆ ಬಿಟ್ಟರೆ ಯಾರೂ ಅದರ ಹತ್ತಿರ ಹೋಗುತ್ತಿಲ್ಲ. ಅಕ್ಷರಗಳು ಅಳಿಸಿದ ನಾಮಫಲಕ ಕಟ್ಟಡ ಪರಿಸ್ಥಿತಿಯನ್ನು ತಿಳಿಸುತ್ತದೆ. ಧೂಳಿನಿಂದ ತುಂಬಿಹೋಗಿರುವ ಕಟ್ಟಡದ ಮೇಲ್ಛಾವಣಿಯ ಸಿಮೆಂಟ್ಶೀಟ್ಗಳು ಒಡೆದುಹೋಗಿದೆ. ಕಬ್ಬಿಣದ ಮೇಲ್ಛಾವಣಿ ತುಕ್ಕು ಹಿಡಿದಿದೆ. ಸುತ್ತಲೂ ಗಿಡಗಂಟಿಗಳು ಯಥೇಚ್ಛವಾಗಿ ಬೆಳೆದಿವೆ. ಅಶ್ವತ್ಥಪುರದಿಂದ ಪಂಚಾಯಿತಿ ಕಚೇರಿಗೆ ಹೋಗುವ ದಾರಿ ಮಧ್ಯೆ ಸಿಗುವ ಈ ಸಂತೆಕಟ್ಟೆಯ ಹತ್ತಿರ ಜನರ ಓಡಾಟವಿಲ್ಲ.
ಪಾಳುಬಿದ್ದ ಎಪಿಎಂಸಿ ಕಟ್ಟಡದ ಹಸ್ತಾಂತರದ ಬಗ್ಗೆ ಗೊಂದಲ ಉತ್ತರಗಳು ಸಿಕ್ಕಿವೆ. ಮಂಗಳೂರು ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಅವರನ್ನು ಸಂಪಕರ್ಿಸಿದಾಗ, ಅಶ್ವತ್ಥಪುರ ಸಂತೆಕಟ್ಟೆಯನ್ನು ನಿಮರ್ಿಸಿದ ತೆಂಕಮಿಜಾರು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ ಎಂಬ ಉತ್ತರ ಬಂದರೆ ಮಂಗಳೂರು ಎಪಿಎಂಸಿ ಕಚೇರಿಗೆ ದೂರವಾಣಿ ಕರೆ ಮುಖಾಂತರ ಕೇಳಿದಾಗಲೂ, ಹೆಚ್ಚಿನ ಎಲ್ಲ ಸಂತೆಕಟ್ಟೆಗಳನ್ನು ಕಟ್ಟಿದ ಕೆಲವೇ ದಿನಗಳಲ್ಲಿ ಹಸ್ತಾಂತರಿಸಿದ್ದೇವೆ ಎಂಬ ಉತ್ತರ ಬಂದಿದೆ. ಈ ಬಗ್ಗೆ ತೆಂಕಮಿಜಾರು ಪಂಚಾಯಿತಿಯವರಲ್ಲಿ ಕೇಳಿದರೆ, ಸವರ್ೇ ನಂಬರ್ 213ರಲ್ಲಿ ಎಪಿಎಂಸಿ ಹೆಸರಿನಲ್ಲಿರುವ ಸಂತೆಕಟ್ಟೆ ಕಟ್ಟಡದಲ್ಲಿ ಪಂಚಾಯಿತಿ ಸುಪದರ್ಿಗೆ ವಹಿಸಲು ಗ್ರಾಮಸಭೆಯಲ್ಲಿ ನಿರ್ಣಯಿಸಿ 2012ರಲ್ಲಿ ಎಪಿಎಂಸಿಗೆ ಮನವಿ ಸಲ್ಲಿಸಲಾಗಿದೆ. ಸಂತೆಕಟ್ಟೆಯನ್ನು ಲಾಭದಾಯಕವಾಗಿ ವಾಣಿಜ್ಯ ಉದ್ದೇಶಗಳಿಗೆ ಬಳಸಬಹುದೇ ಎನ್ನುವ ಬಗ್ಗೆ ಕೋರಲಾಗಿದೆ. ಎಪಿಎಂಸಿಯಿಂದ ಉತ್ತರ ಬಂದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಪಿಎಂಸಿ ಮಾರ್ಗಸೂಚಿ ಪ್ರಕಾರ ಸಂತೆಕಟ್ಟೆಯನ್ನು ಹೇಗೆ ಲಾಭದಾಯಕವಾಗಿಸಿ ಮರುಜೀವ ನೀಡಬಹುದು ಎನ್ನುವುದರ ಮೇಲೆ ಕಟ್ಟಡಕ್ಕೆ ಮರುಜೀವ ಸಿಗಬಹುದೇ ಎಂಬುದು ನಿರ್ಧರಿಸಬಹುದಾಗಿದೆ. ಒಂದು ವೇಳೆ ಪಂಚಾಯಿತಿಯವರ ಸುಪದರ್ಿಗೆ ಇದು ಬಂದು ವಾಣಿಜ್ಯ ಉದ್ದೇಶಕ್ಕಾಗಿ ಬಳಸಬಹುದಾಗಿದ್ದರೆ, ಕಾನೂನಿನ ತೊಡಕುಗಳ ಬಗ್ಗೆ ಗಮನಹರಿಸಿ ಕಾರ್ಯಪ್ರವೃತ್ತರಾಗಬೇಕಾಗಿದೆ. ಗೊಂದಲಗಳು ದೂರವಾಗಿ ಪಾಳುಬಿದ್ದ ಕಟ್ಟಡಕ್ಕೆ ಮರುಜೀವ ಬರಲಿ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.


